ಬೆಂಗಳೂರು ಗ್ರಾಮಾಂತರ ಹೊಸಕೋಟೆ, ಉಪ ವಿಭಾಗದ ಪೊಲೀಸರಿಂದ ಒಂದು ಕೋಟಿಗೂ ಅಧಿಕ ಮೌಲ್ಯದ ಭರ್ಜರಿ ಕಾರ್ಯಾಚರಣೆ

ಹೊಸಕೋಟೆ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಅವರಿಂದ ಸುಮಾರು ಒಂದು ಕೋಟಿಗೂ ಅಧಿಕ ಮೌಲ್ಯದ ನಿಷೇಧಿತ ಮಾದಕ ವಸ್ತುಗಳು ಚಿನ್ನಾಭರಣಗಳು ದ್ವಿಚಕ್ರವಾಹನಗಳು ಮತ್ತು ಟ್ರಾಕ್ಟರ್ ಗಳ ಪ್ರಕರಣಗಳನ್ನು ಬೇಧಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಬೆಂಗಳೂರು ಜಿಲ್ಲೆ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಜಿಲ್ಲೆ ಹಾಗೂ ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ರೈತರ ಟ್ರ್ಯಾಕ್ಟರ್ ಗಳನ್ನು ಕಳ್ಳತನ ಮಾಡಿ ಅದರ ಸ್ವರೂಪ ಬದಲಿಸಿ ಬೇರೆಯವರಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸಿ ಸುಮಾರು 80 ಲಕ್ಷ ರೂಪಾಯಿಗಳ ಮೌಲ್ಯದ 11 ಟ್ರ್ಯಾಕ್ಟರ್ ಗಳನ್ನು ವಶಪಡಿಸಿಕೊಂಡು 11 ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಹೊಸಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಇದೇ ಠಾಣೆಯಲ್ಲಿ ಸುಮಾರು ನಿಷೇಧಿತ ಮಾದಕ ವಸ್ತು ಎಂಡಿಎಂಎ ಕ್ರೈಸ್ತಲ್ ಹಾಗೂ ಗಾಂಜಾ ಕಳ್ಳ ಸಾಗಾಣಿಕೆ ಮತ್ತು ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಸುಮಾರು ಆರೋಪಿತನಿಂದ 15 ಲಕ್ಷ ಮೌಲ್ಯದ ಮಾದಕ ವಸ್ತು ಹಾಗೂ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ.

ಮತ್ತು ಇದೇ ಠಾಣೆಯಲ್ಲಿ ದಾಖಲಾಗಿದ್ದ ಎರಡು ಕಳ್ಳತನ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ವಶಕ್ಕೆ ಪಡೆದು ಸುಮಾರು 8 ಲಕ್ಷ ರೂ ಮೌಲ್ಯದ 125 ಗ್ರಾಂ ತೂಕದ ಚಿನ್ನಾಭರಣಗಳನ್ನು ಸಹ ವಶಪಡಿಸಿಕೊಂಡಿರುತ್ತಾರೆ.

ಹಾಗೂ ಹೊಸಕೋಟೆ ತಾಲೂಕು ಕುರುಬರಹಳ್ಳಿ ಗ್ರಾಮದ ಅಕ್ರಮವಾಗಿ ಗ್ಯಾಸ್ ರೀಫೀಲಿಂಗ್ ಮಾಡುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿ ಸುಮಾರು ಎಂಟು ಲಕ್ಷ ರೂಗಳ ಮೌಲ್ಯದ ವಿವಿಧ ಕಂಪನಿಯ ಸರಕಾರಿ ಮತ್ತು ಖಾಸಗಿ ಕಂಪನಿಗೆ ಸೇರಿದ ಒಟ್ಟು ಗೃಹಬಳಕೆ ಹಾಗೂ ವಾಣಿಜ್ಯ ಬಳಕೆಯ 462 ಗ್ಯಾಸ್ ಸಿಲಿಂಡರ್ ಗಳು ಕೃತಕೆ ಬಳಸುತ್ತಿದ್ದ ಎರಡು ಎಲೆಕ್ಟ್ರಿಕ್ ಮೋಟರ್ ಪಂಪುಗಳು ಎರಡು ವೇಯಿಂಗ್ ಮಷೀನ್ ನ ಹಾಗೂ ಗ್ಯಾಸ್ ಸಿಲಿಂಡರ್ ಸಾಗಾಣಿಕೆಗೆ ಬಳಸುತ್ತಿದ್ದ ಕಾರನ್ನು ವಶಕ್ಕೆ ಪಡೆದು ಕೊಂಡಿರುತ್ತಾರೆ.

ಈ ಮೇಲ್ಕಂಡ 4 ಪ್ರಕರಣಗಳಲ್ಲಿ ಬೆಂಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ರೀ ಮಲ್ಲಿಕಾರ್ಜುನ ಬಾಲದಂಡೆ ಐಪಿಎಸ್ ರವರು ಮಾನ್ಯ ಅಪಾರ ಪೊಲೀಸ್ ಅಧೀಕ್ಷಕರು ಎಂಎಲ್ ಪುರುಷೋತ್ತಮ್ ರವರು ಹಾಗೂ ಹೊಸಕೋಟೆ ಉಪವಿಭಾಗದ ಮಾನ್ಯ ಪೊಲೀಸ್ ಉಪಾದೀಕ್ಷಕರಾದ ಶಂಕರ್ ಗೌಡ ಪಾಟೀಲ್ ರವರ ಮಾರ್ಗದರ್ಶನದಂತೆ ಹೊಸಕೋಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಶೋಕ್ ರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ನಾಗರಾಜು, ರಮೇಶ, ಪ್ರಕಾಶ್ ಬಾಬು, ದತ್ತಾತ್ರೇಯ, ಜೋಯೆಲ್ ಜೆರಾಲ್ಡ್, ಗೋಪಾಲಕೃಷ್ಣ, ಮತ್ತಿವಣ್ಣ ನಾರಾಯಣ, ರವರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿರುತ್ತಾರೆ.

Leave a Reply

Your email address will not be published. Required fields are marked *