ದಿನಾಂಕಃ- 04-05-2021 ರಂದು ಬೆಳಗಿನ ಜಾವ ಶಿವಮೊಗ್ಗ ನಗರದ ಹೊನ್ನಾಳಿ ರಸ್ತೆ ರಾಗಿಗುಡ್ಡ ಕ್ರಾಸ್ ನಲ್ಲಿ ಸುನಿಲ್ ರವರು ತಮ್ಮ ದ್ವಿ ಚಕ್ರ ವಾಹನದಲ್ಲಿ ಹೋಗುವಾಗ ಯಾರೋ ಮೂರು ಜನ ಅಪರಿಚಿತ ವ್ಯಕ್ತಿಗಳು ಬಂದು ಚಾಕು ತೋರಿಸಿ ಹೆದರಿಸಿ, *ರೂ 500/- ಹಣ, ಮೊಬೈಲ್ ಫೋನ್ ಹಾಗೂ ATM ಕಾರ್ಡ್ ಕಿತ್ತಿಕೊಂಡು* ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕಲಂ 392 ಐಪಿಸಿ ರಿತ್ಯ ಪ್ರಕರಣವನ್ನು ದಾಖಲಿಸಿ, ತನಿಖೆ ಕೈಗೊಂಡು ದಿನಾಂಕಃ-07-05-2021 ರಂದು ಡಿವೈಎಸ್ಪಿ ಶಿವಮೊಗ್ಗ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಸಿಪಿಐ ಶಿವಮೊಗ್ಗ ಗ್ರಾಮಾಂತರ ವೃತ್ತ, ಪಿಎಸ್ಐ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡವು *ಆರೋಪಿತರಾದ 1)ಮಹಮದ್ ನೂರುಲ್ಲಾ, 19 ವರ್ಷ, ಟಿಪ್ಪುನಗರ, ಶಿವಮೊಗ್ಗ, 2)ಮಹಮದ್ ತಬರಕ್, 19 ವರ್ಷ, ತುಂಗಾನಗರ, ಶಿವಮೊಗ್ಗ, 3)ಸಯ್ಯದ್ ಅಹಮದ್, 19 ವರ್ಷ, ಟಿಪ್ಪುನಗರ, ಶಿವಮೊಗ್ಗ* ರವರವನ್ನು ಬಂಧಿಸಿ, ಆರೋಪಿತರಿಂದ *19 ಗ್ರಾಂ 200 ಮಿಲಿ ತೂಕದ ಬಂಗಾರ ಚೈನ್, ಮೊಬೈಲ್ ಫೋನ್, ಕೃತ್ಯಕ್ಕೆ ಬಳಸಿದ ಚಾಕು ಹಾಗೂ ಬೈಕ್ ಅನ್ನು* ವಶಪಡಿಸಿಕೊಂಡಿರುತ್ತಾರೆ. ಸದರಿ ಆರೋಪಿಗಳು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ 01 ಪ್ರಕರಣ ಹಾಗೂ ವಿನೋಬನಗರ ಪೊಲೀಸ್ ಠಾಣೆಯ 02 ಪ್ರಕರಣಗಳು ಸೇರಿ ಒಟ್ಟು 03 ಪ್ರಕರಣದಲ್ಲಿ ಭಾಗಿಯಾಗಿರುತ್ತಾರೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್