ಸರಗಳ್ಳತನ ಮತ್ತು ಮನೆ ಕಳವು ಮಾಡಿದ್ದ 3 ವ್ಯಕ್ತಿಗಳ ಬಂಧನ

ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯ, 8ನೇ ಕ್ರಾಸ್‌ನಲ್ಲಿ 64 ವರ್ಷದ ವೃದ್ಧೆಯೊಬ್ಬರು ದಿನಾಂಕ 21-09-2023 ರಂದು ಸಂಜೆ ವಾಯು ವಿಹಾರದಲ್ಲಿದ್ದಾಗ ಸುಮಾರು 30 ರಿಂದ 35 ವರ್ಷದ ಅಪರಿಚಿತ ವ್ಯಕ್ತಿಯೊಬ್ಬ ವೃದ್ಧೆಯ ಹಿಂಭಾಗದಿಂದ ಬಂದು, ಅವರ ಕತ್ತಿನಲ್ಲಿದ್ದ ಸುಮಾರು 30 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುತ್ತಾನೆಂದು ವೃದ್ಧೆಯೂ ನೀಡಿದ ದೂರಿನ ಮೇರೆಗೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡ ಪೊಲೀಸರು ಕೃತ್ಯ ನಡೆದ ಸ್ಥಳದ ಅಕ್ಕಪಕ್ಕ ರಸ್ತೆಯಲ್ಲಿ ಸಿ.ಸಿ.ಕ್ಯಾಮರಾಗಳನ್ನು ಪರಿಶೀಲಿಸಿ, ಕೃತ್ಯವೆಸಗಿದ ವ್ಯಕ್ತಿಯ ಚಹರೆ ಪಡೆದುಕೊಂಡು ಪರಿಶೀಲಿಸಿ, ಕೃತ್ವದಲ್ಲಿ ಭಾಗಿಯಾಗಿರುವ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ಅವರು ನೀಡಿದ ಮಾಹಿತಿ ಮೇರೆಗೆ ಸುಮಾರು 7.26.5 ಲಕ್ಷ ಮೌಲ್ಯದ 503 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಈ ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳು ಹಳೆಯ ಎಂ.ಓ. ವ್ಯಕ್ತಿಗಳಾಗಿದ್ದು, 2023 ನೇ ಸಾಲಿನ ಆಕ್ಟೋಬರ್‌ನಲ್ಲಿ ಜಯನಗರ ಪೊಲೀಸ್ ಠಾಣೆಯ 2 ಸುಲಿಗೆ ಪ್ರಕರಣದಲ್ಲಿ ವಾರಂಟ್‌ನಲ್ಲಿ ದಸ್ತಗಿರಿಯಾಗಿ ಜೈಲಿಗೆ ಹೋಗಿ ಬಂದಿರುತ್ತಾರೆ. ಈ ವ್ಯಕ್ತಿಗಳು 12 ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿರುತ್ತದೆ. ಇವರ ಬಂಧನದಿಂದ 75ಕ್ಕೂ ಹೆಚ್ಚು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ.

ಈ ವ್ಯಕ್ತಿಗಳ ಬಂಧನದಿಂದ ಮಲ್ಲೇಶ್ವರಂ ಪೊಲೀಸ್‌ ಠಾಣೆಯ-2 ಕನ್ನ ಕಳವು ಪ್ರಕರಣ ಮತ್ತು -ಸುಲಿಗೆ ಪ್ರಕರಣ, ಸಾಮಾನ್ಯ ಕಳವು ಪ್ರಕರಣ, ಡಿ.ಜೆ.ಹಳ್ಳಿ-1 ಸಾಮಾನ್ಯ ಕಳವು ಪ್ರಕರಣ, ಮಹಾಲಕ್ಷ್ಮೀಲೇಔಟ್, ಯಶವಂತಪುರ, ರಾಜಗೋಪಾಲನಗರ ಒಂದೊಂದು ಮನೆ ಕಳವು ಪ್ರಕರಣ ಸೇರಿದಂತೆ ಒಟ್ಟು 8 ಪ್ರಕರಣಗಳು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

2. ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ 18ನೇ ಕ್ರಾಸ್ ಸಂಪಿಗೆ ರಸ್ತೆಯಲ್ಲಿರುವ ಸ್ಟಾರ್ ಗೋಲ್ಡ್ ಅಂಗಡಿಯ ಮಾಲೀಕರು ದಿನಾಂಕ 22-10-2023 ರಂದು ಮಧ್ಯಾಹ್ನ 01-30 ಗಂಟೆಗೆ ಯಾರೋ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಚಿನ್ನದ ಒಡವೆಗಳನ್ನು ಮಾರಾಟ ಮಾಡಲು ಬಂದಿರುತ್ತಾನೆಂದು ಮಾಹಿತಿ ನೀಡಿದ್ದು, ತಕ್ಷಣ ಆಪರಾಧ ವಿಭಾಗದ ಸಿಬ್ಬಂದಿಯವರು ಸ್ಥಳಕ್ಕೆ ಹೋಗಿ ಸದರಿ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಲಾಗಿ, ಕಳವು ಮಾಡಿರುವ ಚಿನ್ನಾಭರಣ ಎಂದು ತಿಳಿದು ಬಂದ ಮೇರೆಗೆ ಆ ವ್ಯಕ್ತಿ ಮತ್ತು ಮಾಲು ಸಮೇತ ಠಾಣೆಗೆ ಬಂದು ನೀಡಿದ ವರದಿ ಮೇರೆಗೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *