ಮಾದಕದ್ರವ್ಯದ ಹಾವಳಿ ನಿಗ್ರಹಿಸುವ ನಿರಂತರ ಪ್ರಯತ್ನದಲ್ಲಿ ಅಕ್ರಮವಾಗಿ ಕಾರ್ ನಲ್ಲಿ ಗಾಂಜಾವನ್ನು ಸಾಗಾಣಿಕೆ ಮಾಡಿಕೊಂಡು ಚಿಕ್ಕಮಗಳೂರಿನಲ್ಲಿ ಮಾರಾಟ ಮಾಡಲು ಬರುತ್ತಿದ್ದ 3 ಜನ ಆರೋಪಿಗಳನ್ನು PI ರಕ್ಷಿತ್ ಎ. ಕೆ. ರವರ ನೇತೃತ್ವದ CEN PS ತಂಡವು ವಶಕ್ಕೆ ತೆಗೆದುಕೊಂಡಿದ್ದು. ಕಾರ್ ನಲ್ಲಿದ್ದ ರೂ. 25 ಲಕ್ಷ ಬೆಲೆಯ 101.20 ಕೆ.ಜಿ. ಗಾಂಜಾ, ಕಾರು & ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದೇ ದಾಳಿಯಲ್ಲಿ ಇಂತಹ ದೊಡ್ಡ ಪ್ರಮಾಣದಲ್ಲಿ ಗಾಂಜಾವನ್ನು ಜಿಲ್ಲೆಯಲ್ಲಿ ವಶಪಡಿಸಿಕೊಂಡಿರುವುದು ಮೊಟ್ಟಮೊದಲಾಗಿರುತ್ತದೆ. ಈ ಕಾರ್ಯವನ್ನು ಪ್ರಶಂಶಿಸಲಾಗಿದೆ. ಈ ಹಾವಳಿಯ ವಿರುದ್ಧ ಚಿಕ್ಕಮಗಳೂರು ಜಿಲ್ಲಾ ಪೊಲೀಸರ ಹೋರಾಟ ಮುಂದುವರೆಯಲಿದೆ .
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,