8ಜನ ಕುಖ್ಯಾತ ಗಾಂಜಾ ಮಾರಾಟ ಮಾಡುವ ಆಸಾಮಿ ಕೊಲಬಂದನಾ ಸುಮಾರು ₹32,40,000/-ಬೆಲೆಬಾಳುವ 55 ಕೆಜಿ 810 ಗ್ರಾಂ ತೂಕದ ಮಾದಕ ವಸ್ತು ಗಾಂಜಾ ಮತ್ತು 1ಕಾರು ವಶ
ಬೆಂಗಳೂರು ನಗರದ ಬೇಗೂರು ಪೊಲೀಸ್ ಠಾಣೆ ಸರಹದ್ದಿನ ಚಿಕ್ಕಬೇಗೂರು ಬಸಾಪುರ ಮುಖ್ಯರಸ್ತೆ ಬಲಭಾಗದ ಖಾಲಿ ಜಾಗದ ಬಳಿ ಕೆಲವು ಆಸಾಮಿಗಳು ನಿಷೇಧಿತ ಮಾದಕ ವಸ್ತು ಗಾಂಜಾವನ್ನು ತಂದು ಏರಿಯಾದಲ್ಲಿ ಓಡಾಡುವ ಜನರಿಗೆ ಮಾರಾಟ ಮಾಡಿಕೊಂಡು ಹೋಗಿದ್ದು ಮುಂದೆಯೂ ಸಹ ಇವರುಗಳು ಮಾರಾಟ ಮಾಡಲು ಬರುತ್ತಾರೆಂಬ ಖಚಿತ ಮಾಹಿತಿ ಮೇರೆಗೆ ಗಾಂಜಾ ಮಾರಾಟ ಮಾಡಲು ಬರುವ ಆಸಾಮಿಗಳ ವಿರುದ್ಧ ಮುಂದಿನ ಕ್ರಮ ಜರುಗಿಸಲು ಬಗ್ಗೆ ನೀಡಿದ ದೂರಿನ ಮೇರೆಗೆ ಮೇಲ್ಕಂಡಂತೆ ಪ್ರಕರಣ ದಾಖಲು ಮಾಡಲಾಯಿತು .
ನಂತರ ಸದರಿ ಕೇಸಿನ ತನಿಖೆ ಕಾಲದಲ್ಲಿ ಮೇಲಾಧಿಕಾರಿಗಳ ಅನುಮತಿಯೊಂದಿಗೆ ದಿನಾಂಕ 17-06-2022 ರಂದು ಪಂಚರು ಹಾಗೂ ಸಿಬ್ಬಂದಿಗಳೊಂದಿಗೆ ಒರಿಸ್ಸಾ ಮೂಲದ ಒಬ್ಬ ಆಸಾಮಿಯ ಮೇಲೆದ್ದ ಆತನ ಕಡೆಯಿಂದ 1ಕೆ ಜಿ 190 ಗ್ರಾಂ ಮಾದಕ ವಸ್ತು ಗಾಂಜಾ ಅಮಾನತ್ತು ಪಡಿಸಿ ಕೊಂಡಿತ್ತು ಅನಂತರ ಸದರಿ ಆಸಾಮಿಯ ಮಾಹಿತಿ ಮೇರೆಗೆ ಒರಿಸ್ಸಾ ಮೂಲದ ಇಬ್ಬರು ಆರೋಪಿತರ ಹಾಗೂ ಆಂಧ್ರ ಮೂಲದ ಒಬ್ಬ ಆರೋಪಿ ಹಾಗೂ ಮೈಸೂರಿನ ಮೂಲದ 4ಜನ ಆರೋಪಿಗಳನ್ನು ವಶಕ್ಕೆ ಪಡೆದು ಒಟ್ಟು 8ಜನ ಆಸಾಮಿಗಳ ಕಡೆಯಿಂದ ಒಟ್ಟು 55 ಕೆಜಿ 810 ಗ್ರಾಂ ತೂಕದ ಮಾದಕ ವಸ್ತು ಗಾಂಜಾ ಮತ್ತು 1ಕಾರನ್ನು ವಶಪಡಿಸಿಕೊಂಡಿದ್ದಾರೆ .
ಈ ಪ್ರಕರಣವನ್ನು ಮಾನ್ಯ ಉಪ ಪೊಲೀಸ್ ಕಮೀಷನರ್ ಆಗ್ನೇಯ ವಿಭಾಗ ರವರಾದ ಶ್ರೀ .ಸಿ .ಕೆ .ಬಾಬಾ ರವರ ಮಾರ್ಗದರ್ಶನದಲ್ಲಿ ಶ್ರೀ. ಸುಧಾಕರ ಎ ಬಿ ಸಹಾಯಕ ಪೊಲೀಸ್ ಕಮೀಷನರ್ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ರವರ ನೇತೃತ್ವದಲ್ಲಿ ,ಬೇಗೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ. ಅನಿಲ್ ಕುಮಾರ್ ,ಪಿ .ಎಸ್. ಐ. ಗಳಾದ ಶ್ರೀ . ಗುರುಸ್ವಾಮಿ ಹಿರೇಮಠ. ಶ್ರೀಮತಿ. ಸವಿನಯ ಬಿ.ಜೆ ಮತ್ತು ಸಿಬ್ಬಂದಿಗಳಾದ ಶ್ರೀ . ನಂಜುಂಡಸ್ವಾಮಿ ,ಶ್ರೀ. ರಾಮಚಂದ್ರ ಶ್ರೀ. ಸಂಗಪ್ಪ, ಶ್ರೀ. ರವಿ, ಶ್ರೀ .ಯೋಗಾನಂದ ಕುಮಾರ್ ,ಶ್ರೀ. ಮೋಹನ್ ,ಶ್ರೀ .ಪ್ರಶಾಂತ್ ಕಲ್ಲೇಶ್, ಶ್ರೀ. ಹರಿನಾಥ್. ಶ್ರೀ, ಬಸವರಾಜ್ ರವರುಗಳೊಂದಿಗೆ ತಂಡವನ್ನು ರಚಿಸಿ 8ಜನ ಆರೋಪಿಗಳನ್ನು ದಸ್ತಗಿರಿ ಪಡಿಸುವಲ್ಲಿ ಹಾಗೂ ₹22,40,000/- ಬೆಲೆಬಾಳುವ ಒಟ್ಟು 55ಕೆಜಿ 810 ಗ್ರಾಂ ತೂಕದ ನಿಷೇಧಿತ ಮಾದಕ ವಸ್ತು ಗಾಂಜಾ ಮತ್ತು 10 ಲಕ್ಷ ಬೆಲೆಬಾಳುವ 1ಕಾರನ್ನು ಅಮಾನತುಪಡಿಸಿಕೊಲ್ಲುವಲ್ಲಿ ಯಶಸ್ವಿಯಾಗಿರುತ್ತಾರೆ