ಸುಗಮ, ಸುರಕ್ಷಿತ ಸಂಚಾರಕ್ಕಾಗಿ ಬೆಂಗಳೂರು ಸಂಚಾರ ಪೊಲೀಸ್ ಜಾರಿಗೆ ತಂದಿರುವ ತಂತ್ರಜ್ಞಾನ ಆಧಾರಿತ ಸೌಲಭ್ಯಗಳು ಮತ್ತು ಸಂಚಾರ ಬೀಟ್ ವ್ಯವಸ್ಥೆ ಹಾಗೂ ಸಂಚಾರ ಪೊಲೀಸರ ಕಾರ್ಯನಿರ್ವಹಣೆಗೆ ಮಾರ್ಗಸೂಚಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಬಾಡಿವೋರ್ನ್ ಕ್ಯಾಮೆರಾ,ಎ.ಎನ್.ಪಿ.ಆರ್. ಕ್ಯಾಮೆರಾಗಳು,ಎಸ್.ಎಂ.ಎಸ್. ಚಲಾನ್ ವ್ಯವಸ್ಥೆ, ಮೈ ಮ್ಯಾಪ್, ರೋಡ್ ಈಸ್ ಆ್ಯಪ್ಗಳನ್ನು ಮಾನ್ಯ ಮುಖ್ಯಮಂತ್ರಿ ಶ್ರೀ .ಬಸವರಾಜ ಎಸ್.ಬೊಮ್ಮಾಯಿ ಅವರು ದಿನಾಂಕ :30.12 .2021 ರಂದು ಲೋಕಾರ್ಪಣೆ ಮಾಡಿದರು ಹಾಗೂ ಈ ಸಂದರ್ಭದಲ್ಲಿ ಮಾನ್ಯ ಗೃಹ ಸಚಿವರಾದ ಶ್ರೀ .ಆರಗ ಜ್ಞಾನೇಂದ್ರ ಕರ್ನಾಟಕ ಸರ್ಕಾರ ರವರು ಸಂಚಾರ ಪೊಲೀಸ್ ಕಾರ್ಯನಿರ್ವಹಣೆಗೆ ಮಾರ್ಗಸೂಚಿಗಳು -ಕೈಪಿಡಿ,ಸಂಚಾರ ಸವಾಲುಗಳು ಹಾಗೂ ಪರಿಹಾರಗಳ ಹೊತ್ತಿಗೆಗಳನ್ನೂ ಲೋಕಾರ್ಪಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ ಶ್ರೀ ಸುರೇಶ್ ಕುಮಾರ್, ಮಾನ್ಯ ಶ್ರೀ ಪ್ರವೀಣ್ ಸೂದ್ ಐಪಿಎಸ್ ಮಹಾ ನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರು ಕರ್ನಾಟಕ ರಾಜ್ಯ,ಶ್ರೀ .ಕಮಲ್ ಪಂತ್.ಐ.ಪಿ.ಎಸ್ ಮಾನ್ಯ ಪೊಲೀಸ್ ಆಯುಕ್ತರು ಬೆಂಗಳೂರು ನಗರ, ಶ್ರೀ .ಡಾ.ಬಿ.ಆರ್.ರವಿಕಾಂತೇಗೌಡ.ಐ.ಪಿ.ಎಸ್ ಜಂಟಿ ಪೊಲೀಸ್ ಆಯುಕ್ತರು ಸಂಚಾರ ಬೆಂಗಳೂರು ನಗರ ಹಾಗೂ ಇನ್ನಿತರ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.