ಮುಂಡಗೋಡ ತಾಲೂಕಿನ ಇಂದೂರು ಗ್ರಾಮದಲ್ಲಿ ಅನದಿಕೃತವಾಗಿ ಮನೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ ನಾಡ ಬಂದೂಕಿನ ಬಗ್ಗೆ ಡಾ || ಸುಮನ ಪೆನ್ನೇಕರ ಮಾನ್ಯ ಪೊಲೀಸ್ ಅಧೀಕ್ಷಕರು ಕಾರವಾರ ರವರಿಗೆ ಮಾಹಿತಿ ಬಂದ ಮೇರೆಗೆ ಎಸ್ ಪಿ ಕಾರವಾರ ಹಾಗೂ ಶ್ರೀ ಎಸ್ ಬದರಿನಾಥ ಮಾನ್ಯ ಹೆಚ್ಚುವರಿ ಪೊಲೀಸ ಅಧೀಕ್ಷಕರು, ಕಾರವಾರ ರವರ ಮಾರ್ಗದರ್ಶನದಲ್ಲಿ ಈ ಬಗ್ಗೆ ಒಂದು ವಿಶೇಷ ತಂಡವನ್ನು ರಚಿಸಿ ಈ ಕಾರ್ಯಾಚರಣೆಗೆ ಶ್ರೀ ಯಲ್ಲಾಲಿಂಗ ಕುನ್ನೂರು ಪಿ.ಎಸ್.ಐ.( ತನಿಖೆ ) ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ, ಆಶೋಕ ರಾಠೋಡ , ಎ.ಎಸ್.ಐ ಶಿರಸಿ ನಗರ ಪೊಲೀಸ್ ಠಾಣೆ , ಎಚ್.ಸಿ.ರಾಘವೇಂದ್ರ ಜಿ ಸಿದ್ಧಾಪುರ ಪೊಲೀಸ್ ಠಾಣೆ ಎಚ್. ಸಿ. ಭೀಮಪ್ಪ ಕದರಮಂಡಲಗಿ ದಾಂಡೇಲಿ ನಗರ ಪೊಲೀಸ್ ರಾಣೆ, ಎಚ್.ಸಿ. ದಯಾನಂದ, ಲೋಂಡಿ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಪಿ.ಸಿ. ಭಗವಾನ ಗಾಂವಕರ , ಸಂತೋಷಕುಮಾರ ಅಂಕೋಲಾ ಪೊಲೀಸ್ ಠಾಣೆ ಇವರನ್ನು ನೇಮಿಸಿದಂತೆ , ಸದ್ರಿ ತಂಡವು ಮುಂಡಗೋಡ ತಾಲೂಕಿನ ಇಂದೂರು ಗ್ರಾಮಕ್ಕೆ ಹೋಗಿ ಬಾತ್ಮೀ ಕಲೆ ಹಾಕಿ ಅಕ್ರಮವಾಗಿ ನಾಡ ಬಂದೂಕನ್ನು ಇಟ್ಟುಕೊಂಡಿದ್ದ ದಾವಲಸಾ ತಂದೆ ಇಮಾಮಸಾಬ ಸೃದಲಿ, ಪ್ರಾಯ 25 ವರ್ಷ ಇವನು ತನ್ನ ಮನೆಯ ಪಕ್ಕದಲ್ಲಿರುವ ದನದ ಕೊಟ್ಟಿಗೆಯಲ್ಲಿ ಇಟ್ಟಿದ್ದ ಒಂಟಿ ನಳಿಕೆಯ ನಾಡ ಬಂದೂಕನ್ನು ಹಾಗೂ ಪೈರಿಂಗ ಮಾಡಲು ಬಳಸುವ ಸೀಸದ ಗುಂಡುಗಳನ್ನು, ಕೇಪ್ಸ , ಗನ್ ಪೌಡರ್ , ಹಾಗೂ ಇತರೆ ಸ್ವತ್ತುಗಳನ್ನು ವಶಪಡಿಸಿಕೊಂಡು ಆರೋಪಿತನಿಗೆ ದಸ್ತಗಿರಿ ಮಾಡಿ ಮುಂದಿನ ಕ್ರಮಕ್ಕಾಗಿ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಕಾರವಾರ ಆದ ನಾನು ಶ್ಲಾಘನೆ ವ್ಯಕ್ತ ಪಡಿಸಿರುತ್ತೇನೆ.