ಆಸ್ತಿಗಾಗಿ ನಡೆದ ಗಲಾಟೆ ವೇಳೆ ಸ್ವಂತ ಅಣ್ಣನೇ ತನ್ನ ತಂಗಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ, ಪೊಲೀಸರಿಗೆ ಶರಣಾಗಿದ್ದಾನೆ. ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಅನ್ನದಾನೀಶ್ವರ ನಗರದಲ್ಲಿ ಈ ಘಟನೆ ನಡೆದಿದೆ.
ಈಶ್ವರಪ್ಪ ಕ್ಯಾದಿಗೇಹಳ್ಳಿ ಎಂತಾನೇ ತನ್ನ ತಂಗಿಯನ್ನು ಕೊಲೆ ಮಾಡಿದಾತ.ಕಾಳಮ್ಮ ಕೊಲೆಯಾದಾಕೆಯಾಗಿದ್ದಾಳೆ. ಕಾಳಮ್ಮ 14 ವರ್ಷದ ಹಿಂದೆ ಗ್ರಾಮದಲ್ಲಿ ಕಟಿಂಗ್ ಸಲೂನ್ ಇಟ್ಟುಕೊಂಡಿರುವ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು.
ಅನಂತರ 2020ರಲ್ಲಿ ಮೈಬೂಬ್ ಎಂಬಾತನನ್ನು ಎರಡನೇ ಮದುವೆಯಾಗಿದ್ದಳು.ಅನಂತರ ತನ್ನ ಹೆಸರನ್ನು ಖುರ್ಷಿದಾ ಎಂದು ಬದಲಾಯಿಸಿಕೊಂಡಿದ್ದಳು. ಇದೀಗ ಆಕೆ ತನ್ನ ಅಣ್ಣನ 15 ಎಕರೆ ಜಮೀನಿನಲ್ಲಿ ಪಾಲು ಕೇಳಿದ್ದಳು.ಆಸ್ತಿಗಾಗಿ ಆಕೆ ಕೋರ್ಟ್ ಮೆಟ್ಟಿಲೇರಿದ್ದಳು.
ಈ ಹಿನ್ನೆಲೆಯಲ್ಲಿ ಇಂದು ತಂಗಿಯ ಮನೆಗೆ ಬಂದಿದ್ದ ಅಣ್ಣ ಕೇಸ್ ವಾಪಸ್ ಪಡೆಯುವಂತೆ ಕೇಳಿದ್ದಾನೆ.. ಆದ್ರೆ ಅದಕ್ಕೆ ಒಪ್ಪದ ಆಕೆ ಅಣ್ಣನ ಜೊತೆ ವಾಗ್ವಾದಕ್ಕಿಳಿದಿದ್ದಾಳೆ.
ಇದರಿಂದ ರೊಚ್ಚಿಗೆದ್ದ ಆರೋಪಿ, ಚಾಕು ತೆಗೆದುಕೊಂಡು ಸಿಕ್ಕಸಿಕ್ಕಲ್ಲಿ ಚುಚ್ಚಿ ಕೊಲೆ ಮಾಡಿದ್ದಾನೆ. ಕೊನೆಗೆ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಮುಂಡರಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.