ಹೆಂಡತಿಯ ಅನೈತಿಕ ಸಂಬಂಧಕ್ಕೆ ಕೊಲೆಯಾದ ಗಂಡ ನಾಗರಾಜ ಗೋಪಾಲ ಕಿಮಾನಿಕರ ವಿಳಾಸ: ರಾಗಿಹೊಸಳ್ಳಿ, ತಾ: ಶಿರಸಿ. ಇವರು ದಿನಾಂಕ : 30-09-2023 ರಂದು ಬೆಳಗ್ಗೆ 09-00 ಗಂಟೆ ಸುಮಾರಿಗೆ ದೇವಿಮನೆ ಘಟ್ಟದ ಮಾಸ್ತಿಮನೆ ದೇವಸ್ಥಾನದ ಆನೆಮೂರ್ತಿಗೆ ನಮಸ್ಕಾರ ಮಾಡಲು ಬಂದಾಗ ದೇವಸ್ಥಾನದ ಹಿಂದುಗಡೆ ಸುಮಾರು 35-40 ವರ್ಷ ಪ್ರಾಯದ ಇಬ್ಬ ವ್ಯಕ್ತಿ ಬಿಳಿ ಬಣ್ಣದ ಜುಬ್ಬಾ ಕೆಂಪು, ಕಪ್ಪು, ನೀಲಿ ಬಣ್ಣದ ಗೆರೆಯುಳ್ಳ ಲುಂಗಿ, ನಿಕ್ಕರ ಹಾಕಿದ ವ್ಯಕ್ತಿ ಬಿದ್ದುಕೊಂಡಿದ್ದನ್ನು ಕಂಡು ಸ್ಥಳಕ್ಕೆ ಹೋಗಿ ನೋಡಿದಾಗ ಆತನು ಮೃತ ಪಟ್ಟದ್ದು, ಮೃತನ ಬಲಹುಚ್ಚಿನ ಹತ್ತಿರ ಮತ್ತು ಎಡಕಿವಿ ಹಿಂಭಾಗ ತಲೆಭಾಗದಲ್ಲಿ ಗಾಯವಾಗಿ ರಕ್ತ ಬಂದಿರುತ್ತದೆ ಇತನಿಗೆ ಯಾರೋ ಎಲ್ಲಿಯೋ ಕೊಲೆ ಮಾಡಿ ತಂದು ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ದೇವಿಮನೆ ಘಟ್ಟದ ಮಾಸ್ತಿಮನೆ ಕ್ಷೇತ್ರಪಾಲ ದೇವಸ್ಥಾನದ ಹಿಂದೆ ಎಸೆದು ಹೋದ ಬಗ್ಗೆ ನೀಡಿದ ದೂರು ಕುಮಟಾ ಪೊಲೀಸ್ ಠಾಣೆ ಗುನ್ನಾ ನಂಬರ : 192/2023 ಕಲಂ : ಕಲಂ 302-201 ಐ.ಪಿ.ಸಿ. ನೇದಕ್ಕೆ ದಾಖಲಿಸಿಕೊಂಡು ಶ್ರೀ ತಿಮ್ಮಪ್ಪ ನಾಯ್ಕ ಪೊಲೀಸ್ ಇನ್ಸಪೇಕ್ಟರ್ ಕುಮಟಾ ಪೊಲೀಸ್ ಠಾಣಿರವರು ತನಿಖೆ ಕೈಗೊಂಡಿರುತ್ತಾರೆ.
ಈ ಪ್ರಕರಣದಲ್ಲಿ ಶ್ರೀ ವಿಷ್ಣುವರ್ಧನ ಪೊಲೀಸ್ ಅಧೀಕ್ಷಕರು ಕಾರವಾರ, ಶ್ರೀ ಸಿ.ಟಿ ಜಯಕುಮಾರ ಮಾನ್ಯ ಎಡಿಶನಲ್ ಎಸ್.ಪಿ ಸಾಹೇಬರು ಕಾರವಾರ, ಶ್ರೀ ಶ್ರೀಕಾಂತ ಕೆ ಮಾನ್ಯ ಡಿ.ಎಸ್.ಪಿ ಸಾಹೇಬರು ಭಟ್ಕಳ ಮಾರ್ಗದರ್ಶನದಲ್ಲಿ ಶ್ರೀ ತಿಮ್ಮಪ್ಪ ನಾಯ್ಕ, ಪೊಲೀಸ ನಿರೀಕ್ಷಕರು ಕುಮಟಾ ಪೊಲೀಸ ಠಾಣೆ ರವರು ತನಿಖೆ ಕೈಗೊಂಡು ಮೃತ ವ್ಯಕ್ತಿಯ ಮತ್ತು ಆತನ ರಕ್ತ ಸಂಬಂಧಿಗಳ ಪತ್ತೆಗೆ ಹಾಗೂ ಕೊಲೆ ಮಾಡಿದ ಆರೋಪಿತರ ಪತ್ತೆ ಕುರಿತುತನಿಖಾ ತಂಡ : ಶ್ರೀ ತಿಮ್ಮಪ್ಪ ನಾಯ್ಕ, ಪೊಲೀಸ ನಿರೀಕ್ಷಕರು ಕುಮಟಾ ಪೊಲೀಸ ಠಾಣೆ. ಸಿಬ್ಬಂದಿಯವರು : ಸಿ.ಹೆಚ್.ಸಿ-1571 ಲೋಕೇಶ ಅರಿಷಿಣಗುಪ್ಪಿ, ಸಿ.ಹೆಚ್.ಸಿ-805 ರಾಜು ನಾಯ್ಕ. ಸಿ.ಪಿ.ಸಿ-384 ರವಿ ನಾಯ್ಕ.
ಆರೋಪಿತರ ಪಡೆಯ ಒಂದನೇ ತಂಡ : ಶ್ರೀ ನವೀನ ನಾಯ್ಕ. ಪಿ.ಎಸ್.ಐ. ಕುಮಟಾ ಪೊಲೀಸ್ ಠಾಣೆ.
ಸಿಬ್ಬಂದಿಯವರು : ಸಿ.ಹೆಚ್.ಸಿ-736 ಗಣೇಶ ನಾಯ್ಕ, ಸಿಪಿಸಿ-696 ಗುರು ನಾಯಕ, ಸಿಪಿಸಿ-1280-ಪ್ರದೀಪ ನಾಯಕ, ಸಿಪಿಸಿ-1681 ಸಂತೋಷ ಚಿನ್ನಣ್ಣನವರ, ಸಿಪಿಸಿ-ಸಿಪಿಸಿ-1196 ಹುಚ್ಚಪ್ಪ ಚಾವಡಿ, ಮ.ಹೆಚ್.ಸಿ-1590
ಮಾದೇವಿ ಗೌಡ ಆರೋಪಿತರ ಪಡೆಯ ಎರಡನೇ ತಂಡ :: ಶ್ರೀ ಸಂಪತ್ತು ಇ.ಸಿ. ಪಿ.ಎಸ್.ಐ. ಕುಮಟಾ ಪೊಲೀಸ್ ಠಾಣಿ, ಶ್ರೀ ಸುನೀಲ ಬಂಡಿವಡ್ಡರ್ ಪಿ.ಎಸ್.ಐ. ಸಿಬ್ಬಂದಿಯವರು : ಸಿ.ಹೆಚ್.ಸಿ-1730 ನಿರಂಜನ ನಾಯ್ಕ, ಸಿಪಿಸಿ-1350 ಶಿವಾನಂದ ಜಾಡರ್, ಸಿ.ಪಿ.ಸಿ-1764 ಮಲ್ಲಿಕಾರ್ಜುನ ಹುಗ್ಗಿ ತಾಂತ್ರಿಕ ತಂಡ : ಸಿ.ಹೆಚ್.ಸಿ-315 ಉದಯ ಗುನಗಾ, ಸಿಪಿಸಿ-900 ರಮೇಶ ನಾಯ್ಕ, ಸಿ.ಹೆಚ್.ಸಿ-1497 ದಯಾನಂದ ನಾಯ್ಕ.ಜೀಪ್ ಚಾಲಕರು : ಎಹೆಚ್‌ಸಿ-146 ಸಂಜಯ ನಾಯ್ಕ, ಎಹೆಚ್‌ಸಿ-255 ಮಾರುತಿ ಗಾಳಪೂಜಿ.ಹೀಗೆ ತಂಡಗಳನ್ನು ರಚಿಸಲಾಗಿತ್ತು.
ಕೊಲೆಯಾದ ವ್ಯಕ್ತಿ : ಬಶೀರಸಾಬ ತಂದೆ ರಾಜಾಸಾಬ ಸಂಕನೂರ, ಪ್ರಾಯ : 32 ಉದ್ಯೋಗ : ಕುರಿ ಕಾಯುವ ಕೆಲಸ. ವಾಸ : ಹೊಸೂರ, ತಾಲೂಕ : ಬದಾಮಿ, ಜಿಲ್ಲಾ : ಭಾಗಲಕೋಟ ಅಂತ ಪತ್ತೆ ಮಾಡಿ. ಕೊಲೆ ಮಾಡಿದ ಆರೋಪಿರತರಾದ………
ಆರೋಪಿ-1 ಪರಸುರಾಮ ತಂದೆ ಹನುಮಪ್ಪ ಮಾದರ, ಪ್ರಾಯ : 23 ಉದ್ಯೋಗ : ಕುರಿ ಕಾಯುವ ಕೆಲಸ. ವಾಸ : ಮುಸಿಗೇರಿ, ತಾಲೂಕ : ಗಜೇಂದ್ರಗಡ, ಜಿಲ್ಲಾ : ಗದಗ.
ಆರೋಪಿ-2 ರವಿ ತಂದೆ ದಾನಪ್ಪ ಮಾದರ, ಪ್ರಾಯ : 22 ಉದ್ಯೋಗ : ಕುರಿ ಕಾಯುವ ಕೆಲಸ. ವಾಸ : ತೆಮಿನಾಳ. ತಾಲೂಕ : ಬದಾಮಿ, ಜಿಲ್ಲಾ : ಭಾಗಲಕೋಟ,
ಆರೋಪಿ-3 ಶ್ರೀಮತಿ ರಾಜಮಾ ಗಂಡ ಬಸೀರಸಾಬ ಸಂಕನೂರ, ಪ್ರಾಯ : 27 ಉದ್ಯೋಗ : ಮನೆ ಕೆಲಸ. ವಾಸ : ಹೊಸೂರ, ತಾಲೂಕ : ಬದಾಮಿ, ಜಿಲ್ಲಾ : ಭಾಗಲಕೋಟ.
ಆರೋಪಿ-4 ಬಸವರಾಜ ತಂದೆ ಸಂಗಪ್ಪ ಕುಂಬಾರ, ಪ್ರಾಯ : 35 ಉದ್ಯೋಗ : ಚಾಲಕ ಕೆಲಸ. ವಾಸ : ಮುಸಿಗೇರಿ, ತಾಲೂಕ : ಗಜೇಂದ್ರಗಡ, ಜಿಲ್ಲಾ : ಗದಗ,
ಆರೋಪಿ-1 ರಿಂದ 3 ನೇಯವರಿಗೆ ಶ್ರೀ ನವೀನ ನಾಯ್ಕ ಪಿ.ಎಸ್.ಐ. ರವರ ನೇತೃತ್ವದ ತಂಡದವರು ದಿನಾಂಕ : 02-10-2023 ರಂದು ಗಜೇಂದ್ರಗಡ ತಾಲೂಕ : ಮುಸಿಗೇರಿ ಗ್ರಾಮ ಮತ್ತು ಬದಾಮಿ ತಾಲೂಕ ತೆಮಿನಾಳ ಮತ್ತು ಹೊಸೂರ ಗ್ರಾಮ ವಶಕ್ಕೆ ಪಡೆದುಕೊಂಡು ತನಿಖಾಧಿಕಾರಿಯವರ ಮುಂದೆ ಹಾಜರ ಪಡೆಸಿರುತ್ತಾರೆ.
ಆರೋಪಿ-4 ನೇಯವರಿಗೆ ಸಿ.ಹೆಚ್.ಸಿ-1730 ನಿರಂಜನ ನಾಯ್ಡ ತಂಡದವರು ದಿನಾಂಕ : 04-10- 2023 ರಂದು ಮಂಗಳೂರದಲ್ಲಿ ವಶಕ್ಕೆ ಪಡೆದುಕೊಂಡು ತನಿಖಾಧಿಕಾರಿಯವರ ಮುಂದೆ ಹಾಜರ ಪಡೆಸಿರುತ್ತಾರೆ.
ಕುಮಟಾ ಪೊಲೀಸ್ ಠಾಣೆ
ಕುಮಟಾ ಉತ್ತರಕನ್ನಡ ಜಿಲ್ಲೆ KUMTA POLICE STATION
KUMTA U.K DISTRICT
2/3
ಕೊಲೆಗೆ ಕಾರಣ : ಪ್ರಕರಣದಲ್ಲಿಯ ಕೊಲೆಯಾದ ವ್ಯಕ್ತಿ ಬಶೀರಸಾಬನು ಆರೋಪಿ-ರಾಜಮಾಳ ಗಂಡ ಇದ್ದು. ರಾಜಮಾ ಮತ್ತು ಆರೋಪಿ-ಪರಸುರಾಮ ಇವರ ಮಧ್ಯೆ ಪ್ರೀತಿಯಾಗಿ ಅನೈತಿಕ ಸಂಬಂಧ ಬೆಳೆದಿತ್ತು. ತಮ್ಮ ಪ್ರೀತಿಗೆ ಬಶೀರಸಾಬನು ಅಡ್ಡಿಯಾಗಬಹುದೆಂದು ತಿಳಿದು ಪರಸುರಾಮ ಮತ್ತು ರಾಜಮಾ ಸೇರಿ ಬಸೀರಸಾಬನಿಗೆ ಹೇಗಾದರೂ ಮಾಡಿ ಕೊಲೆ ಮಾಡಿ ನಾಪತ್ತೆ ಮಾಡಬೇಕೆಂದು ಸಂಚು ರೂಪಿಸಿ, ಕೊಲೆ ಮಾಡುವ ಸಲುವಾಗಿ ರಾಜಮಾಳು ಪರಸುರಾಮನಿಗೆ 10000-೦೦ ರೂಪಾಯಿಯನ್ನು ಕೊಟ್ಟು ಕಳಸಿದ್ದು, ನಂತರ ಪರಸುರಾಮನು ಬಶೀರಸಾಬನಿಗೆ ಕೊಲೆ ಮಾಡುವ ಉದ್ದೇಶಕ್ಕೆ ಪರಸುರಾಮನ ದೊಡ್ಡಮ್ಮನ ಮಗ ರವಿ ಗೆ ಕರೆಸಿಕೊಂಡು ಮಂಗಳೂರಿನಲ್ಲಿ ಇದ್ದ ಪರಸುರಾಮನ ಸ್ನೇಹಿತ ಆದೇಶ ಕುಂಬಾರ ನಿಗೆ ವಿಷಯ ತಿಳಿಸಿ ನಂತರ
ಬಶೀರಸಾಬನಿಗೆ ಮಂಗಳೂರ ಕಡೆಗೆ ಹೋಗಿ ಬೀಚ್ ನೋಡಿಕೊಂಡು ಬರೋಣ ಅಂತ ಮುಸುಲಾಯಿಸಿ
ಕರೆದುಕೊಂಡು ದಿನಾಂಕ : 28-09-2023 ರಂದು ತಮ್ಮ ಊರಾದ ಗಜೇಂದ್ರಗಡ ತಾಲೂಕ ಮುಸಿಗೇರಿಯಿಂದ ಗಜೇಂದ್ರಗಡಕ್ಕೆ ಬಂದು ಆದೇಶ ಕುಂಬಾರ ಇತನ ಸೂಚನೆಯಂತೆ ಕೆ.ಎಸ್.ಆರ್.ಟಿ.ಸಿ. ಬಸ್
ಮೂಲಕ ದಿನಾಂಕ : 29-09-2023 ರಂದು ಬೆಳಗ್ಗೆ ಮಂಗಳೂರ ಗೆ ತಲುಪಿ ಆದೇಶ ಕುಂಬಾರ ಇತನಿಗೆ ಭೇಟಿಯಾಗಿ ನಂತರ ಪರಸುರಾಮ, ರವಿ, ಆದೇಶ ಮತ್ತು ಬಶೀರಸಾಬ ಸೇರಿ ಮಂಗಳೂರಿನಲ್ಲಿ ಬೀಚ್ ಸುತ್ತಾಡಿ ಅಲ್ಲಿ ಬಶೀರಸಾಬ ನಿಗೆ ಸರಾಯಿ ಕುಡಿಸಿ ಕುಮಟಾ-ಶಿರ್ಶಿ ಮಧ್ಯ ದೇವಿಮನೆ ಘಾಟದಲ್ಲಿ ಆನೇಮೂರ್ತಿ ಇದ್ದ ದೇವಸ್ಥಾನದ ಹತ್ತಿರ ಕೊಲೆ ಮಾಡುವ ಬಗ್ಗೆ ಪರಸುರಾಮ, ರವಿ, ಆದೇಶ ಸೇರಿಕೊಂಡು ಪ್ಲಾನ್ ಮಾಡಿ, ದಿನಾಂಕ : 29-09-2023 ರಂದು ಮಧ್ಯಾನ್ಹ ಪರಸುರಾಮ, ರವಿ, ಸೇರಿ ಬಶೀರಸಾಬನಿಗೆ ಕರೆದುಕೊಂಡು ದೇವಿಮನೆ ಘಾಟ್ ಹತ್ತಿರ ಒಂದು ದೇವಸ್ಥಾನ ಇದೆ ಅದನ್ನು ನೋಡಿಕೊಂಡು ಹೋಗೋಣ ಅಂತ ಹೇಳಿ ಮಂಗಳೂರ ನಿಂದ ಬಸ್ ಮೇಲಾಗಿ ಬಂದು ದೇವಿಮನೆ ಘಾಟ್ ಹತ್ತಿರ ಇದ್ದ ಮಾಸ್ತಿಮನೆ ಕ್ಷೇತ್ರಪಾಲ ದೇವಸ್ಥಾನದ ಹತ್ತಿರ ಇಂದು ದೇವಸ್ಥಾನದ ಹಿಂದುಗಡೆ ಹೋಗಿ ಅಲ್ಲಿ ಬಶೀರಸಾಬನಿಗೆ ಸರಾಯಿ ಕುಡಿಸಿ ಪರಸುರಾಮ ಮತ್ತು ರವಿ ಸೇರಿಕೊಂಡು ಕಟ್ಟಿಗೆ ಬಡಿಗೆಯಿಂದ
ಕೊಲೆ ಮಾಡಿ ದೇವಸ್ಥಾನದ ಹಿಂದುಗಡೆ ಬಿಸಾಡಿ ಹೋಗಿರುತ್ತಾರೆ.
ಬಶೀರಸಾಬನ ತಲೆಗೆ ಬಲವಾಗಿ ಹೊಡೆದು
ಕೊಲೆಯ ಪ್ರಕರಣವನ್ನು ಬೇಧಿಸುವಲ್ಲಿ ಶ್ರಮಿಸಿದ ತಂಡಕ್ಕೆ ಮಾನ್ಯ ಎಸ್.ಪಿ ಸಾ|| ಕಾರವಾರ ರವರು
ಪ್ರಸಂಶೆ ವ್ಯಕ್ತಪಡಿಸಿ, ಸೂಕ್ತ ಬಹುಮಾನ ಘೋಷಿಸಿರುತ್ತಾರೆ.