ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರುಗಳಿಗೆ ಹರಿಹರ ವೃತ್ತ ಕಛೇರಿಯಲ್ಲಿ ಗೌರವ ವಂದನೆ ಕಾರ್ಯಕ್ರಮವನ್ನು ಹಮ್ಮಿಕೊಡಿದ್ದು ಸದರಿ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಶ್ರೀ ನರಸಿಂಹ ವಿ ತಾಮ್ರಧ್ವಜ, ಡಿವೈಎಸ್ ಪಿ ದಾ.ಗ್ರಾ.ಉ.ವಿಭಾಗ ರವರು ವಹಿಸಿಕೊಂಡಿದ್ದು ಮುಖ್ಯ ಅತಿಧಿಗಳಾಗಿ ಶ್ರೀಮತಿ ಸವಿತಾ, ವೈದ್ಯಾಧಿಕಾರಿಗಳು ಸರ್ಕಾರಿ ಆಸ್ಪತ್ರೆ ಹರಿಹರ ರವರು ಮತ್ತು ಶ್ರೀಮತಿ ಸುಜಾತ ಗಿರಿಯಮ್ಮ ಕಾಲೇಜ್ ಪ್ರಾಚಾರ್ಯರು ಹರಿಹರ ರವರು ಹಾಗೂ ಹರಿಹರ ವೃತ್ತ ನಿರೀಕ್ಷರಾದ ಶ್ರೀ ಸತೀಶ್ ಕುಮಾರ್ ಯು ರವರು ದಾವಣಗೆರೆ ಗ್ರಾಮಾಂತರ ಠಾಣೆಯ ಪಿಐ ರವರಾದ ಶ್ರೀ ಲಿಂಗನಗೌಡ ನೇಗಳೂರುರವರು ಮತ್ತು ಶ್ರೀ ಮಂಜುನಾಥ್ ಸಿಪಿಐ ದಾವಣಗೆರೆ ಗ್ರಾಮಾಂತರ ರವರು ಹಾಗೂ ಮಲೇಬೆನ್ನೂರು ಪಿಎಸ್ಐ ರವರು ಮತ್ತು ಶ್ರೀಮತಿ ಪುಷ್ಪಲತಾ ಪಿಎಸ್ ಐ ದಾವಣಗೆರೆ ಗ್ರಾಮಾಂತರ ಠಾಣೆ ಮತ್ತು ಬಿಳಿಚೋಡು ಠಾಣಾ ಪಿಎಸ್ ಐ ಶ್ರೀಮತಿ ಶೈಲಶ್ರೀ ರವರು ಶ್ರೀಮತಿ ಕಿಲೋವತಿ ಪಿಎಸ್ ಐ ಹದಡಿ ಪೊಲೀಸ್ ಠಾಣೆ ಹಾಗೂ ಮಹಿಳಾ ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಹಾಜರಿದ್ದರು ಸದರಿ ಕಾರ್ಯಕ್ರಮ ದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಹಾಗೂ ಮಹಿಳೆಯರ ಮನೋ ಸ್ಥೈರ್ಯ ಹೆಚ್ಚಿಸುವ ಕುರಿತು ಅಧಿಕಾರಿಗಳು ಮಾತನಾಡಿರುತ್ತಾರೆ.
ಶ್ರೀಮತಿ ಸುಜಾತ ಗಿರಿಯಮ್ಮ ಕಾಲೇಜ್ ಪ್ರಾಚಾರ್ಯರು ಹರಿಹರ ರವರು ಮಾತನಾಡಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಪ್ರಬಲರು ನೀವೇ ಪ್ರಬಲರಿರುವಾಗ ಪದೇ ಪದೇ ನಾವು ಸಮಾನರು ಎಂದು ಏಕೆ ಹೇಳುತ್ತೀರಾ ಎಂದು ಮಾತನಾಡಿರುತ್ತಾರೆ. ಶ್ರೀ ನರಸಿಂಹ ವಿ ತಾಮ್ರಧ್ವಜ ಡಿವೈಎಸ್ ಪಿ ರವರು ಮಾತನಾಡಿ ಮಹಿಳೆಯರು ಇಲಾಖೆಯೊಳಗಡೆ ತಮ್ಮದೇನಾದರು ಸಮಸ್ಯೆ ಗಳಿದ್ದಲ್ಲಿ ನಮ್ಮ ಜೋತೆ ಚರ್ಚೆ ಮಾಡಬಹುದು ನಮ್ಮಿಂದ ಸಾಧ್ಯವಾದಷ್ಟು ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ತಿಳಿಸಿರುತ್ತಾರೆ
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್