ಶಿರ್ವಾ: ಪಿರ್ಯಾದಿದಾರರಾಧ ಅನಿತಾ(39), ಗಂಡ: ಮಾಲತೇಶ, ವಾಸ: ಶಾಂತಿಗುಡ್ಡೆ, ಕಳತ್ತೂರು ಗ್ರಾಮ, ಕಾಪು ಇವರ ಗಂಡ ಮಾಲತೇಶ ಎ.ಕೆ(42) ರವರು ಕಾಪು ತಾಲೂಕು ಶಿರ್ವ ಗ್ರಾಮದಲ್ಲಿರುವ ಗ್ಲಾಸ್ ಹೌಸ್ ಅಂಡ್ ಹಾರ್ಡ್ ವೇರ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಜಾಂಡೀಸ್ ಖಾಯಿಲೆಯಿಂದ ಬಳಲುತ್ತಿರುತ್ತಾರೆ. ಮಾಲತೇಶರವರು ದಿನಾಂಕ 25/04/2026 ರಂದು ಗ್ಲಾಸ್ ಹೌಸ್ ಅಂಡ್ ಹಾರ್ಡ್ ವೇರ್ ಅಂಗಡಿಗೆ ಕೆಲಸಕ್ಕೆ ಬಂದಿದ್ದು ಮದ್ಯಾಹ್ನ 1:45 ಗಂಟೆ ಸುಮಾರಿಗೆ ಗ್ಲಾಸ್ ಕಟ್ ಮಾಡುವ ಯಂತ್ರವನ್ನು ಸ್ಟಾರ್ಟ್ ಮಾಡಿ ಒಮ್ಮೆಲೆ ತನ್ನ ಕುತ್ತಿಗೆಯನ್ನು ಯಂತ್ರದ ಗರಗಸಕ್ಕೆ ಕೊಟ್ಟಿದ್ದು ಆ ಸಮಯ ಅಲ್ಲಿಯೇ ಇದ್ದ ಸತೀಶ್ ಮತ್ತು ಜಯಂತ್ ರವರು ಕೂಡಲೇ ಹೋಗಿ ಯಂತ್ರವನ್ನು ನಿಲ್ಲಿಸಿದ್ದು, ಆಗಾಗಲೇ ಮಾಲತೇಶರವರ ಕುತ್ತಿಗೆಗೆ ತೀವ್ರತರಹದ ಗಾಯವಾಗಿ ರಕ್ತ ಬಂದು ಮಾತನಾಡುತ್ತಿರಲಿಲ್ಲ. ಬಳಿಕ ಮಾಲತೇಶರವರರನ್ನು ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರ ಸಲಹೆಯಂತೆ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು 2:30 ಗಂಟೆಗೆ ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಪಿರ್ಯಾದಿದಾರರ ಗಂಡ ಮಾಲತೇಶರವರು ಮಾನಸಿಕ ಖಿನ್ನತೆ ಹಾಗೂ ಜಾಂಡೀಸ್ ಖಾಯಿಲೆಯಿಂದ ಬಳಲುತ್ತಿದ್ದು ಇದೇ ಕಾರಣದಿಂದ ಗ್ಲಾಸ್ ಕಟ್ ಮಾಡುವ ಯಂತ್ರಕ್ಕೆ ಕುತ್ತಿಗೆ ಒಡ್ಡಿದ್ದರಿಂದ ತೀವ್ರ ತರಹದ ಗಾಯವಾಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಯು.ಡಿ.ಆರ್ ಕ್ರಮಾಂಕ 11/2026 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







