ಪ್ರತಿ ವರ್ಷದಂತೆ ಈ ವರ್ಷವು ಕೂಡಾ ರಾಷ್ಟ್ರದ 73 ನೇ ಪ್ರಜಾ ರಾಜ್ಯೋತ್ಸವವು ಕಾರವಾರದ ಜಿಲ್ಲಾ ಪೋಲೀಸ್ ಕವಾಯತು ಮೈದಾನದಲ್ಲಿ ಕರೋನಾ ವೈರಸ್ ವ್ಯಾಧಿಯ ವ್ಯಾಪಕತೆ ಇದ್ದರೂ ಸಹ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಕಲ್ಯಾಣ ಇಲಾಖೆಯ ಸಚಿವ ರಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಯವರು ಧ್ವಜಾರೋಹಣವನ್ನು ನೆರವೇರಿಸಿ ಪೊಲೀಸ್ ಕವಾಯತನ ಪರಿವೀಕ್ಷಣೆಮಾಡಿ ಪ್ರಜಾ ರಾಜ್ಯೋತ್ಸವದ ಶುಭ ಸಂದೇಶವನ್ನು ಹಾಗೂ ಜಿಲ್ಲೆಯ ವಿಶೇಷತೆಗಳ ಬಗ್ಗೆ ಕೊಂಡಾಡಿ ಮತ್ತು ಜಿಲ್ಲೆಯ ಅಭಿವೃದ್ಧಿ ಬಗ್ಗೆ ವಿಶೇಷ ಗಮನಹರಿಸುವುದಾಗಿ ತಿಳಿಸಿರುತ್ತಾರೆ.
ಈ ಬಾರಿಯ ಕಾರವಾರ ಜಿಲ್ಲಾ ಪೋಲೀಸ್ ಕವಾಯತು ಮೈದಾನದಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಜರುಗಿದ ಕನ್ನಡ ಭಾಷೆಯ ಕವಾಯತು ಆದೇಶದ ಮೂಲಕ ಪ್ರಜಾ ರಾಜ್ಯೋತ್ಸವದ ಪೊಲೀಸ ಕವಾಯತು ವಿಶೇಷವಾಗಿರುತ್ತದೆ
. ಈ ಕವಾಯತಿನಲ್ಲಿ ಜಿಲ್ಲೆ ಸಶಸ್ತ್ರ ಪೋಲಿಸ್ ಹಾಗೂ ನಾಗರೀಕ ಪೊಲೀಸ್ ತಂಡಗಳು, ಆರಣ್ಯರಕ್ಷಕರ ತಂಡ, ಗೃಹ ರಕ್ಷಕ ತಂಡ ಮತ್ತು ಶಾಲಾ ವಿದ್ಯಾರ್ಥಿಗಳ ಎನ್. ಸಿ. ಸಿ. ತಂಡಗಳು ಭಾಗವಹಿಸಿದ ಪಥಸಂಚಲನವು ಆಕರ್ಷಕವಾಗಿ ಮೂಡಿ ಬಂದಿರುತ್ತದೆ. ಈ ಸಮಯದಲ್ಲಿ ವಿವಿಧ ಕ್ಷೇತ್ರದಲ್ಲಿ ಉತ್ತಮ ಕೊಡುಗೆ ಜಿಲ್ಲೆಯ ಸಾಧಕರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿ ವರ್ಗದವರು ಮತ್ತು ಕಾರವಾರ ನಗರದ ಗಣ್ಯರು ಪಾಲ್ಗೊಂಡಿರುತ್ತಾರೆ.