ಕುಮಟಾ ಶಹರದ ಉಪ್ಪಾರಕೇರಿ 3 ನೇ ಕ್ರಾಸ್‌ನಲ್ಲಿರುವ ಫಿರ್ಯಾದುದಾರ ಶ್ರೀ ಕಿರಣಕುಮಾರ ಕಮಲಾಕರ ನಾಯ್ಕ ಎಂಬವರ ಬಾಡಿಗೆ ಮನೆಯ ಎದುರು ರಸ್ತೆಯ ಪಕ್ಕದಲ್ಲಿ ಇಟ್ಟಿದ್ದ 31 ಕೋಳಿ ಬಾಕ್ಸಗಳನ್ನು ದಿನಾಂಕ: 27/02/2022 ರಂದು ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ :09/03/2022 ರ ಬೆಳಗಿನ 11:00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಕುಮಟಾ ಪೊಲೀಸ ಠಾಣೆಯ ಅಪರಾಧ ಕ್ರಮಾಂಕ: 49/2022, ಕಲಂ: 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿತ್ತು.
ಈ ಪ್ರಕರಣದಲ್ಲಿ ಶ್ರೀಮತಿ ಸುಮನ್ ಡಿ. ಪೆನ್ನೇಕರ, ಮಾನ್ಯ ಎಸ್.ಪಿ ಮೇಡಂ ಕಾರವಾರ, ಶ್ರೀ ಬದರಿನಾಥ ಮಾನ್ಯ ಎಡಿಶನಲ್ ಎಸ್.ಪಿ ಸಾಹೇಬರು ಕಾರವಾರ, ಶ್ರೀ ಬೆಳ್ಳಿಯಪ್ಪ ಕೆ.ಯು ಡಿ.ಎಸ್.ಪಿ. ಭಟ್ಕಳ ಹಾಗೂ ಶ್ರೀ ತಿಮ್ಮಪ್ಪ ನಾಯ್ಕ, ಪೊಲೀಸ ನಿರೀಕ್ಷಕರು ಕುಮಟಾ ಪೊಲೀಸ ಠಾಣೆ ರವರ ಮಾರ್ಗದರ್ಶನದಲ್ಲಿ ಕುಮಟಾ ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ಶ್ರೀ ನವೀನ್ ಎಸ್. ನಾಯ್ಕ ರವರು ಕಳ್ಳತನ ಮಾಡಿದ ಆರೋಪಿತರಾದ, 1) ಶೇಖ್ ಜಾಫರ್ ತಂದೆ ಶೇಖ್ ರುಸ್ತುಂ, ಸಾ ಉದ್ಯಮನಗರ, ಯಲ್ಲಾಪುರ, ಹಾಲಿ: ಹಳೆಹುಬ್ಬಳ್ಳಿ: 2) ಸಯ್ಯದ ತಂದೆ ರುಸ್ತುಮ್ ಶೇಖ್, ಸಾ|| ಕಾಳಮ್ಮನಗರ, ಯಲ್ಲಾಪುರ, ಹಾಲಿ: ಜಂಗ್ಲಿ ಪೇಟೆ, ಹಳೆ ಹುಬ್ಬಳ್ಳಿ , ಹಾಗೂ 3) ಜಾವೇದಖಾನ್ ತಂದೆ ಲಿಯಾಕತ ಅಲಿಖಾನ್ ಕಡೂರ, ಸಾ ನೇಕಾರನಗರ ರೋಡ್ , ಹಳೆ ಹುಬ್ಬಳ್ಳಿ, ಹಾಲಿ; ಕುಂದಗೋಳ, ಕ್ರಾಸ್, ಬಡವರ ನಗರ, ಹುಬ್ಬಳ್ಳಿ-ಧಾರವಾಡ ಇವರುಗಳಿಗೆ ದಿನಾಂಕ: 23/03/2022 ರಂದು ರಾತ್ರಿ ದಸ್ತಗಿರಿ ಮಾಡಿ, ಪ್ರಕರಣದಲ್ಲಿ ಕಳ್ಳತನವಾಗಿದ್ದ 31 ಕೋಳಿ ಬಾಕ್ಸ್‌ಗಳು. ಕಳ್ಳತನಕ್ಕೆ ಬಳಸಿದ ಬೊಲೆರೋ ಪಿಕಪ್ ವಾಹನ ನಂ: ಕೆಎ-31/ಎ-2737 ಹಾಗೂ ಭಟ್ಕಳ ಗ್ರಾಮಾಂತರ ಪೊಲೀಸ ಠಾಣಾ ವ್ಯಾಪ್ತಿಯ ಸರ್ಪನಕಟ್ಟೆಯಲ್ಲಿ ಕಳ್ಳತನವಾಗಿದ್ದ 30 ಕೋಳಿ ತುಂಬು ಪೈಬರ್ ಬಾಕ್ಸ್ ಹೀಗೆ ಒಟ್ಟು 3.34,000/- ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಕುಮಟಾ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಈ ಕಳ್ಳತನ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಕುಮಟಾ ಠಾಣೆಯ ಪಿ.ಎಸ್.ಐ ರವರುಗಳಾದ ಶ್ರೀ ನವೀನ ಎಸ್. ನಾಯ್ಕ, ಶ್ರೀಮತಿ ಪದ್ಮಾ ದೇವಳಿ ಹಾಗೂ ಸಿಬ್ಬಂದಿಯವರಾದ ಸಿಹೆಚ್‌ಸಿ-1497 ದಯಾನಂದ ನಾಯ್ಕ. ಸಿ.ಹೆಚ್.ಸಿ-736 ಗಣೇಶ ನಾಯ್ಕ, ಸಿಪಿಸಿ-1102 ಸಂತೋಷ ಬಾಳೇರ, ಸಿಪಿಸಿ-989 ಕೃಷ್ಣ ಎನ್. ಜೆ. ಸಿಪಿಸಿ 983 ಬಸವರಾಜ ಜಾಡರ, ಸಿಪಿಸಿ-1350 ಶಿವಾನಂದ ಜಾಡರ್, ಸಿಪಿಸಿ-522 ಶಿವಾಜ ನೇಗಿನಾಳ, ಇವರುಗಳ ತಂಡ ಭಾಗಿಯಾಗಿರುತ್ತದೆ. ಮಾನ್ಯ ಎಸ್.ಪಿ ಸಾ|| ಕಾರವಾರ ರವರು ಉತ್ತಮ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.