ದಿನಾಂಕ 30-06-2022 ರಂದು ಅಂಕೋಲಾ ತಾಲೂಕಿನ NH 63 ರಸ್ತೆ ಹೊಸಕಂಬಿ ಕ್ರಾಸ್ ಹತ್ತಿರ ಒಬ್ಬ ವ್ಯಕ್ತಿಯು ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ ಡಾ || ಸುಮನ ಪೇನ್ನೇಕರ ಮಾನ್ಯ ಪೊಲೀಸ್ ಅಧೀಕ್ಷಕರು ಕಾರವಾರ ರವರಿಗೆ ಮಾಹಿತಿ ಬಂದ ಮೇರೆಗೆ ಮಾನ್ಯ ಎಸ್.ಪಿ. ಕಾರವಾರ ಹಾಗೂ ಶ್ರೀ ಎಸ್ ಬದರಿನಾಥ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು , ಕಾರವಾರ ರವರ ಮಾರ್ಗದರ್ಶನದಲ್ಲಿ ಜಿಲ್ಲಾ ವಿಶೇಷ ವಿಭಾಗದ ಶ್ರೀ ಪ್ರೇಮನಗೌಡ […]
karwar district police
ಮುಂಡಗೋಡ ತಾಲೂಕಿನ ಇಂದೂರು ಗ್ರಾಮದ ಮನೆಯೊಂದರಲ್ಲಿ ನಾಡ ಬಂದೂಕನ್ನು ಅಕ್ರಮವಾಗಿ ಇಟ್ಟುಕೊಂಡಿದ್ದ ಆರೋಪಿಯ ಬಂಧನ. ನಾಡಬಂದೂಕು ವಶ
ಮುಂಡಗೋಡ ತಾಲೂಕಿನ ಇಂದೂರು ಗ್ರಾಮದಲ್ಲಿ ಅನದಿಕೃತವಾಗಿ ಮನೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ ನಾಡ ಬಂದೂಕಿನ ಬಗ್ಗೆ ಡಾ || ಸುಮನ ಪೆನ್ನೇಕರ ಮಾನ್ಯ ಪೊಲೀಸ್ ಅಧೀಕ್ಷಕರು ಕಾರವಾರ ರವರಿಗೆ ಮಾಹಿತಿ ಬಂದ ಮೇರೆಗೆ ಎಸ್ ಪಿ ಕಾರವಾರ ಹಾಗೂ ಶ್ರೀ ಎಸ್ ಬದರಿನಾಥ ಮಾನ್ಯ ಹೆಚ್ಚುವರಿ ಪೊಲೀಸ ಅಧೀಕ್ಷಕರು, ಕಾರವಾರ ರವರ ಮಾರ್ಗದರ್ಶನದಲ್ಲಿ ಈ ಬಗ್ಗೆ ಒಂದು ವಿಶೇಷ ತಂಡವನ್ನು ರಚಿಸಿ ಈ ಕಾರ್ಯಾಚರಣೆಗೆ ಶ್ರೀ ಯಲ್ಲಾಲಿಂಗ ಕುನ್ನೂರು ಪಿ.ಎಸ್.ಐ.( ತನಿಖೆ […]
ಕಾರವಾರ ಪೊಲೀಸರು ಯಶಸ್ವಿ ಕಾರ್ಯಾಚರಣೆ ಗಾಂಜಾ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ
ದಿನಾಂಕ: 23-04-2022 ರಂದು 15-30 ಗಂಟೆಗೆ ಕಾರವಾರ ಶಹರ ಪೊಲೀಸ್ ಠಾಣಾ ಪಿ.ಎಸ್.ಐ.ಸಂತೋಷಕುಮಾರ ಎಮ್, ರವರಿಗೆ ಕಾರವಾರ ಅಜ್ಜಿ ಹೊಟೇಲ್ ಹಿಂಬದಿಗೆ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಗಾಂಜಾ ಮಾದಕ ವಸ್ತುವನ್ನು ಸಾಗಾಟ ಮಾಡಿಕೊಂಡು ಬಂದು ಮಾರಾಟ ಮಾಡುವ ತಯಾರಿಯಲ್ಲಿರುತ್ತಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಸುಮನ್ ಪೆನ್ನೇಕರ ಐ.ಪಿ.ಎಸ್, ರವರ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎಸ್. ಬದರಿನಾಥ ರವರ ಮತ್ತು ಪೊಲೀಸ್ […]
ಅಂತರರಾಜ್ಯ ಕಳ್ಳರ ಬಂಧನ ಲಕ್ಷಾಂತರ ಮೌಲ್ಯದ ಸ್ವತ್ತುಗಳು ವಶಕ್ಕೆ
ದಿನಾಂಶ:05-04-2022 ರಂದು ಫಿರ್ಯಾದಿ ಶ್ರೀ ನಾಗರಾಜ ಸುರೇಶ ಗಾಂವಕರ ಇವರು ಠಾಣೆಗೆ ಬಂದು ಚೆಂಡಿಯಾದಲ್ಲಿ ತಾವು ಅರ್ಚಕರಾಗಿರುವ ಶ್ರೀ ನವ ಚಂಡಿಕಾ ದೇವಿ ದೇವಸ್ಥಾನದ ಪಕ್ಕದ ಬಾಗಿಲನ್ನು ಒಡೆದು ದೇವಸ್ಥಾನದ ಒಳಗೆ ಪ್ರವೇಶಿಸಿ ಒಳಗಡೆಯಿದ್ದ ದೇವಿಯ ಬೆಳ್ಳಿ, ಬಂಗಾರದ ಆಭರಣಗಳು, ಮತ್ತು ನಗದು ಹಣ, ಒಟ್ಟು ಸೇರಿ, ಸುಮಾರು 3,77,000/- ಮೌಲ್ಯದ ಸ್ವತ್ತು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಅಂತಾ ನೀಡಿದ ದೂರನ್ನು ಕಾರವಾರ ಗ್ರಾಮೀಣ ಪೊಲೀಸ್ […]
ಉತ್ತರಕನ್ನಡ ಜಿಲ್ಲಾ ಪೊಲೀಸರಿಂದ ಒಂದು ದಿನದ ತರಬೇತಿ ಕಾರ್ಯಕ್ರಮ
ದಿನಾಂಕ 09-04-2022 ರಂದು ಉತ್ತರವ ಕನ್ನಡ ಜಿಲ್ಲಾ ಅಭಿಯೋಜನೆ ಇಲಾಖೆ ಮತ್ತು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಜಿಲ್ಲಾ ಪೊಲೀಸ್ ಕಛೇರಿಯ ಸಭಾಭವನದಲ್ಲಿ.. ದಂಡ ಪ್ರಕ್ರಿಯಾ ಸಂಹಿತೆ ಕಲಂ. 293 ಅಡಿಯಲ್ಲಿ ವಿಧಿ ವಿಜ್ಯಾನ ಪ್ರಯೋಗಾಲಯದ ವರದಿಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಮತ್ತು ವಿಡಿಯೋ ಕಾನ್ಪರೆನ್ಸ್ ಮೂಲಕ ಸಾಕ್ಷೀದಾರರ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಿಕೊಳ್ಳುವ ಬಗ್ಗೆ ಜರುಗಿದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.. ತರಬೇತಿ ಕಾರ್ಯಾಗಾರವನ್ನುಶ್ರೀ ಸಿ.ರಾಜಶೇಖರ್ ಮಾನ್ಯ […]
ಉತ್ತರಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ” ಪೊಲೀಸ್ ದ್ವಜ” ದಿನಾಚರಣೆ
ಕಾರವಾರ – ಇಂದು ದಿನಾಂಕ 02/04/2022 ಉತ್ತರಕನ್ನಡ ಜಿಲ್ಲೆ ಕಾರವಾರ ಪೊಲೀಸ್ ಕವಾಯತು ಮೈದಾನ ದಲ್ಲಿ ಉತ್ತರಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ” ಪೊಲೀಸ್ ದ್ವಜ” ದಿನಾಚರಣೆ ಯನ್ನು ಆಚರಿಸಲಾಯಿತು. ಮಾನ್ಯ ಪೊಲೀಸ್ ಅಧಿಕ್ಷಕರು ಡಾ //ಸುಮನ್ ಪೆನ್ನೇಕರ್ ರವರು ಮತ್ತು ಮಾನ್ಯ ಅಪರ ಪೊಲೀಸ್ ಅಧಿಕ್ಷಕರು ಶ್ರೀ ಬದ್ರಿನಾಥ್ ಎಸ್. ರವರು ಹಾಜರಿದ್ದು, ಮುಖ್ಯ ಅತಿಥಿ ಗಳಾಗಿ ಶ್ರೀ ವಿನಾಯಕ್ ವಾಮನ್ ನಾಯ್ಕ್ ನಿವೃತ್ತ ಸಹಾಯಕ ಪೊಲೀಸ್ ನಿರೀಕ್ಷಕರವರು […]
ಕುಮಟಾ ಪೊಲೀಸ ಠಾಣೆ ವತಿಯಿಂದ ಯಶಸ್ವಿ ಕಾರ್ಯಾಚರಣೆ
ಕುಮಟಾ ಶಹರದ ಉಪ್ಪಾರಕೇರಿ 3 ನೇ ಕ್ರಾಸ್ನಲ್ಲಿರುವ ಫಿರ್ಯಾದುದಾರ ಶ್ರೀ ಕಿರಣಕುಮಾರ ಕಮಲಾಕರ ನಾಯ್ಕ ಎಂಬವರ ಬಾಡಿಗೆ ಮನೆಯ ಎದುರು ರಸ್ತೆಯ ಪಕ್ಕದಲ್ಲಿ ಇಟ್ಟಿದ್ದ 31 ಕೋಳಿ ಬಾಕ್ಸಗಳನ್ನು ದಿನಾಂಕ: 27/02/2022 ರಂದು ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ :09/03/2022 ರ ಬೆಳಗಿನ 11:00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಕುಮಟಾ ಪೊಲೀಸ ಠಾಣೆಯ ಅಪರಾಧ ಕ್ರಮಾಂಕ: 49/2022, ಕಲಂ: 379 ಐಪಿಸಿ […]
ಉತ್ತರ ಕನ್ನಡ ಜಿಲ್ಲಾ ಪೊಲೀಸರಿಂದ ಯೋಗ ತರಬೇತಿ ಕಾರ್ಯಕ್ರಮ
ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಆರೋಗ್ಯ ಮತ್ತು ಮಾನಸಿಕವಾಗಿ ಸದೃಢರನ್ನಾಗಿಸುವ ಹಿತದೃಷ್ಟಿಯಿಂದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಅಧಿಕಾರಿ/ಸಿಬ್ಬಂದಿಗಳಿಗೆ ದಿನಾಂಕ:18-02-2022 ರಿಂದ ದಿನಾಂಕ:08-03-2022 ರವರೆಗೆ ಯೋಗ ತರಭೇತಿಯನ್ನು ಹಮ್ಮಿಕೊಂಡು ಆಯುಷ ಇಲಾಖೆಯ ವೈದ್ಯರಾದ ಡಾ. ಪ್ರಕಾಶ ರವರು ಯೋಗಾಸನದ ಅನೇಕ ಬಂಗಿಗಳನ್ನು ಸಿಬ್ಬಂದಿಗಳಿಗೆ ತಿಳಿಸಿಕೊಟ್ಟು ಅದರಿಂದ ಮಾನವನ ಶರೀರಕ್ಕೆ ಆಗುವ ಉಪಯೋಗಗಳ ಬಗ್ಗೆ ಸಿಬ್ಬಂದಿಗಳಿಗೆ ತಿಳಿಸಿಕೊಟ್ಟಿದ್ದು, ಸಶಸ್ತ್ರ ಪಡೆಯ ಅಧಿಕಾರಿ ಸಿಬ್ಬಂದಿಗಳು ಅದರ ಸದುಪಯೋಗವನ್ನು ಪಡೆದುಕೊಂಡಿರುತ್ತಾರೆ. ಈ ದಿನ ದಿನಾಂಕ:09-03-2022 […]
ಅಂತರರಾಜ್ಯ ಎ.ಟಿ.ಎಮ್ವಂಚಕನ ಬಂಧನ ಪ್ರಕರಣ ಬೇಧಿಸಿದ ಅಂಕೋಲಾ ಪೋಲಿಸರು
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯ ಅಂಕೋಲಾ ಕೆ.ಸಿ ರಸ್ತೆಯಲ್ಲಿನ ಎಸ್.ಬಿ.ಐ ಬ್ಯಾಂಕ್ ಎ.ಟಿ.ಎಮ್ ದಲ್ಲಿ ದಿನಾಂಕ: 21-12-2021 ರಂದು ಮಧ್ಯಾಹ್ನ 12:30 ಗಂಟೆಯಿಂದ 01:00 ಗಂಟೆಯ ನಡುವಿನ ಅವಧಿಯಲ್ಲಿ ಹಣ ಡ್ರಾ ಮಾಡಲು ಹೋಗಿದ್ದ ಅಂಕೋಲಾ ಬೋಳೆ ನಿವಾಸಿ ಕಿಶೋರ ತಂದೆ ವಿಠ್ಠಲ್ ನಾಯಕ ರವರ ಮಗ ಕು॥ ವಿಜೇತ ಕಿಶೋರ ನಾಯಕ ಇತನಿಗೆ ವಂಚಿಸಿ ಇತನ ಕೈಯಲ್ಲಿದ್ದ ಎ.ಟಿ.ಎಮ್ ಕಾರ್ಡನ್ನು ಯಾರೋ ಅಪರಿಚಿತರು ವಂಚಿಸಿ […]
ಉತ್ತರಕನ್ನಡ ಜಿಲ್ಲಾ ಪೊಲೀಸರಿಂದ ಯೋಗಾ ತರಬೇತಿ ಕಾರ್ಯಕ್ರಮ
ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಕಾರವಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಹಿತದೃಷ್ಠಿಯಿಂದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ದಿನಾಂಕ 18/02/2022 ರಿಂದ 07 ದಿನಗಳ ಯೋಗ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ. ಇಂದು ನಡೆದ ಮೊದಲನೇ ದಿನದ ಯೋಗ ತರಬೇತಿಯಲ್ಲಿ ಜಿಲ್ಲಾ ಸಶಸ್ತ್ರ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳು ಭಾಗವಹಿಸಿದ್ದು, ಜಿಲ್ಲಾ ಆಯುಷ್ ಇಲಾಖೆಯ ಮೆಡಿಕಲ್ ಆಫೀಸರ್ರವರಾದ ಡಾ|| ಪ್ರಕಾಶ ರವರು ಅರೋಗ್ಯಕ್ಕೆ ಸಂಬಂದಿಸಿದ ಸೂಕ್ತ ಸಲಹೆ […]