ದಿನಾಂಕ 09-04-2022 ರಂದು ಉತ್ತರವ ಕನ್ನಡ ಜಿಲ್ಲಾ ಅಭಿಯೋಜನೆ ಇಲಾಖೆ ಮತ್ತು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಜಿಲ್ಲಾ ಪೊಲೀಸ್ ಕಛೇರಿಯ ಸಭಾಭವನದಲ್ಲಿ.. ದಂಡ ಪ್ರಕ್ರಿಯಾ ಸಂಹಿತೆ ಕಲಂ. 293 ಅಡಿಯಲ್ಲಿ ವಿಧಿ ವಿಜ್ಯಾನ ಪ್ರಯೋಗಾಲಯದ ವರದಿಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಮತ್ತು ವಿಡಿಯೋ ಕಾನ್ಪರೆನ್ಸ್ ಮೂಲಕ ಸಾಕ್ಷೀದಾರರ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಿಕೊಳ್ಳುವ ಬಗ್ಗೆ ಜರುಗಿದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.. ತರಬೇತಿ ಕಾರ್ಯಾಗಾರವನ್ನುಶ್ರೀ ಸಿ.ರಾಜಶೇಖರ್ ಮಾನ್ಯ ನ್ಯಾಯಾಧೀಶರು ಪ್ರಧಾನ & ಜಿಲ್ಲಾ ಸತ್ರ ನ್ಯಾಯಾಲಯ ಉ.ಕ ಕಾರವಾರ ರವರು ಉದ್ಘಾಟಿಸಿದರು..ಡಾ|| ಸುಮನ್ ಪೆನ್ನೇಕರ್ ಮಾನ್ಯ ಪೊಲೀಸ್ ಅಧಿಕ್ಷಕರು ಉತ್ತರ ಕನ್ನಡ ಜಿಲ್ಲೆ ಕಾರವಾರ ರವರು ಕಾರ್ಯಾಗಾರದ ಅದ್ಯಕ್ಷತೆಯನ್ನು ವಹಿಸಿದ್ದರು ಅಥಿತಿಗಳಾಗಿ : ಶ್ರೀ ಏನ್.ಎಮ್. ರಮೇಶ ಮಾನ್ಯ ಮುಖ್ಯ ನ್ಯಾಯಿಕ ದಂಢಾಧಿಕಾರಿಗಳು.. ಸಿ.ಜೆ.ಎಮ್. ನ್ಯಾಯಾಲಯ ಕಾರವಾರ ರವರು ಉಪನ್ಯಾಸಕರಾಗಿ ಪಾಲ್ಗೊಂಡಿದ್ದರು ಅತ್ಯುತ್ತಮವಾಗಿ ವಿಷಯವನ್ನು ಮನದಟ್ಟು ಮಾಡಿದರು. ಶ್ರೀಮತಿ ತನುಜಾ ಹೊಸಪಟ್ಟಣ ಸರಕಾರಿ ಅಭಿಯೋಜಕರು ಜಿಲ್ಲಾ & ಸತ್ರ ನ್ಯಾಯಾಲಯ ಕಾರವಾರ ಇವರು ಕಾರ್ಯಕ್ರಮವನ್ನು ಸಂಯೋಜಿಸಿದಲ್ಲದೇ ಕಾರ್ಯಕ್ರಮವು ಸುಗಮವಾಗಿ ಮತ್ತು ಯಶಸ್ವಿ ಯಾಗಿ ಮುಗಿಯುವಲ್ಲಿ ಮುಖ್ಯ ಪಾತ್ರ ವಹಿಸಿದರು ಶ್ರೀ ರಾಜೇಶ ಎಮ್ ಮಳಗಿಕರ್ ಸರಕಾರಿ ಅಭಿಯೋಜಕರು ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಶಿರಸಿ ರವರು ಭಾಗವಹಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿ ವಂದಿಸಿದರು. ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಅಭಿಯೋಜಕರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು ಜಿಲ್ಲೆಯ ಎಲ್ಲಾ ನ್ಯಾಯಾಲಯದ 45 ಸರಕಾರಿ ಅಭಿಯೋಜಕರು ಹಾಗೂ 32 ಪೊಲೀಸ್ ಅಧಿಕಾರಿ /ಸಿಬ್ಬಂದಿಗಳು ತರಬೇತಿಯ ಸದುಪಯೋಗ ಪಡೆದುಕೊಂಡಿರುತ್ತಾರೆ.