ದಿನಾಂಕ:05-03-2024 ರಂದು ಪುಟ್ಟೇನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ 17ನೇ ಕ್ರಾಸ್‌ನಲ್ಲಿ ಓರ್ವ ಮಹಿಳೆ ನಡೆದುಕೊಂಡು ಹೋಗುತ್ತಿರುವಾಗ್ಗೆ, ಇಬ್ಬರು ಅಪರಿಚಿತ ವ್ಯಕ್ತಿಗಳು ದ್ವಿ-ಚಕ್ರ ವಾಹನದಲ್ಲಿ ಹಿಂಬದಿಯಿಂದ ಬಂದು ಮಹಿಳೆಯ ಕುತ್ತಿಗೆಯಲ್ಲಿದ್ದ ಒಂದು ಚಿನ್ನದ ತಾಳಿ ಇರುವ ಉಮಾಗೋಲ್ಡ್ ಚೈನ್ ನ್ನು ಕಿತ್ತುಕೊಂಡು ಪರಾರಿಯಾಗಿತ್ತಾರೆ. ಈ ಕುರಿತು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ರಾಬರಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ದಿನಾಂಕ:19-03-2024 ರಂದು ಉತ್ತರಹಳ್ಳಿ ಸರ್ಕಲ್ ಹತ್ತಿರ ವಶಕ್ಕೆ ಪಡೆದುಕೊಂಡಿರುತ್ತಾರೆ. ವಶಪಡಿಸಿಕೊಂಡ ವ್ಯಕ್ತಿಗಳಿಂದ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ವರದಿಯಾಗಿದ್ದ ಪ್ರಕರಣವು ಸೇರಿದಂತೆ ಬಗಲುಗುಂಟೆ ಪೊಲೀಸ್ ಠಾಣೆಯ ಒಂದು ಸರಗಳ್ಳತನ ಪ್ರಕರಣವನ್ನು ಸಹ ಭೇದಿಸಿರುತ್ತಾರೆ. ಇವುಗಳ ಮೌಲ್ಯ 1,80,000/- (ಒಂದು ಲಕ್ಷದ ಎಂಬತ್ತು ಸಾವಿರ ರೂಪಾಯಿ) ಗಳಾಗಿರುತ್ತದೆ.
ದಿನಾಂಕ:02-04-2024 ರಂದು ಪುಟ್ಟೇನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಬ್ರಿಗೇಡ್ ಸಿಗ್ನಲ್ ಬಳಿ ಓರ್ವ ಮಹಿಳೆಯು ನಡೆದುಕೊಂಡು ಹೋಗುತ್ತಿರುವಾಗ್ಗೆ, ಇಬ್ಬರು ಅಪರಿಚಿತ ವ್ಯಕ್ತಿಗಳು ಆಟೋದಲ್ಲಿ ಹಿಂಬದಿಯಿಂದ ಬಂದು ಮಹಿಳೆಯ ಕುತ್ತಿಗೆಯಲ್ಲಿದ್ದ ಒಂದು ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆ. ಈ ಕುರಿತು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ರಾಬರಿ ಪ್ರಕರಣ ದಾಖಲಾಗಿರುತ್ತದೆ.
ತನಿಖೆಯನ್ನು ಮುಂದವರೆಸಿದ ಪೊಲೀಸರು ದಿನಾಂಕ:14-04-2024ರಂದು ಯಳಚೇನಹಳ್ಳಿ ಆಟದ ಮೈದಾನ ಹತ್ತಿರ ಮೂವರನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ವಶಕ್ಕೆ ಪಡೆದ ವ್ಯಕ್ತಿಗಳಿಂದ 6 ಚಿನ್ನದ ಸರಗಳು, 2 ಚಿನ್ನದ ತಾಳಿ, 3 ಚಿನ್ನದ ಲಕ್ಷ್ಮೀ ಕಾಸು, ಒಂದು ಜೊತೆ ಚಿನ್ನದ ಓಲೆ, ಒಂದು ಚಿನ್ನದ ಮಾಟಿ ಮತ್ತು ಒಂದು ಆಟೋ ರಿಕ್ಷಾ ಹಾಗೂ ಒಂದು ಹೋಂಡಾ ಡಿಯೋ ವಾಹನವನ್ನು ವಶಪಡಿಕೊಂಡಿರುತ್ತಾರೆ. ಇವುಗಳ ಮೌಲ್ಯ 4,27,000/- (ನಾಲ್ಕು ಲಕ್ಷದ ಇಪ್ಪತ್ತೇಳು ಸಾವಿರ ರೂಪಾಯಿ) ಗಳಾಗಿರುತ್ತದೆ.
ದಿನಾಂಕ:20-03-2024ರಂದು ಪುಟ್ಟೇನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಚಿಕ್ಕಸ್ವಾಮಿ ಲೇಔಟ್, ಜರಗನ ಹಳ್ಳಿಯಲ್ಲಿ ವಾಸವಿರುವ ಮನೆಯೊಂದರಿಂದ ಸುಮಾರು * 5,05,000/-ಬೆಲೆ ಬಾಳುವ ಚಿನ್ನಭಾರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಮನೆಯ ಮಾಲೀಕರು ನೀಡಿದ ದೂರಿನನ್ವಯ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಳುವು ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು ಅರೋಪಿಯನ್ನು ಇಲಿಯಾಜ್ ನಗರದಲ್ಲಿ ವಶಕ್ಕೆ ಪಡೆದುಕೊಂಡಿರುತ್ತಾರೆ.
ದಿನಾಂಕ:01-04-2024ರಂದು ಪ್ರಕರಣದ ವಶಕ್ಕೆ ಪಡೆದ ವ್ಯಕ್ತಿಯಿಂದ 17 ಗ್ರಾಂ ಚಿನ್ನದ ಗಟ್ಟಿ, 36 ಗ್ರಾಂ ಚಿನ್ನದ ಸರ, ಒಂದು ಜೊತೆ ಚಿನ್ನದ ಓಲೆ 12 ಗ್ರಾಂ, ಒಂದು ಜೊತೆ ಮಾಟ 6 ಗ್ರಾಂ ಒಟ್ಟು 71 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಇವುಗಳ ಮೌಲ್ಯ 4,75,000/-(ನಾಲ್ಕು ಲಕ್ಷದ ಎಪ್ಪತ್ತೈದು ಸಾವಿರ ರೂಪಾಯಿ)ಗಳಾಗಿರುತ್ತದೆ.
ಒಟ್ಟು ಮೂರು ಪ್ರಕರಣಗಳಿಂದ ವಶಪಡಿಸಿಕೊಂಡ ಮೌಲ್ಯವು 10,82,000/- (ಹತ್ತು ಲಕ್ಷದ ಎಂಬತ್ತೆರಡು ಸಾವಿರ ರೂಪಾಯಿ)
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ, ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಲೋಕೇಶ್ ಭರಮಪ್ಪ ಜಗಲಾಸ, ಐ.ಪಿ.ಎಸ್ ರವರ ನಿರ್ದೇಶನದಂತೆ ಮತ್ತು ಸುಬ್ರಮಣ್ಯಪುರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಗಿರೀಶ್.ಎಸ್.ಬಿ ರವರ ಮಾರ್ಗದರ್ಶನದಲ್ಲಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಅಧಿಕಾರಿ/ಸಿಬ್ಬಂದಿಗಳು ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.