ಮೈಕೋಲೇಔಟ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ಲ್ಯಾಪ್‌ಟಾಫ್ ಮತ್ತು ಮೊಬೈಲ್ ಪೋನ್‌ಗಳು ಕಳ್ಳತನವಾಗಿದ್ದ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗಾಗಿ ಒಂದು ವಿಶೇಷ ತಂಡವನ್ನು ರಚನೆ ಮಾಡಿರುತ್ತಾರೆ. ಸದರಿ ತಂಡವು ಮೈಕೋಲೇಔಟ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಳವು ಮಾಡಿದ್ದ ಮಾಲನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ತಮಿಳುನಾಡಿನ ಶಂಕರಪುರ ವಾಸಿಗಳಾದ ಮೂರು ಜನ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಯಿತು. ವಿಚಾರಣೆ ವೇಳೆ ಆರೋಪಿಗಳು ತೆರೆದ ಬಾಗಿಲ ಮನೆಗಳಿಗೆ ಪ್ರವೇಶಿಸಿ ಮನೆಗಳಲ್ಲಿಟ್ಟಿದ್ದ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಗಳನ್ನು ಕಳ್ಳತನ ಮಾಡುತ್ತಿದ್ದಾಗಿ
ಒಪ್ಪಿಕೊಂಡಿರುತ್ತಾರೆ.
ಆರೋಪಿಗಳಿಂದ ಹೆಚ್.ಪಿ. ಕಂಪನಿಯ 10, ಲೆನೆವೋ ಕಂಪೆನಿಯ 02, ಡೆಲ್ ಕಂಪೆನಿಯ 11, ಏಸರ್ ಕಂಪೆನಿಯ
05, ಏಸಸ್ ಕಂಪೆನಿಯ 04, ತೋಷಿಬಾ ಕಂಪೆನಿಯ 01 ಲ್ಯಾಪ್ ಟ್ಯಾಪ್‌ಗಳನ್ನು ಹಾಗೂ ವಿವೋ ಕಂಪೆನಿಯ 09, ಐಟೆಲ್
ಕಂಪೆನಿಯ 02, ಐ-ಫೋನ್ ಕಂಪೆನಿಯ 02, ರೆಡ್ ಮೀ ಕಂಪೆನಿಯ 09, ಓನ್-ಪ್ಲಸ್ ಕಂಪೆನಿಯ 01, ಸ್ಯಾಮ್ಸಂಗ್
ಕಂಪೆನಿಯ 01, ಒಟ್ಟೂ ಕಂಪೆನಿಯ 03, ರಿಯಲ್-ಮೀ ಕಂಪೆನಿಯ 07, ನತಿಂಗ್ ಕಂಪೆನಿಯ 01, ನಾರೊ ಕಂಪೆನಿಯ
01, ಇನ್ ಫಿನಿಕ್ಸ್ ಕಂಪೆನಿಯ 03, ಒಪ್ಪೋ ಕಂಪೆನಿಯ 01 ಒಟ್ಟು 33 ಲ್ಯಾಪ್ ಟ್ಯಾಪ್‌ಗಳನ್ನು ಹಾಗೂ 10 ಮೊಬೈಲ್
ಫೋನ್‌ಗಳನ್ನು ವಶಪಡಿಸಿಕೊಂಡಿರುತ್ತದೆ. ಇವುಗಳ ಮೌಲ್ಯ 24,00,000/- ಲಕ್ಷ ರೂ ಆಗಿರುತ್ತದೆ.
ಬೆಂಗಳೂರು ನಗರ ಆಗ್ನೆಯ ವಿಭಾಗದ ಉಪ ಪೊಲೀಸ್ ಆಯುಕ್ತಕರಾದ ಸಿ.ಕೆ. ಬಾಬಾ ರವರು ಮತ್ತು ಮೈಕೋ ಲೇಔಟ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಎನ್.ಪ್ರತಾಪ್‌ರೆಡ್ಡಿ ರವರುಗಳ ಮಾರ್ಗದರ್ಶನದಲ್ಲಿ ಮೈಕೋ ಲೇಔಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಎಂ.ಎಲ್.ಗಿರೀಶ್, ರವರ ನೇತೃತ್ವದ ತಂಡ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಯವರು ವಿವಿಧ ಠಾಣೆಯ ಒಟ್ಟು 8 ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಮೇಲ್ಕಂಡ ಅಧಿಕಾರಿಗಳ ಮತ್ತು ಸಿಬ್ಬಂದಿಯವರುಗಳ ಕರ್ತವ್ಯವನ್ನು ಮಾನ್ಯ ಪೊಲೀಸ್ ಆಯುಕ್ತರು ಮತ್ತು ಅಪರ
ಪೊಲೀಸ್ ಆಯುಕ್ತರು ಪೂರ್ವ, ರವರು ಪ್ರಶಂಸಿರುತ್ತಾರೆ.
ವರದಿ : ಆಂಟೋನಿ ಬೇಗೂರು
***
___________________________________________________________________