ಸುಮಾರು ₹6ಲಕ್ಷ ಮೌಲ್ಯದ 54ವಿವಿಧ ಕಂಪೆನಿಯ ಸೈಕಲ್ ಗಳು ವಶಪಡಿಸಿಕೊಂಡಿದೆ.
ಸುದ್ದಗುಂಟಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅನೇಕ ಸೈಕಲ್ ಕಳವು ಪ್ರಕರಣಗಳು ದಾಖಲಾಗಿದ್ದವು .ಪೋಲಿಸರಿಗೆ ಇದು ದೊಡ್ಡ ಸವಾಲಾಗಿತ್ತು ,CCTV ದೃಶ್ಯಗಳ ಮೂಲಕ ಆರೋಪಿಯನ್ನು ಬಂಧಿಸುವಲ್ಲಿ ಸುದ್ದಗುಂಟಪಾಳ್ಯ ಪೊಲೀಸರು ಯಶಸ್ವಿಯಾಗಿರುತ್ತಾರೆ .ಸಾಧನೆಯ ಆಪಾದಿತನ ವಿರುದ್ಧ ಈ ಹಿಂದೆಯೂ ಆಗ್ನೇಯ ವಿಭಾಗ ದಕ್ಷಿಣ ವಿಭಾಗ ಹಾಗೂ ಪಶ್ಚಿಮ ವಿಭಾಗ ಹಲವಾರು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು ತನಿಖೆ ಸಂದರ್ಭದಲ್ಲಿ ಬೆಳಕಿಗೆ ಬಂದಿರುತ್ತದೆ .
ಪ್ರಸ್ತುತ ಜಪ್ತ ಮಾಡಿದ ಸೈಕಲ್ ಗಳಲ್ಲಿ ಸುದ್ದಗುಂಟಪಾಳ್ಯ ಪೊಲೀಸ್ ಠಾಣೆಯಲ್ಲಿ 9 ಪ್ರಕರಣಗಳು ,ಮಡಿವಾಳ ಪೊಲೀಸ್ ಠಾಣೆಯಲ್ಲಿ 1ಪ್ರಕರಣ ,ಹೀಗೆ ಒಟ್ಟು 10 ಪ್ರಕರಣಗಳು ಪತ್ತೆಯಾಗಿರುತ್ತವೆ .ಹಾಗೆಯೇ ಬಂಧಿತ ಆರೋಪಿ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾಡೇ ಇರಬಹುದಾದ ಕಳ್ಳತನದ ಬಗ್ಗೆ ತನಿಖೆಯನ್ನು ಮುಂದುವರೆಸಲಾಗಿದೆ .
ಈ ಯಶಸ್ವಿ ಕಾರ್ಯಾಚರಣೆಯನ್ನು ಆಗ್ನೇಯ ವಿಭಾಗ ಮಾನ್ಯ ಉಪ ಪೊಲೀಸ್ ಆಯುಕ್ತರಾದ ಶ್ರೀ. ಶ್ರೀನಾಥ ಜೋಶಿ ಐ.ಪಿ.ಎಸ್ ,ಮೈಕೋ ಲೇಔಟ್ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ .ಎಂ .ಎನ್. ಕರಿಬಸವನಗೌಡ ಇವರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿತ್ತು .
ಸುದ್ದಗುಂಟೆಪಾಳ್ಯ ಪೂಲೀಸ್ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ .ಮಾರುತಿ ಜಿ ನಾಯಕ್ ರವರ ನೇತೃತ್ವದಲ್ಲಿ ಪಿ.ಎಸ್ಐ. ಶ್ರೀ. ಸುರೇಂದ್ರ ಆಚಾರ್ ,ಸಿಬ್ಬಂದಿಯವರಾದ ಪಿ.ಎಸ್ಐ ಶ್ರೀ. ಚಿಕ್ಕವೆಂಕಟ ಶೆಟ್ಟಿ ,ಪಿ.ಎಸ್ಐ ಶ್ರೀ.ರಾಘವೇಂದ್ರ ,ಶ್ರೀ. ನಯಾಝ್ ಅಹ್ಮದ್, ಶ್ರೀ .ವೀರಭದ್ರಪ್ಪ, ಶ್ರೀ. ಪ್ರಶಾಂತ್. ಶ್ರೀ. ವೇಣು ಇವರುಗಳು ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು .
ಈ ಉತ್ತಮ ಕಾರ್ಯವನ್ನು ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ .ಪ್ರತಾಪ್ ರೆಡ್ಡಿ ಐ.ಪಿ.ಎಸ್ ಬೆಂಗ್ಳೂರು ನಗರ ಹಾಗೂ ಮಾನ್ಯ ಅಪರ ಪೊಲೀಸ್ ಆಯುಕ್ತರು ಬೆಂಗಳೂರು ಪೂರ್ವ ಇವರು ಪ್ರಶಂಸಿಸುತ್ತಾರೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್