ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಇತಿಹಾಸ ಪ್ರಸಿದ್ಧ ವೀರಭದ್ರಸ್ವಾಮಿ ದೇವಾಲಯ ದಯದಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ನಂದಗುಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಹನುಮಂತಪುರದ ಚನ್ನಕೃಷ್ಣ, ನಂದಕುಮಾರ್, ಗಂಗರಾಜು, ಅರಕೆರೆ ಗ್ರಾಮದ ಲೋಕೇಶ್ ಬಂಧಿತ ಆರೋಪಿಗಳು.ಆಗಸ್ಟ್ ಒಂದರಂದು ವೀರಭದ್ರಸ್ವಾಮಿ ದೇವಾಲಯದ ಕಿಟಕಿ ಮುರಿದು ಒಳ ಪ್ರವೇಶಿಸಿ ದೇವಾಲಯದ ಹುಂಡಿ ಹಣ 4 ಲಕ್ಷ ಹಾಗೂ ಕಚೇರಿಯ ಬೀರುವಿನಲ್ಲಿದ್ದ 54 ಸಾವಿರ ರೂಗಳನ್ನು ಕಳವು ಮಾಡಲಾಗಿದೆ ಎಂದು ದೇವಾಲಯದ ಆಡಳಿತ […]