ಆಫ್ಘಾನಿಸ್ತಾನದಲ್ಲಿ ಉಂಟಾಗಿರುವ ಅರಾಜಕತೆ ಯಿಂದ ಮಂಗಳೂರಿನಲ್ಲಿರುವ ವಾಸ ಇರುವ ಅಫ್ಘಾನಿಗರಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ದೈರ್ಯ ತುಂಬಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಪೊಲೀಸ್ ಆಯುಕ್ತ ಶಶಿಕುಮಾರ್ , \”ಮಂಗಳೂರು ವಿಶ್ವವಿದ್ಯಾಲಯ ಯಲ್ಲಿನ ಆಫ್ಘಾನಿಸ್ತಾನ ಮೂಲದ 58 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಇವರಲ್ಲದೆ ಹಲವು ಪ್ರಜೆಗಳು ವಾಸವಾಗಿದ್ದಾರೆ. ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಹಿನ್ನಲೆಯಲ್ಲಿ ಅವರಲ್ಲಿ ಆತಂಕ ಮನೆಮಾಡಿ ನಮಗೆ ಆಫ್ಘಾನಿಸ್ತಾನ ವಿದ್ಯಾರ್ಥಿ ಸಂಘ ಮನವಿ ಸಲ್ಲಿತ್ತು. ಈ ಹಿನ್ನಲೆಯಲ್ಲಿ ಶನಿವಾರ ಮಂಗಳೂರು ಕಮಿಷನರ್ ಕಚೇರಿಯಲ್ಲಿ ಸಂವಹನ ನಡೆಸಿ ಧೈರ್ಯ ತಂಬಿದ್ದೇವೆ.
58 ವಿದ್ಯಾರ್ಥಿಗಳಲ್ಲಿ 11 ಆಫ್ಘಾನಿಸ್ತಾನಕ್ಕೆ ವಿದ್ಯಾರ್ಥಿಗಳು ವಾಪಸ್ ತೆರಳಿದ್ದು ಉಳಿದ 47 ಮಂದಿಯ ಪೈಕಿ ಕೆಲವು ಮಂದಿ ತಮ್ಮ ಕುಟುಂಬ ಸದಸ್ಯರೊಂದಿಗೆ ಇಲ್ಲೇ ಉಳಿದುಕೊಂಡಿದ್ದಾರೆ. ಅವರು ನಮ್ಮಲ್ಲಿ ಮನವಿ ಸಲ್ಲಿಸಿದ್ದರು. ಹೀಗಾಗಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಅವರಿಗೆ ದೈರ್ಯ ತುಂಬುವ ಕೆಲಸ ಮಾಡಲಿದೆ ಎಂದರು .
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,