ಜಿಲ್ಲಾ ಪೋಲೀಸ್ ಕವಾಯತು ಮೈದಾನ ಕಾರವಾರದಲ್ಲಿ 2020-21 ಸಾಲಿನ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾ ಕೂಟ ಉದ್ಘಾಟನೆಗೊಂಡಿರುತ್ತದೆ.
02 ದಿನಗಳ ಕಾಲ ನಡೆಯುವ ಈ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿದ ಸನ್ಮಾನ್ಯ ಶ್ರೀ ಕಾಶೀನಾಥ ನಾಯ್ಕ (ಆರ್ಮಿ) ಕ್ರೀಡಾ ತರಬೇತಿದಾರರು ಶಿರಸಿ ರವರು ಪೊಲೀಸ್ ಕ್ರೀಡಾಪಟುಗಳಿಗೆ ಮತ್ತು ಸಾರ್ವಜನಿಕರಿಗೆ, ಕ್ರೀಡೆಗಳ ಬಗ್ಗೆ ಮತ್ತು ಕ್ರೀಡೆಗಳ ಸಾಧನೆಗಳ ಬಗ್ಗೆ ತಿಳಿಸಿ, ತಾವು ಸೇನೆಯ ಸೇವೆಯಲ್ಲಿರುವಾಗಲೇ ಯಾವುದಾದರೊಂದು ಸಾಧನೆ ಮಾಡಲೇಬೇಕೆಂಬ ಛಲದಿಂದ ತಮ್ಮ ವೈಯಕ್ತಿಕ ಜೀವನದಲ್ಲಿ ಅನುಭವಿಸಬೇಕಾದ ಮೋಜಿನ ಜೀವನವನ್ನು ತ್ಯಾಗಮಾಡಿ ದೃಢ ವಿಶ್ವಾಸ ಮತ್ತು ಅವಿರತ ಶ್ರಮದಿಂದ ರಾಷ್ಟ್ರೀಯ, ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿರುತ್ತಾರೆ. ಮತ್ತು ತಮ್ಮ ಕ್ರೀಡಾ ತರಬೇತಿಯಿಂದ 2021 ನೇ ಸಾಲಿನ ಓಲಂಪಿಕ್ ಕ್ರೀಡೆಯಲ್ಲಿ ಬಂಗಾರದ ಪದಕ ಗಳಿಸಿರುವ \”ನಿರಜ ಛೋಪ್ರಾ” ರವರ ಸಾಧನೆಯ ಬಗ್ಗೆ ತಿಳಿಸಿ, ಪೊಲೀಸ್ ಕ್ರೀಡಾ ಪಟುಗಳಿಗೆ ಉತ್ತಮ ಸ್ಪೂರ್ತಿಯನ್ನು ತುಂಬಿರುತ್ತಾರೆ.
ಕಾರ್ಯಕ್ರಮದಲ್ಲಿ ಮಾನ್ಯ ಪೊಲೀಸ್ ಆಧೀಕ್ಷಕರು ಡಾ: ಸುಮನ ಪನ್ನೇಕರ ಐ.ಪಿ.ಎಸ್. ರವರು ಕ್ರೀಡಾ ಕೂಟದ ಮಾನ್ಯ ಅತಿಥಿಗಳನ್ನು ಸ್ವಾಗತಿಸಿರುತ್ತಾರೆ, ಮತ್ತು ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕ್ರೀಡಾಕೂಟ ಉದ್ಘಾಟನಾ ಸಮಾರಂಭದ ವಂದಾನಾರ್ಪಣೆಯನ್ನು ಮಾಡಿರುತ್ತಾರೆ ಮತ್ತು ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಈ ಸಮಾರಂಭದಲ್ಲಿ ಪಾಲ್ಗೊಂಡಿರುತ್ತಾರೆ.