ದಿನಾಂಕ: 04-02-2022 ರಂದು ಮಾನ್ಯ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಕಾ & ಸಯ) ರವರು ಬೆಂಗಳೂರು ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಅಪರಾಧ ವಿಮರ್ಶಣ ಸಭೆಯನ್ನು ನಡೆಸಿ, ತನಿಖಾಧಿಕಾರಿಗಳಿಗೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಅಪರಾಧ ತಡೆಯುವ/ಪತ್ತೆ ಮಾಡಲು ಸೂಕ್ತ ಸಲಹೆ, ಸೂಚನೆಗಳನ್ನು ನೀಡಿರುತ್ತಾರೆ. ಸಭೆಯಲ್ಲಿ ಎಂ. ಚಂದ್ರ ಶೇಖರ್, ಐ.ಪಿ.ಎಸ್, ಆರಕ್ಷಕ ಮಹಾ ನಿರೀಕ್ಷಕರು, ಕೇಂದ್ರ ವಲಯು ಬೆಂಗಳೂರು, ಬೆಂಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಡಾ|| ಕೆ. ವಂಶಿ ಕೃಷ್ಣ, ಐ.ಪಿ.ಎಸ್ & ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ. ಲಕ್ಷ್ಮಿ ಗಣೇಶ್, ಕೆ.ಎಸ್.ಪಿ.ಎಸ್ ರವರುಗಳು ಉಪಸ್ಥಿತರಿದ್ದರು.
