ಜಿಯೋ ಮುಂಬೈ ಕಂಪನಿಯಿಂದ ಕರೆ ಮಾಡುತ್ತಿರುವುದಾಗಿ ಹೇಳಿ ಮೊಬೈಲ್ ಟವರ್ ಅಳವಡಿಸುತ್ತೇವೆ ಅಂತಾ ರೂ 2,20,000/-ಆನ್ ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿದ ಬಗ್ಗೆ ಸಿಇಎನ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಭೇದಿಸಿದ್ದು, ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ, ಅವನಿಂದ ರೂ. 2,20,000/- ಹಣ ವಶಪಡಿಸಿಕೊಂಡು ಪ್ರಕರಣದ ತನಿಖೆಯನ್ನು ಮುಂದುವರಿಸಿದೆ.
Gadag District Police
ಗದಗ ಜಿಲ್ಲಾ ಪೊಲೀಸರು ಯಶಸ್ವಿ ಕಾರ್ಯಾಚರಣೆ
ಗದಗ ಶಹರ ಠಾಣಾ ವ್ಯಾಪ್ತಿಯ ಹನುಮಾನ ನಗರದಲ್ಲಿ ನಡೆದಿದ್ದ ಬೈಕ್ ಕಳ್ಳತನ ಪ್ರಕರಣವನ್ನು ಭೇದಿಸಿದ್ದು, ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ, ಅವನಿಂದ ರೂ. 40,000/- ಮೌಲ್ಯದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಪ್ರಕರಣದ ತನಿಖೆಯನ್ನು ಮುಂದುವರಿಸಿದೆ. ಪ್ರಕರಣದ ಪತ್ತೆ ಕುರಿತು ಶ್ರಮಿಸಿದ ಅಧಿಕಾರಿ ವ ಸಿಬ್ಬಂದಿಗಳನ್ನು ಪ್ರಶಂಸಿಸಲಾಗಿದೆ.
ಗದಗ ಜಿಲ್ಲಾ ಸಂಚಾರ ಪೊಲೀಸರಿಗೆ ಧನ್ಯವಾದಗಳು
ಚಿಂತಾಮಣಿ ಅಸ್ಪತ್ರೆ ಬಳಿ ಒಬ್ಬ ವಯೋ ವೃದ್ಧನಿಗೆ ಯುಕನೊಬ್ಬ ತನ್ನ ಬೈಕ ಡಿಕ್ಕಿಪಡಿಸಿ ಗಾಯ ಮಾಡಿದ್ದು, ಕಿಂಚಿತ್ತು ಉಪಚಾರ ವ ಚಿಕಿತ್ಸೆ ಕೊಡಿಸದೇ ಹೊರಟು ಹೋಗಿದ್ದು, ಕರ್ತವ್ಯದಲ್ಲಿದ್ದ ಟ್ರಾಫಿಕ ಪೊಲೀಸ್ ಮಂಜು ಅಸೂಟಿ ಅವರು ಆ ವೃದನಿಗೆ ಪ್ರಥಮ ಚಿಕಿತ್ಸೆ ನಡೆಸಿ ನಂತರ ತಮ್ಮ ವಾಹನದಲ್ಲೇ ಅವರ ಮನೆಗೇ ಬಿಟ್ಟು ಬಂದಿದ್ದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.
ಗದಗ ಜಿಲ್ಲಾ ಪೊಲೀಸರಿಂದ ನೆರೆಪೀಡಿತ ಪ್ರದೇಶಗಳನ್ನು ವೀಕ್ಷಿಸಲಾಯಿತು
ಪ್ರವಾಹ ಪರಿಸ್ಥಿತಿ ಅವಲೋಕಿಸುವ ಕುರಿತು ರೋಣ ತಾಲೂಕು ಯಾವಗಲ್ ನರಗುಂದ ತಾಲ್ಲೂಕು ಕೊಣ್ಣೂರು ಮತ್ತು ಬೆಳ್ಳೇರಿ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿ ನೆರೆಪೀಡಿತ ಪ್ರದೇಶಗಳ ವೀಕ್ಷಣೆ. ಈ ಸಂಬಂಧಿತ ಸಭೆಯಲ್ಲಿ ಭಾಗವಹಿಸಲಾಯಿತು. ನೆರೆಪೀಡಿತ ಗ್ರಾಮಗಳ ಜನರಿಗೆ ಜಿಲ್ಲಾಡಳಿತದ ನಿರ್ದೇಶನಗಳನ್ನು ಪಾಲಿಸುವಂತೆ & ಸೂಕ್ತ ಮುನ್ನೆಚ್ಚರಿಕೆಯಿಂದ ಇರುವಂತೆಯೂ ಸೂಚನೆಗಳನ್ನು ನೀಡಲಾಯಿತು. ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ, ಜೆ .ಜಾನ್ ಪ್ರೇಮ್
ಗದಗ ಜಿಲ್ಲಾ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ
ಬೆಟಗೇರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸ್ವತ್ತಿನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು ಎರಡು ಜನ ಅಪರಾಧಿಗಳನ್ನು ದಸ್ತಗಿರಿ ಮಾಡಿ ಅವರಿಂದ 50 ಗ್ರಾಂ ಬಂಗಾರ ಹಾಗೂ 500 ಗ್ರಾಂ ಬೆಳ್ಳಿಯ ಆಭರಣಗಳು & ಒಂದು ಬೈಕನ್ನು ವಶಪಡಿಸಿಕೊಂಡಿದ್ದು, ಅಂ.ಕಿ ರೂ. 2,35,610/-. ಪ್ರಕರಣದ ತನಿಖೆ ಮುಂದುವರೆದಿದೆ. ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ, ಜೆ .ಜಾನ್ ಪ್ರೇಮ್
ಗದಗ ಜಿಲ್ಲಾ ಪೊಲೀಸ್ ವತಿಯಿಂದ ಕಾರ್ಯಕ್ರಮ
ನರಗುಂದ ಪೊಲೀಸ್ ಠಾಣೆಯ ಆವರಣದಲ್ಲಿ ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸುವ ಕುರಿತು ಜನಸಂಪರ್ಕ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಕಾಲಕ್ಕೆ ಸಾರ್ವಜನಿಕರು ತಮ್ಮ ಕುಂದುಕೊರತೆ ಮತ್ತು ಅಹವಾಲುಗಳನ್ನು ಇಲಾಖೆಯ ಗಮನಕ್ಕೆ ತಂದಿದ್ದು, ಇಲಾಖೆಯು ಸೂಕ್ತರೀತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಲಾಗಿದೆ ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ, ಜೆ .ಜಾನ್ ಪ್ರೇಮ್
ಗದಗ ಪೊಲೀಸರಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮ
ಜನವರಿ 18ರಿಂದ ಫೆಬ್ರವರಿ 17ರವರೆಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ ಆಚರಿಸಲಾಗುತ್ತಿದ್ದು, ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸುವಂತೆ ಸಂಚಾರ ಪೊಲೀಸರಿಗೆ ಉನ್ನತ ಅಧಿಕಾರಿಗಳು ಸೂಚನೆ ನೀಡಿದ್ದಾರೆ.ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಗದಗ ಸಂಚಾರ ಠಾಣಾ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಜಾತಾ ಮೂಲಕ ತಿಳುವಳಿಕೆ ಅಭಿಯಾನವನ್ನು ನಡೆಸಿದ್ದು, ಈ ಕಾಲಕ್ಕೆ ವಾಹನಗಳಿಗೆ ರಿಫ್ಲೆಕ್ಟರ್ ಅಳವಡಿಸುವ ಮೂಲಕ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ […]
ಗದಗ ಸಂಚಾರ ಠಾಣಾ ವ್ಯಾಪ್ತಿಯಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮ
ಜನವರಿ 18ರಿಂದ ಫೆಬ್ರವರಿ 17ರವರೆಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ ಆಚರಿಸಲಾಗುತ್ತಿದ್ದು, ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸುವಂತೆ ಸಂಚಾರ ಪೊಲೀಸರಿಗೆ ಉನ್ನತ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಗದಗ ಸಂಚಾರ ಠಾಣಾ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಜಾತಾ ಮೂಲಕ ತಿಳುವಳಿಕೆ ಅಭಿಯಾನವನ್ನು ನಡೆಸಿದ್ದು, ಈ ಕಾಲಕ್ಕೆ ವಾಹನಗಳಿಗೆ ರಿಫ್ಲೆಕ್ಟರ್ ಅಳವಡಿಸುವ ಮೂಲಕ ಸಾರ್ವಜನಿಕರಿಗೆ ರಸ್ತೆ […]
ಗದಗ ಪೊಲೀಸ್ ವತಿಯಿಂದ ,ಶ್ರೀ .ಡಿ ಎಂ ಮ್ಯಾಗೇರಿ ಎಎಸ್ಐ ಬೆರಳು ಮುದ್ರೆ ಘಟಕ ಡಿಪಿ ಓ ಗದಗ್ ರವರೆಗೆ ಶುಭಾಶಯಗಳು
ಶ್ರೀ ಡಿ ಎಂ ಮ್ಯಾಗೇರಿ ಎಎಸ್ಐ ಬೆರಳು ಮುದ್ರೆ ಘಟಕ ಡಿಪಿ ಓ ಗದಗ್ ರವರು 2019ನೇಯ ಸಾಲಿನ ಮಾನ್ಯ ರಾಷ್ಟ್ರಪತಿಗಳ ಪದಕಕ್ಕೆ ಭಾಜನರಾಗಿರುತ್ತಾರೆ. ಅವರ ಕರ್ತವ್ಯನಿಷ್ಠೆ ಮತ್ತು ಶ್ರದ್ಧೆಗೆ ತಕ್ಕ ಪ್ರತಿಫಲ ಇದಾಗಿದ್ದು, ಗದಗ ಜಿಲ್ಲಾ ಪೊಲೀಸ್ ಘಟಕವು ಈ ಸಂದರ್ಭದಲ್ಲಿ ಅವರಿಗೆ ಅಭಿನಂದಿಸಲು ಹರ್ಷಿಸುತ್ತದೆ.