ಜಿಲ್ಲಾ ಅಭಿಯೋಜನಾ ಮತ್ತು ಜಿಲ್ಲಾ ಪೊಲೀಸ್ ವತಿಯಿಂದ ಇಂದು ಕಲಂ 293 CRPC ಅಡಿಯಲ್ಲಿ ನೀಡಲಾದ ತಜ್ಞ ವರದಿಗಳನ್ನು ನ್ಯಾಯಾಲಯಕ್ಕೆ ಹಾಜರ್ಪಡಿಸಿ ಸಾಕ್ಷ್ಯ ನೀಡುವಾಗ ಮತ್ತು ಕೋರ್ಟ್ ನಲ್ಲಿ ವಿಡಿಯೋ ಸಂವಾದ ನಡೆಸುವಾಗ ಅನುಸರಿಸಬೇಕಾದ ನಿಯಮಗಳ ಕುರಿತಾದ ಒಂದು ದಿನದ ಕಾರ್ಯಾಗಾರವನ್ನು ನಡೆಸಲಾಯಿತು. ಗೌರವಾನ್ವಿತ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಆದ ಶ್ರೀ.ರಘುನಾಥ್ ಎಂ.ಎಲ್ ರವರು, ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ […]
Mysuru District Police
ಮೈಸೂರು ಜಿಲ್ಲಾ ಪೊಲೀಸರಿಂದ ರಸ್ತೆ ಸುರಕ್ಷತಾ ಕಾರ್ಯಕ್ರಮ
ಇಲವಾಲ ಪೊಲೀಸ್ ಠಾಣೆಯಲ್ಲಿಂದು ರಸ್ತೆ ಸುರಕ್ಷತಾ ಕಾರ್ಯಕ್ರಮಕ್ಕೆ ಶಾಸಕರಾದ ಶ್ರೀ.ಜಿ.ಟಿ. ದೇವೇಗೌಡರವರು ಚಾಲನೆ ನೀಡಿದರು. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಚೇತನ್.ಆರ್ ಐಪಿಎಸ್ ರವರು ಸಹ ಹಾಜರಿದ್ದು ಸಾರ್ವಜನಿಕರ ಸುರಕ್ಷತೆಗಾಗಿ ಸಂಚಾರಿ ನಿಯಮಗಳಿದ್ದು ಕಡ್ಡಾಯವಾಗಿ ಪಾಲಿಸುವುದರಿಂದ ಅಪಘಾತಗಳನ್ನು ನಿಯಂತ್ರಿಸಿ ಮತ್ತು ಅಪಘಾತ ಸಮಯದಲ್ಲಿ ಜೀವವನ್ನು ಉಳಿಸಬಹುದೆಂದು ತಿಳಿಸಿದರು.
ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ
ಜಿಲ್ಲಾ ಪೊಲೀಸ್ ಕಛೇರಿಯಲ್ಲಿಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಖ್ಯಾತ ರಂಗಭೂಮಿ ಕಲಾವಿದರಾದ ಶ್ರೀಮತಿ.ಸರೋಜ ಹೆಗಡೆ ರವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಮುಖ್ಯ ಅತಿಥಿಗಳಾಗಿ ಡಾ.ಅನನ್ಯ ಚೇತನ್ ರವರು , ಮಣಿಪಾಲ್ ಆಸ್ಪತ್ರೆ ಸ್ತ್ರೀ & ಪ್ರಸೂತಿ ತಜ್ಞೆ ಡಾ. ಮಧುರಾ ಪಾಟಕ್ ರವರು ಭಾಗವಹಿಸಿದ್ದರು. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಚೇತನ್.ಆರ್.ಐಪಿಎಸ್ ರವರು, ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ. ಆರ್.ಶಿವಕುಮಾರ್ ರವರು ಹಾಗೂ ಜಿಲ್ಲೆಯ ಮಹಿಳಾ ಅಧಿಕಾರಿ […]
ಲಾರಿ ಚಾಲಕನನ್ನು ದರೋಡೆ ಮಾಡಿದ್ದ ಆರೋಪಿಗಳನ್ನು ಬಂಧಿಸಿದ ಬಿಳಿಕೆರೆ ಪೊಲೀಸರು-ಮೈಸೂರು ಜಿಲ್ಲಾ ಪೋಲಿಸ್
ದಿನಾಂಕ.06.01.2022 ರಂದು ರಾತ್ರಿ 10.45 ಗಂಟೆ ಸಮಯದಲ್ಲಿ ಬಿಳಿಕೆರೆ ಮಾರ್ಗವಾಗಿ ಕೇರಳದ ಕೂತುಪುರಂಗೆ ತುಮಕೂರಿನ ಸನ್ ವೀಕ್ ಕಂಪೆನಿಯಿಂದ ಕಬ್ಬಿಣವನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಯ ಚಾಲಕನನ್ನು ಟಯೋಟಾ ಇಟಿಯೋಸ್ ಕಾರಿನಲ್ಲಿ ಬಂದ 05 ಜನ ಅಪರಿಚಿತರು, ಲಾರಿ ಚಾಲಕನ ಬಳಿಯಿದ್ದ 10ಸಾವಿರ ನಗದು ಹಣ, ಲಾರಿ ಕೀ ಮತ್ತು ಒಂದು ರಿಯಲ್ ಮೀ ಮೊಬೈಲ್ ಫೋನ್ ಅನ್ನು ಕಿತ್ತುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಬಿಳಿಕೆರೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣವನ್ನು […]
ಮೈಸೂರು ಜಿಲ್ಲಾ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ
ಕವಲಂದೆ ಪೊಲೀಸರ ಕಾರ್ಯಾಚರಣೆ 12 ಪ್ರತ್ಯೇಕ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಗಳ ಬಂಧನ ಸುಮಾರು ಐದು ಲಕ್ಷ ರೂ ಮೌಲ್ಯದ ವಿವಿಧ ಬೈಕ್ ಮತ್ತು ಚಿನ್ನ ವಶ. ಹಾಗೂ ಕೋವಿಡ್ 19 ನಿಯಮಗಳನ್ನು ಮೀರಿ ಬೈಕ್ ರೇಸಿಂಗ್ ವ಼ೀಲಿಂಗ್ ಮಾಡುತ್ತಿದ್ದವರ ಮೇಲೆ ನಂಜನಗೂಡು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದರ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಚೇತನ್.ಆರ್.ಐಪಿಎಸ್ ರವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು . ಡಿಎಸ್ಪಿ ನಂಜನಗೂಡು ಶ್ರೀ.ಗೋವಿಂದರಾಜು ರವರು, ಸಿಪಿಐ ನಂಜನಗೂಡು […]
ಮೈಸೂರು ಜಿಲ್ಲಾ ಪೊಲೀಸರಿಂದ ನಂಜನಗೂಡು ವಿವಿಧ ಸ್ಥಳಗಳಲ್ಲಿ ಭೇಟಿ ನೀಡಿ ಪರಿಶೀಲನೆ
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಚೇತನ್.ಆರ್.ಐಪಿಎಸ್ ರವರಿಂದು ನಂಜನಗೂಡು ಪಟ್ಟಣದ ವಿವಿಧೆಡೆಗಳಲ್ಲಿ ಕಡೆ ಭೇಟಿ ನೀಡಿ ಪರಿಶೀಲಿಸಿದರು.ಇದೇ ವೇಳೆ ಪಟ್ಟಣದ ನಂಜನಗೂಡು ದೇವಸ್ಥಾನ ಬಳಿ ಪರಿಶೀಲಿಸಿದರು.ಇದೇ ವೇಳೆ ಸಂಚಾರಿ ನಿಯಮಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಸಂಚಾರಿ ದೀಪಗಳ ಅಳವಡಿಕೆಗೆ ಸಂಬಂಧಿಸಿದಂತೆ ಡಿಎಸ್ಪಿ ನಂಜನಗೂಡು ಮತ್ತು ಸಿಪಿಐ ನಂಜನಗೂಡು ವೃತ್ತ ರವರಿಗೆ ಸೂಚನೆಗಳನ್ನು ನೀಡಿದರು.
“ಕನ್ನಡಕ್ಕಾಗಿ ನಾವು”-ಮೈಸೂರು ನಗರ ಪೊಲೀಸ್
ಕರ್ನಾಟಕ ಸರ್ಕಾರವು ಕನ್ನಡ ರಾಜ್ಯೋತ್ಸವದ ಅಂಗವಾಗಿ “ಕನ್ನಡಕ್ಕಾಗಿ ನಾವು ” ಎಂಬ ವಿಶೇಷ ಅಭಿಯಾನವನ್ನು ಆಯೋಜಿಸಿದ್ದು, ದಿನಾಂಕ: 28.10.2021ರಂದು ಬೆಳಗ್ಗೆ 11.00 ಗಂಟೆಗೆ ರಾಜ್ಯಾದ್ಯಂತ ಲಕ್ಷ ಕಂಠಗಳ ಕನ್ನಡ ಗೀತ ಗಾಯನ ಕಾರ್ಯಕ್ರಮವನ್ನು ನಡೆಸಲು ಆದೇಶಿಸಿದ್ದು ಇದರಂತೆ ಮೈಸೂರು ನಗರ ಪೊಲೀಸ್ ಆಯುಕ್ತರ ಕಛೇರಿಯಲ್ಲಿ ಪೊಲೀಸ್ ಆಯುಕ್ತ ರಾದ ಡಾ: ಚಂದ್ರಗುಪ್ತ ಐ.ಪಿ.ಎಸ್. ರವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
ಮೈಸೂರು ಜಿಲ್ಲಾ ಪೊಲೀಸ್- ಠಾಣಾ ಪರಿವೀಕ್ಷಣೆ
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಚೇತನ್.ಆರ್.ಐಪಿಎಸ್ ರವರಿಂದು ಹುಣಸೂರು ಪಟ್ಟಣ ಪೊಲೀಸ್ ಠಾಣಾ ಪರಿವೀಕ್ಷಣೆ ನಡೆಸಿದರು. ಇದೇ ವೇಳೆ ಠಾಣಾ ಸಿಬ್ಬಂದಿಗಳ ಕುಂದುಕೊರತೆಗಳನ್ನು ಆಲಿಸಿ, ನೂತನ ಗಸ್ತು ಪದ್ದತಿಯನ್ನು ಪರಿಣಾಮಕಾರಿಯಾಗಿ ಬಳಸಿ ಅಪರಾಧ ತಡೆ ಮತ್ತು ಅಪರಾಧಿಗಳ ಪತ್ತೆ ಬಗ್ಗೆ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳಲು ಸೂಚಿಸಿದರು.
ಪೊಲೀಸ್ ಹುತಾತ್ಮರ ದಿನಾಚರಣೆ -ಮೈಸೂರು ಜಿಲ್ಲಾ ಪೊಲೀಸ್
ಇಂದು ನಡೆದ ಪೊಲೀಸ್ ಹುತಾತ್ಮರ ದಿನಚಾರಣೆ ಅಂಗವಾಗಿ ಜಿಲ್ಲಾ ಪೊಲೀಸ್ ಕಛೇರಿಯ ಪಕ್ಕದ ಹುತಾತ್ಮರ ಉದ್ಯಾನವನದಲ್ಲಿ ಕರ್ತವ್ಯದಲ್ಲಿ ಮಡಿದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಗೌರವ ಸೂಚಿಸಿ ಹೂಗುಚ್ಚ ಇರಿಸಿ ಸ್ಮರಿಸಲಾಯಿತು. ಸಮಾರಂಭದ ಮುಖ್ಯ ಅತಿಥಿಗಳಾದ ಗೌರವಾನ್ವಿತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ.ಎಂ.ಎಲ್.ರಘುನಾಥ್ ರವರು , ದಕ್ಷಿಣ ವಲಯ ಐಜಿಪಿ ರವರಾದ ಶ್ರೀ.ಪ್ರವೀಣ್ ಮಧುಕರ್ ಪವಾರ್,ಐಪಿಎಸ್, ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ,ಐಪಿಎಸ್, ಕೆಪಿಎ ನಿರ್ದೇಶಕರಾದ ಶ್ರೀ.ವಿಪುಲ್ ಕುಮಾರ್,ಐಪಿಎಸ್ ರವರು, ಜಿಲ್ಲಾ […]
ಮೈಸೂರು ಎಸ್ಪಿ ಅಣೆಕಟ್ಟುಗಳನ್ನು ಪರಿಶೀಲಿಸಿದರು
ಕೇರಳಮಳೆಗೆತತ್ತರಿಸುತ್ತದೆ. ಭೂಕುಸಿತ-ಪ್ರವಾಹಪರಿಸ್ಥಿತಿಯಿಂದಾಗಿಶನಿವಾರದಿಂದಇದುವರೆಗೆಸುಮಾರು 24 ಮಂದಿಜೀವಕಳೆದುಕೊಂಡಿದ್ದಾರೆ. ಭಾನುವಾರಮಧ್ಯಾಹ್ನದಹೊತ್ತಿಗೆಮಳೆಸ್ವಲ್ಪಕಡಿಮೆಯಾಗಿದ್ದರೂಭೂಕುಸಿತದಅಪಾಯಇರುವುದರಿಂದಸ್ಥಳೀಯಆಡಳಿತಜನರಿಗೆಎಚ್ಚರಿಕೆನೀಡಿದೆ. ಇಂದು 11 ಜಿಲ್ಲೆಗಳಲ್ಲಿಭಾರತೀಯಹವಾಮಾನಇಲಾಖೆಹಳದಿಅಲರ್ಟ್ (Yellow Alert) ಘೋಷಿಸಿದೆ. ಹಾಗೇ, ಟ್ಟಾಯಂಮತ್ತುಇಡುಕ್ಕಿಜಿಲ್ಲೆಗಳಲ್ಲಿಧಾರಾಕಾರಮಳೆಯಾಗಲು, ಮೇಘಸ್ಫೋಟವಾಗಿದ್ದೂಒಂದುಕಾರಣಎಂದುಹೇಳಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಚೇತನ್.ಆರ್.ಐಪಿಎಸ್ ರವರಿಂದು ಕೌಲಂದೆ ಪೊಲೀಸ್ ಠಾಣಾ ಭೇಟಿ ನೀಡಿ ನಂತರ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಭೇಟಿ ಕೊಟ್ಟು ಸರಗೂರು ಠಾಣಾ ಸರಹದ್ದು ನುಗು ಅಣೆಕಟ್ಟಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.