ವನ್ಯಜೀವಿ ಪ್ರಾಣಿಗಳು/ವಸ್ತುಗಳ ಮೌಲ್ಯವನ್ನು ನಮೂದಿಸಿರುವುದರಿಂದ ಕಳ್ಳಸಾಗಣಿಕೆ ಪ್ರಕರಣಗಳು ಹೆಚ್ಚಾಗಲು ಕಾರಣವಾಗುತ್ತವೆ. ಆದ್ದರಿಂದ ಈಗಾಗಲೇ ನೀಡಿರುವ ಜಿಂಕೆ ಕೊಂಬುಗಳ ಮೌಲ್ಯದ ಬದಲಾಗಿ ಈ ಕೆಳಕಂಡ ಮಾಹಿತಿಯನ್ನು ಮಾಧ್ಯಮದಲ್ಲಿ ಪ್ರಕಟಿಸಲು ಕೋರಿದೆ.
ಬೆಂಗಳೂರು ನಗರ ಕಾಡುಗೋಡಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ದಿನಾಂಕ:20.02.2024 ರಂದು ಭಾತಿಧಾರರು ನೀಡಿದ ಖಚಿತ ಮಾಹಿತಿಯ ಮೇರಗೆ ಜಿಂಕೆ ಕೊಂಬು ಮತ್ತು ತಲೆ ಬುರುಡೆಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರೆಂದು ದೊರೆತ ಖಚಿತ ಮಾಹಿತಿ ಮೇರೆಗೆ, ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿರುತ್ತಾರೆ. ನಂತರ ಮಾಹಿತಿ ಆಧಾರದ ಮೇಲೆ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ವಶಕ್ಕೆ ಪಡೆದು ಕೊಂಡ ವ್ಯಕ್ತಿಗಳಿಂದ ಜಿಂಕೆ ತಲೆಬುರುಡೆ ಸಹಿತ ಇರುವ 06 ಜಿಂಕೆಯ ಕೊಂಬುಗಳನ್ನು ಮತ್ತು ತಲೆಬುರುಡೆ ರಹಿತ ಇರುವ 33 ಜಿಂಕೆ ಕೊಂಬುಗಳನ್ನು (ಒಟ್ಟು 39) ವಶಪಡಿಸಿಕೊಳ್ಳಲಾಗಿದೆ. ತನಿಖೆ
ಮುಂದುವರೆದಿದೆ.
ಈ ಕಾರ್ಯಾಚರಣೆಯನ್ನು ವೈಟ್‌ಫೀಲ್ಡ್ ಉಪ ಪೊಲೀಸ್ ಆಯುಕ್ತರಾದ ಶಿವಕುಮಾರ್ ಗುಣಾರೆ, ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಮತಿ ರೀನಾ ಸುವರ್ಣ ರವರ ನೇತೃತ್ವದಲ್ಲಿ ಕಾಡುಗೋಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಅಧಿಕಾರಿ ಸಿಬ್ಬಂದಿಯವರು ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.