ಜಿಗಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ೨ ಪ್ರಕರಣಗಳನ್ನು ಬೇದಿಸಿ ಆರೋಪಿಗಳಿಂದ ವಿವಿಧ ಕಂಪನಿಗಳ 100ಕ್ಕೂ ಹೆಚ್ಚು ಮೊಬೈಲ್ ಪೋನ್ ಗಳು ಮತ್ತು ೧೦ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಜಿಗಣಿ ಪೋಲಿಸರು ಯಶಸ್ವಿಯಾಗಿದ್ದಾರೆ. ಅಜಯ್ ಕುಮಾರ್, ಪವನ್ ಕುಮಾರ್ ಹಾಗೂ ಸತೀಶ್ ಬಂಧಿತ ಆರೋಪಿಗಳು ಎನ್ನಲಾಗಿದೆ.ಜಿಗಣಿ ಪೋಲಿಸ್ ಠಾಣೆ ವ್ಯಾಪ್ತಿಯ ಕಲ್ಲುಬಾಳು ಕ್ರಾಸ್ ಬಳಿ ರಾತ್ರಿ ಪಾಳಯದಲ್ಲಿ ಐದಾರು ಜನ ಆರೋಪಿಗಳು ದ್ವಿಚಕ್ರ ವಾಹನಗಳಲ್ಲಿ ಮಾರಕಾಸ್ತಗಳನ್ನು ಇಟ್ಟುಕೊಂಡು ಕಾರ್ಖಾ ನೆಗಳಿಂದ ಕೆಲಸ ಮುಗಿಸಿ ಮನೆಗೆ ತೆರಳುವ ಕಾರ್ಮಿಕರ ಬಳಿ ಸುಲಿಗೆ ಮಾಡಲು ಕಳ್ಳರು ಸಂಚು ಹೂಡಿದ್ದ ಸಂಧರ್ಭದಲ್ಲಿ ಖಚಿತ ಮಾಹಿತಿ ಆದರಿಸಿದ ಜಿಗಣಿ ಪೋಲಿಸರು ಮಿಂಚಿನ ಕಾರ್ಯಾಚರಣೆ ನಡೆಸಿ ಮೂರು ಜನ ಆರೋಪಿಗಳನ್ನು ಬಂದಿಸಿ ನಂತರ ಆರೋಪಿಗಳನ್ನು ವಿಚಾರಿಸಿದಾಗ ಅವರು ಮಾಡಿರುವ ಕೃತ್ಯಗಳು ಬಯಲಾಗಿದೆ ಎಂದು ಎಸ್ಪಿ ಡಾ|| ಕೆ. ವಂಶಿಕೃಷ್ಣರವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಇನ್ನು ಇದೇ ಸಂಧರ್ಭದಲ್ಲಿ ಜಿಗಣಿ ಪೋಲಿಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಕೆ. ಶೇಖರ್, ಎಎಸ್ ಐ ಶ್ರೀನಿವಾಸ್ ಮತ್ತು ಪೋಲಿಸರಾದ ರಾಜಣ್ಣ, ರಾಜು, ಕೋಟ್ರೇಶ್, ಶಿವಪ್ರಕಾಶ್, ಚನ್ನಬಸವ ರವರ ಕಾರ್ಯಕ್ಕೆ ಎಸ್ಪಿ ಡಾ|| ಕೆ. ವಂಶಿಕೃಷ್ಣರವರು ಮಚ್ಚುಗೆ ವ್ಯಕ್ತ ಪಡಿಸಿದ್ದಾರೆ.ಸಾರ್ವಜನಿಕರು ಮೊಬೈಲ್ ಗಳನ್ನು ಕಳೆದುಕೊಂಡಿದ್ದರೆ ಅಂತವರು ಮೊಬೈಲ್ ಗೆ ಸಂಬಂಧಪಟ್ಟ ಬಿಲ್ ಅಥವಾ ಐಎಮ್ ಇ ನಂಬರ್ ತಂದು ಠಾಣೆಯಲ್ಲಿ ಸಂಬAಧಪಟ್ಟ ದಾಖಲೆಗಳನ್ನು ಒದಗಿಸಿ ತಮ್ಮ ಮೊಬೈಲ್ ಗಳನ್ನು ತೆಗೆದು ಕೊಂಡು ಹೋಗ ಬಹುದು ಎಂದು ವೃತ್ತ ನಿರೀಕ್ಷಕ ಶೇಖರ್ ತಿಳಿಸಿದ್ದಾರೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್