ದಿನಾಂಕ 26-03-2021ರಂದು ಸಂಜೆ 7:00 ಗಂಟೆ ಸಮಯದಲ್ಲಿ ಜಿಗಣಿ ಪೊಲೀಸ್ ಠಾಣೆ ಸರಹದ್ದು ,ಸರ್ಕಲ್ ಬಳಿ ಠಾಣಾ ಮಹೇಶ್ ಕೆ ಕೆ ಮತ್ತು ಪ್ರದೀಪ್ ರವರು ನಾಕಾಬಂದಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಮೊಬೈಲ್ ಸುಲಿಗೆಕೋರನ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನ ಮಾಡು ತ್ತಿದ್ದ ಅವನನ್ನು ಬೆನ್ನಟ್ಟಿ ಹಿಡಿದು ಪೋಲಿಸ್ ಠಾಣೆಗೆ ಕರೆತಂದು ಹಾಜರುಪಡಿಸಿದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈ ಕೊಂಡಿರುತ್ತದೆ .
ಈ ಪ್ರಕರಣದಲ್ಲಿ ಮಾನ್ಯ ಬೆಂಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಶ್ರೀ. ರವಿ. ಡಿ .ಚನ್ನಣ್ಣನವರ್ ಐ. ಪಿ. ಎಸ್. ಮತ್ತು ಅಪರ ಪೊಲೀಸ್ ಅಧೀಕ್ಷಕರವರಾದ ಶ್ರೀ .ಲಕ್ಷ್ಮಿ ಗಣೇಶ್ ಕೆ.ಎಸ್. ಪಿ .ಎಸ್ ರವರುಗಳ ನಿರ್ದೇಶನದಲ್ಲಿ ಆನೇಕಲ್ ಉಪವಿಭಾಗದ ಮಾನ್ಯ ಪೊಲೀಸ್ ಉಪಾಧೀಕ್ಷಕ ರವರಾದ ಡಾ।। ಎಚ್ ಎಂ ಮಹದೇವಪ್ಪ ಕೆ .ಎಸ್. ಪಿ .ಎಸ್ ರವರ ನೇತೃತ್ವದಲ್ಲಿ ಜಿಗಣಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ .ಬಿ .ಕೆ. ಶೇಖರ್ ರವರು ಹಾಗೂ ಪಿ.ಎಸ್. ಐ. ಶ್ರೀ .ಶಿವಲಿಂಗ ನಾಯಕ್ ರವರು ಮತ್ತು ಅಪರಾಧ ವಿಭಾಗದ ಸಿಬ್ಬಂದಿಯವರು ಕಾರ್ಯ ಪ್ರವೃತ್ತರಾಗಿ ಆರೋಪಿ ಸತೀಶ ಬಿನ್ ಮುನಿಕೃಷ್ಣ ನೀಡಿದ ಮಾಹಿತಿಯ ಮೇರೆಗೆ ಕಳೆದ 3-4ತಿಂಗಳು ಅವಧಿಯಲ್ಲಿ ಜಿಗಣಿ ,ಬೊಮ್ಮನಹಳ್ಳಿ, ಕೈಗಾರಿಕಾ ಪ್ರದೇಶ ,ಸೂರ್ಯಸಿಟಿ ,ಹೆಬ್ಬಗೋಡಿ ಕಡೆಯಲ್ಲಿ ತಡರಾತ್ರಿ ಓಡಾಡುತ್ತಿದ್ದ ಕಾರ್ಮಿಕರು ಮತ್ತು ಸಾರ್ವಜನಿಕರಿಂದ ಸುಳ್ಳೇಕೆ ಮಾಡಲಾಗಿದ್ದ ಸುಮಾರು 4ಲಕ್ಷ ರೂ ಅಧಿಕ ಬೆಲೆಬಾಳುವ ವಿವಿಧ ಕಂಪೆನಿಯ 40 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡಿಸಿಕೊಂಡು ಯಶಸ್ವಿ ಕಾರ್ಯಾಚರಣೆ ಮಾಡಲಾಗಿತ್ತು .
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್