ಒಟ್ಟು 36,31,000/- ಬೆಲೆ ಬಾಳುವ 32 ಮೊಬೈಲ್‌ಗಳ ವಶ.
ಚಂದ್ರಲೇಔಟ್ ಪೊಲೀಸ್ ಠಾಣೆಯ ಸರಹದ್ದಿನ ನಾಗರಭಾವಿ ಸುವರ್ಣ ಲೇಔಟ್ ರಸ್ತೆಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರಾದುದಾರರಿಂದ ಕೆ 01 ಲಕ್ಷ ಬೆಲೆ ಬಾಳುವ ಐಫೋನ್ 14ಪ್ರೋ ಅನ್ನು ಸುಲಿಗೆ ಮಾಡಿಕೊಂಡು ಹೋಗಿರುತ್ತಾರೆಂದು, ದಿನಾಂಕ:24/04/2024 ರಂದು ನೀಡಿದ್ದ ದೂರಿನ ಮೇರೆಗೆ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖಾ ಸಮಯದಲ್ಲಿ ಪಿರಾದುದಾರರ ಮೊಬೈಲ್‌ನ ಫ್ರೆಂಡ್ ಮೈ ಡಿವೈಸ್ ಅಪ್ಲಿಕೇಷನ್ ಮುಖಾಂತರ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ, ಆತನು ನೀಡಿದ ಮಾಹಿತಿ ಮೇರೆಗೆ ಮತ್ತೆ ನಾಲ್ಕು ವ್ಯಕ್ತಿಗಳನ್ನು ವಶಕ್ಕೆ ಪಡೆದು ಅವರಿಂದ ಸುಮಾರು 3 6,31,000/-ಮೌಲ್ಯದ ಒಟ್ಟು 32 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಚಂದ್ರಲೇಔಟ್ ಪೊಲೀಸ್ ಠಾಣೆಯ-03 ಮೊಬೈಲ್ ಸುಲಿಗೆ ಪ್ರಕರಣ ಪತ್ತೆಯಾಗಿರುತ್ತದೆ. ತನಿಖೆ ಮುಂದುವರೆದಿದೆ.
ಬೆಂಗಳೂರು ನಗರ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಎಸ್.ಗಿರೀಶ್ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಬ್ಯಾಟರಾಯನಪುರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಎಸ್.ಭರತ್‌ರೆಡ್ಡಿ, ರವರ ಮಾರ್ಗದರ್ಶನದಲ್ಲಿ ಚಂದ್ರಲೇಔಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅಧಿಕಾರಿ/ಸಿಬ್ಬಂದಿಯವರು ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.