ಬ್ಯಾಡರಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ವಿಶ್ಲೇಶ್ವರ ನಗರದಲ್ಲಿ ವಾಸವಾಗಿರುವ ವಿದ್ಯಾದಿ ಶ್ರೀಮತಿ ಮಂಜುಳಮ್ಮ ರವರು ಅಂಧ್ರಹಳ್ಳಿ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ PRIDE KIDZE” ಸ್ಕೂಲ್ ಎದುರಿನ ರಸ್ತೆಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಒಂದು ಕಪ್ಪು ಬಣ್ಣದ ಬಜಾಜ್ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಹೆಬ್ಬೆಟ್ ಧರಿಸಿಕೊಂಡು ನನ್ನನ್ನು ಹಿಂಬಾಲಿಸಿಕೊಂಡು ಬಂದು ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿರುವುದಾಗಿ ದೂರು ನೀಡಿದ್ದರು.
ತನಿಖೆ ಕೈಗೊಂಡ ಬ್ಯಾಡರಹಳ್ಳಿ ಪೊಲೀಸ್ ಠಾಣೆ ಅಧಿಕಾರಿಗಳು ದಿನಾಂಕ 11.06.2023 ರಂದು ಇಬ್ಬರು ಸರಗಳ್ಳರನ್ನು ದಸ್ತ ಮಾಡಿ ಪೊಲೀಸ್ ಬಂಧನಕ್ಕೆ ಪಡೆದುಕೊಂಡು ಆರೋಪಿಗಳು ಬ್ಯಾಡರಹಳ್ಳಿ ಪೊಲೀಸ್ ತಾಣಾ ಸರಹದ್ದಿನಲ್ಲಿ ಬೇರೆ ಬೇರೆ ದಿನಗಳೆಂದು ಮೂರು ಜನ ಮಹಿಳೆಯರ ಕುತ್ತಿಗೆಯಿಂದ ಸುಲಿಗೆ ಮಾಡಿಕೊಂಡು ಹೋಗಿದ್ದ ಸುಮಾರು 6,00,000/-ಅಕ್ಷ 153 ಗ್ರಾಂ ತೂಕದ 3 ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿರುತ್ತಾರೆ. ಇವರ ದಸ್ತಗಿರಿಯಿಂದ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೂರು ಸುಲಿಗೆ | ಸರಗಳ್ಳತನ ಪ್ರಕರಣಗಳು ಪತ್ತೆಯಾಗಿರುತ್ತವೆ.
ಡಿಸಿಪಿ ಪಶ್ಚಿಮ ಶ್ರೀ ಲಕ್ಷ್ಮಣ ನಿಂಬರಗಿ ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಎಸಿಪಿ ಕೆಂಗೇರಿ ಉಪ ವಿಭಾಗ ಶ್ರೀ ಹೆಚ್ ಎಸ್ ಪರಮೇಶ್ವರ್ ರವರ ನೇತೃತ್ವದಲ್ಲಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿ / ಸಿಬ್ಬಂದಿಗಳು ಪತ್ತೆ ಮಾಡಿರುತ್ತಾರೆ.