ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಇತಿಹಾಸ ಪ್ರಸಿದ್ಧ ವೀರಭದ್ರಸ್ವಾಮಿ ದೇವಾಲಯ ದಯದಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ನಂದಗುಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಹನುಮಂತಪುರದ ಚನ್ನಕೃಷ್ಣ, ನಂದಕುಮಾರ್, ಗಂಗರಾಜು, ಅರಕೆರೆ ಗ್ರಾಮದ ಲೋಕೇಶ್ ಬಂಧಿತ ಆರೋಪಿಗಳು.
ಆಗಸ್ಟ್ ಒಂದರಂದು ವೀರಭದ್ರಸ್ವಾಮಿ ದೇವಾಲಯದ ಕಿಟಕಿ ಮುರಿದು ಒಳ ಪ್ರವೇಶಿಸಿ ದೇವಾಲಯದ ಹುಂಡಿ ಹಣ 4 ಲಕ್ಷ ಹಾಗೂ ಕಚೇರಿಯ ಬೀರುವಿನಲ್ಲಿದ್ದ 54 ಸಾವಿರ ರೂಗಳನ್ನು ಕಳವು ಮಾಡಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ನಂದಗುಡಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದು 1,38,000 ನಗದು ಸೇರಿದಂತೆ ಕೃತ್ಯಕ್ಕೆ ಬಳಸಲಾದ ಮೋಟರ್ ಸೈಕಲ್, ಕಾರು ,ಸುತ್ತಿಗೆ, ಕಬ್ಬಿಣ ಕತ್ತರಿಸುವ ಕತ್ತರಿ ಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿವೈಎಸ್ಪಿ ಉಮಾಶಂಕರ್ ತಿಳಿಸಿದ್ದಾರೆ.. ವೃತ್ತನಿರೀಕ್ಷಕ ಸಿಪಿಐ ರಂಗಸ್ವಾಮಿ ತಂಡ ರಚನೆ ಮಾಡಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ..
ಪೊಲೀಸ್ ಅಧೀಕ್ಷಕ ರಿಂದ ಪ್ರಶಂಸೆ: ಕಳ್ಳತನ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದ ಡಿವೈಎಸ್ಪಿ ಉಮಾಶಂಕರ್, ಸಿಪಿಐ ರಂಗಸ್ವಾಮಿ, ಪಿಎಸ್ಐ ಶಂಕರಪ್ಪ, ಸಿಬ್ಬಂದಿಗಳಾದ ಗಂಗ ಬಸಯ್ಯ, ಮಾಂತೇಶ್ ಬಿರಾದರ್, ಯತುಂ ಭಾಷಾ, ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೋನ ವಂಶಿ ಕೃಷ್ಣ ಅವರು ಅಭಿನಂದಿಸಿದ್ದಾರೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,