ಜಿಲ್ಲೆಯ ವಿರಾಜಪೇಟೆ ನಗರ ಠಾಣಾ ಸರಹದ್ದಿನ ಕೆ.ಎಸ್.ಆರ್.ಟಿ.ಸಿ. ಮುಂಭಾಗದಲ್ಲಿ ಇರುವ ನಂಗಡ ಎಂಬ ಅಂಗಡಿ ಮಾಲೀಕರು ದಿನಾಂಕ 18-4-2021 ರಂದು ರಸ್ತೆಯ ಬದಿ ನಿಲ್ಲಿಸಿದ್ದ ಸ್ಕೂಟರು ಕಳ್ಳತನವಾದ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳ ಲಾಯಿತು. ಈ ಪ್ರಕರಣದ ಪತ್ತೆಕಾರ್ಯವನ್ನು ವಿರಾಜಪೇಟೆ ನಗರ ಠಾಣಾ ಅಪರಾಧ ವಿಭಾಗದ ಪಿ.ಎಸ್.ಐ. ಬೋಜಪ್ಪ ಹಾಗು ಸಿಬ್ಬಂದಿಗಳು ಕೈಗೊಂಡು ದಿನಾಂಕ 21-4-2021ರಂದು ಪ್ರಕರಣದ ಪ್ರಮುಖ ಆರೋಪಿ ಮಂಡ್ಯ ಜಿಲ್ಲೆಯ ಚೆನ್ನೇನಳ್ಳಿ ಗ್ರಾಮದ ಉಮೇಶ ಎಂಬಾತನ್ನು ವಿರಾಜಪೇಟೆ ಸಮೀಪದ ಕದನೂರು ಬಳಿ ಬಂಧಿಸಲು ಯಶಸ್ವಿ ಯಾದರು. ಬಳಿಕ ಮಂಡ್ಯ ಜಿಲ್ಲೆಯ ಅಂಚನಳ್ಳಿ ಗ್ರಾಮದ ಹರೀಶ ಎ.ಸಿ. ಹಾಗೂ ಎ.ವಿ. ಮನುಕುಮಾರ್ ರವರನ್ನು ವಿರಾಜಪೇಟೆ ಕೆ.ಎಸ್.ಆರ್.ಟಿ.ಸಿ. ಬಳಿ ವಶಕ್ಕೆ ಪಡೆದು ಆರೋಪಿಗಳು ಬೆಂಗಳೂರಿನ ಬಿಡದಿ , ಮೈಸೂರು, ಮಂಡ್ಯ ಕಡೆಗಳಲ್ಲಿ ಕಳ್ಳತನ ಮಾಡಿದ ಸುಮಾರು 3.5 ಲಕ್ಷ ಮೌಲ್ಯದ ಒಟ್ಟು 3 ಪಲ್ಸರ್ ಮೋಟಾರ್ ಸೈಕಲ್ ಮತ್ತು 2 ಸ್ಕೂಟರ್ ಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.ಈ ಕಳ್ಳತನ ಪ್ರಕರಕಣವನ್ನು ಶೀಘ್ರ ಪತ್ತೆಹಚ್ಚುವ ಸಂಬಂಧ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚನೆಗಳನ್ನು ನೀಡಲಾಗಿದ್ದು, ಅದರಂತೆ ವಿರಾಜಪೇಟೆ ಡಿವೈಎಸ್ಪಿ ಜಯಕುಮಾರ್ ರವರ ಹಾಗು ವಿರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್. ಶ್ರೀದರ್ ರವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ವಿರಾಜಪೇಟೆ ನಗರ ಠಾಣಾಧಿಕಾರಿ ಜಗದೀಶ್ ಧೂಳಶೆಟ್ಟಿ, ಅಪರಾಧ ವಿಭಾಗದ ಪಿಎಸ್ಎಸ್ ಬೋಜಪ್ಪ ಸಿಬ್ಬಂದಿಗಳಾದ ಮುಸ್ತಫ, ಮುನೀರ್, ಮಧು, ಎನ್.ಎಸ್. ಲೋಕೇಶ್, , ಪ್ರದೀಪ, ಚಂದ್ರಶೇಖರ, ಎಂ.ರಾಮಪ್ಪ, ತೀರ್ಥಕುಮಾರ್, ಪೂವಯ್ಯ, ಸಿಡಿಆರ್ ವಿಭಾಗದ ಗಿರೀಶ್ ಮತ್ತು ರಾಜೇಶ್ ರವರು ಭಾಗಯಾಗಿದ್ದು, ಇವರ ಕಾರ್ಯವೈಖರಿಯನ್ನು ಶ್ಲಾಘಿಸಿದೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್