ಗಾಂಜಾ ಮತ್ತು ಡ್ಯಾಗ‌ ಇಟ್ಟುಕೊಂಡಿದ್ದ ದ್ವಿಚಕ್ರ ವಾಹನ ವಶ : ತಲಘಟ್ಟಪುರ ಸಂಚಾರ ಪೊಲೀಸರ ಕಾರ್ಯಾಚರಣೆ

ತಲಘಟ್ಟಪುರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ, ಚಿಕ್ಕಗೌಡನಪಾಳ್ಯ 80 ಅಡಿ ರಸ್ತೆಯಲ್ಲಿ ವೀಲಿಂಗ್ ಮಾಡುವ ಸವಾರರ ವಿರುದ್ಧ ಕ್ರಮ ಕೈಗೊಳ್ಳುವ ಸಲುವಾಗಿ ಇಬ್ಬರು ಸಂಚಾರಿ ಪೊಲೀಸರನ್ನು ನೇಮಕಮಾಡಲಾಗಿದ್ದು, ಅದಕ್ಕನುಗುಣವಾಗಿ ಅವರು ಕರ್ತವ್ಯ ನಿರ್ವಹಿಸುತ್ತಿರುವಾಗ, ಸಂಜೆಯ ಸಮಯದಲ್ಲಿ ಇಬ್ಬರು ಸವಾರರು ಹೋಂಡಾ ಡಿಯೋ ದ್ವಿಚಕ್ರ ವಾಹನದಲ್ಲಿ ಚಿಕ್ಕೇಗೌಡನಪಾಳ್ಯ 80 ಅಡಿ ರಸ್ತೆಯಿಂದ ಚನ್ನಸಂದ್ರದ ಕಡೆಗೆ ಅತಿವೇಗ ಮತ್ತು ಆಪಾಯಕಾರಿಯಾಗಿ ಚಾಲನೆ ಮಾಡಿಕೊಂಡು ಬರುತ್ತಿರುವುದನ್ನು ಕಂಡ ಕರ್ತವ್ಯ ನಿರತ ಸಂಚಾರ ಪೊಲೀಸರು ನಿಲ್ಲಿಸಲು ಪ್ರಯತ್ನಿಸಿದಾಗ, ಸದರಿ ವಾಹನದ ಸವಾರ ಮತ್ತು ಹಿಂಬದಿ ಸವಾರ ದ್ವಿಚಕ್ರ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾರೆ .
ನಂತರ ಆಸಾಮಿಗಳು ಬಿಟ್ಟು ಹೋಗಿದ್ದ ದ್ವಿಚಕ್ರ ವಾಹನವನ್ನು ಪರಿಶೀಲಿಸಲಾಗಿ ಸದರಿ

ಗಾಡಿಯಲ್ಲಿ ಒಂದು ಮರದ ಹಿಡಿಕೆ ಇರುವ ಡ್ಯಾಗ‌ ಮತ್ತು ಸುಮಾರು 40 ಗ್ರಾಂ ತೂಕದ ಮಾದಕ ವಸ್ತು ಗಾಂಜಾ ಇರುವುದು ಕಂಡುಬಂದಿದ್ದು, ಅವುಗಳನ್ನು ತಂದು ತಲಘಟ್ಟಪುರ ಪೊಲೀಸ್ ಠಾಣೆಗೆ ನೀಡಿದ್ದು, ಅವರು ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.
ಬೆಂಗಳೂರು ನಗರದ ಸಂಚಾರ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ
ಶ್ರೀಮತಿ.ಮಹಮದ್‌ ಸುಜೀತ್ ರವರ ಮಾರ್ಗದರ್ಶನದಲ್ಲಿ ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಪ್ರಶಾಂತ್ ಹಾಗೂ ಸಿಬ್ಬಂದಿಯವರು ಯಶಸ್ವಿಯಾಗಿರುತ್ತಾರೆ.

ಈ ಉತ್ತಮ ಕಾರ್ಯವನ್ನು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ.ಬಿ.ದಯಾನಂದ ರವರು ಮತ್ತು ಜಂಟಿ ಪೊಲೀಸ್ ಆಯುಕ್ತರು ಸಂಚಾರ ಶ್ರೀ.ಎಂ.ಎನ್‌.ಅನುಚೇತ್ ರವರು ಶ್ಲಾಘಿಸಿರುತ್ತಾರೆ.

Leave a Reply

Your email address will not be published. Required fields are marked *