ವಿದ್ಯುತ್‌ ಸ್ಪರ್ಶದಿಂದ ಸ್ವಿಮ್ಮಿಂಗ್ ಪೂಲ್ ನಲ್ಲಿ ಆಟವಾಡುತ್ತಿದ್ದ ಮಗುವಿನ ಸಾವಿಗೆ ಕಾರಣರಾದ 7 ವ್ಯಕ್ತಿಗಳ ವಶ.

ಬೆಂಗಳೂರು ನಗರ ವರ್ತೂರು ಪೊಲೀಸ್ ಠಾಣಾ ಸರಹದ್ದಿನ ಪ್ರಸ್ಟೀಜ್ ಲೇಕ್ ಸೈಡ್ ಹೆಬಿಟಾಟ್ ಅಪಾರ್ಟ್‌ಮೆಂಟ್ ನಿವಾಸಿಯಾದ ಶ್ರೀ ರಾಜೇಶ್ ಕುಮಾರ್ ಧಮೆರ್ಲಾ ರವರು 28.12.2023 ರಂದು ತಮ್ಮ ಮಗಳು ಕು ಮಾನ್ಯ 9 ವರ್ಷ ಅಪಾರ್ಟ್‌ಮೆಂಟ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದು, ಸದರಿ ಸ್ವಿಮಿಂಗ್ ಪೂಲ್ ನಲ್ಲಿ ವಿದ್ಯುತ್ ಶಾಕ್ ಹೊಡೆಯುತ್ತಿರುವುದಾಗಿ ನಮ್ಮ ಅಪಾರ್ಟ್‌ ಮೆಂಟ್‌ ಮೆಂಟನೆನ್ಸ್ ರವರಿಗೆ ಹಾಗೂ ಅಲ್ಲಿ ಕೆಲಸಮಾಡುವ ಎಲೆಕ್ಟಿಷಿಯನ್ ವ್ಯಕ್ತಿಗಳಿಗೆ ತಿಳಿದಿದ್ದು, ಆದರೂ ಅವರು ಯಾವುದೇ ರೀತಿಯ ಸುರಕ್ಷತೆಯ ಕ್ರಮ ಕೈಗೊಂಡಿರುವುದಿಲ್ಲ ಇದರಿಂದ ನನ್ನ ಮಗು ಮೃತಪಟ್ಟಿರುತ್ತಾಳೆ. ಅದರಿಂದ ನನ್ನ ಮಗಳ ಸಾವಿಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಕೊಟ್ಟ ದೂರಿನ ಮೇರೆಗೆ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು, ತನಿಖೆ ಕೈಗೊಂಡ ವರ್ತೂರು ಪೊಲೀಸ್‌ರು ಪ್ರಕರಣಕ್ಕೆ ಸಂಬಂಧಿಸಿದಂತೆ 7 ವ್ಯಕ್ತಿಗಳನ್ನು ವಶಕ್ಕೆ ಪಡೆದು ಮಾನ್ಯ ನ್ಯಾಯಾಲಕ್ಕೆ ಹಾಜರುಪಡಿಸಿರುತ್ತಾರೆ. ಹಾಗೂ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಈ ರೀತಿಯ ಘಟನೆಗಳು ಕಂಡುಬಂದಲ್ಲಿ ಹೆದರದೆ ಧೈರ್ಯವಾಗಿ ಡಿ.ಸಿ.ಪಿ. ವೈಟ್‌ ಫೀಲ್ಡ್ ವಿಭಾಗ ಮೊಬೈಲ್ ನಂ. 9480801084, ಎ.ಸಿ.ಪಿ. ಮಾರತ್ತಹಳ್ಳಿ ಉಪ ವಿಭಾಗ ಮೊಬೈಲ್ ನಂ. 9480801607 ಅಥವಾ ಪೊಲೀಸ್ ಇನ್ಸ್ಪೆಕ್ಟರ್, ವರ್ತೂರು ಪೊಲೀಸ್ ಠಾಣೆ ಮೊಬೈಲ್ 9480801618 ರವರನ್ನು ನೇರವಾಗಿ ಸಂಪರ್ಕಿಸಿ ನಿರ್ಭೀತಿಯಿಂದ ದೂರು ನೀಡಬಹುದಾಗಿದೆ.

Leave a Reply

Your email address will not be published. Required fields are marked *