ಮಾನ್ಯ ಜಂಟಿ ಪೊಲೀಸ್ ಆಯುಕ್ತರು, ಸಂಚಾರ ಶ್ರೀ .ಬಿ. ಆರ್. ರವಿಕಾಂತೇಗೌಡ ರವರು ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಟಿ ಸಿವಿಲ್ ಕೋರ್ಟ್ ಸಂಕೀರ್ಣಕ್ಕೆ ಭೇಟಿ ನೀಡಿ ಆಗಮನ ಮತ್ತು ನಿರ್ಗಮನ ದ್ವಾರದ ಬಳಿ ವಾಹನಗಳ ಸುಗಮ ಸಂಚಾರಕ್ಕೆ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ದೇಶನವನ್ನು ನೀಡಿದರು.ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ .ವಿವೇಕ್ ಸುಬ್ಬಾ ರೆಡ್ಡಿ ಅವರು ಮತ್ತು ಅವರ ತಂಡ ಸಹ ಇದ್ದರು .
ಪ್ರಮಾಣಿತ ಕಾರ್ಯಾಚರಣೆ ವಿಧಾನ ಅಂಗವಾಗಿ ನ್ಯಾಯಾಲಯಗಳಿಗೆ ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ,ಪ್ರಮುಖ ಪ್ರಕರಣಗಳಿಗೆ ಮಾತ್ರ ಅನುಮತಿ ನೀಡಲಾಗಿದೆ .
ಸಾಮಾನ್ಯವಾಗಿ ಸಿಟಿ ಸಿವಿಲ್ ಕೋರ್ಟ್ ಸಂಕೀರ್ಣದ ಬಳಿ ಭಾರೀ ಟ್ರಾಫಿಕ್ ಜಾಬ್ ಇರುತ್ತದೆ .ಕೆಲವು ವಾಹನಗಳನ್ನು ಮಾತ್ರ ಒಳಗೆ ಅನುಮತಿಸಲಾಗುತ್ತದೆ ಮತ್ತು ಇತರ ವಾಹನಗಳನ್ನು ನ್ಯಾಯಾಲಯದ ಹೊರಗೆ ನಿಲ್ಲಿಸಲಾಗುತ್ತದೆ. ಇದು ಟ್ರಾಫಿಕ್ ಜಾಮ್‌ಗೆ ಕಾರಣವಾಗಿದೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್