ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ನಮ್ಮನ್ನಗಲಿದ ನಟ ಪುನೀತ್ ರಾಜಕುಮಾರ್ ಹಾಗೂ ಸಿ ಡಿ ಎಸ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಹಾಗೂ ಐ ಎ ಎಫ್ ನ ಇತರ ೧೧ ಸಿಬ್ಬಂದಿ ರವರಿಗೆ ನುಡಿ ನಮನ ಹಾಗೂ ಸ್ಮರಣಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು . ಈ ಕಾರ್ಯಕ್ರಮದಲ್ಲಿ ಡಾ ।। ಬಿ . ಆರ್ . ರವಿಕಾಂತೇಗೌಡರವರು ಮಾನ್ಯ ಜಂಟಿ ಪೋಲೀಸ್ ಆಯುಕ್ತರು, ಸಂಚಾರ. ಶ್ರೀ ಕುಲದೀಪ್ ಕುಮಾರ್ ಜೈನ್ ರವರು ಉಪ ಪೊಲೀಸ್ ಆಯುಕ್ತರು ಸಂಚಾರ ಪಶ್ಚಿಮ ವಿಭಾಗ, ಶ್ರೀಮತಿ ಶಶಿಕಲಾ ರವರು ಸಹಾಯಕ ಪೊಲೀಸ್ ಆಯುಕ್ತರು ಸಂಚಾರ ಮತ್ತು ಯೋಜನಾ ವಿಭಾಗ ಮತ್ತು ಶ್ರೀ ಶಿವಕುಮಾರ್ ರವರು ಪೊಲೀಸ್ ಇನ್ಸ್ಪೆಕ್ಟರ್,ಡಾ ಅನಿಲ್ ಕುಮಾರ್ ಜಿಪಿ. ಪೊಲೀಸ್ ಇನ್ಸಪೆಕ್ಟರ್, ಸಂಚಾರ ಮತ್ತು ಯೋಜನಾ ವಿಭಾಗದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು .
