ಕ್ರಿಸ್ಟೋ ಕರೆನ್ಸಿ ಹೆಸರಿನಲ್ಲಿ ಸಾರ್ವಜನಿಕರಿಂದ ಅಪಾರವಾದ ಹಣವನ್ನು ಹೂಡಿಕೆ ಮಾಡಿಸಿಕೊಂಡು, ಮೋಸ ಮಾಡಿರುವ GG Online private limited ಎಂಬ ಕಂಪನಿಯ ನಿರ್ದೇಶಕರು ಮತ್ತು ಕೃತ್ಯಕ್ಕೆ ಸಹಕರಿಸಿದ ವ್ಯಕ್ತಿಗಳ ಬಂಧನ

ಆನ್‌ಲೈನ್‌ ವಂಚನೆ ಸಂಬಂಧ ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಮುಂದಿನ ತನಿಖೆಯನ್ನು ಸಿ.ಸಿ.ಬಿ. ಆರ್ಥಿಕ ಅಪರಾಧ ದಳದಲ್ಲಿ ತನಿಖೆಯನ್ನು ಕೈಗೊಳ್ಳಲಾಯಿತು. ಈ ಪ್ರಕರಣದಲ್ಲಿ ಆರೋಪಿಗಳು ಮಲ್ಲೇಶ್ವರಂ ಸಂಪಿಗೆ ರಸ್ತೆಯಲ್ಲಿ GG Online private limited ಎಂಬ ಕಂಪನಿಯ ಹೆಸರಿನಲ್ಲಿ ಕಛೇರಿಯನ್ನು ತೆರೆದು, ಸಾರ್ವಜನಿಕರಿಗೆ ತಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ GGO ಎಂಬ ಕ್ರಿಷ್ಟೋ ಕರೆನ್ಸಿಯನ್ನು ನೀಡುವುದಾಗಿ ತಿಳಿಸಿ, ಈ ಕ್ರಿಷ್ಟೋ ಕರೆನ್ಸಿಯನ್ನು ಅಂತರಾಷ್ಟ್ರೀಯ ಕ್ರಿಸ್ಟೋ ವಿನಿಮಯ ಕೇಂದ್ರದಲ್ಲಿ ಪರಿಚಯಿಸುವುದಾಗಿಯೂ, ಒಮ್ಮೆ ಅಂತರಾಷ್ಟ್ರೀಯ ಕ್ರಿಷ್ಟೋ ವಿನಿಮಯ ಕೇಂದ್ರದಲ್ಲಿ ಪರಿಚಯಿಸಿದ ನಂತರ ಇದಕ್ಕೆ ಬಿಟ್ ಕಾಯಿನ್ ಬೆಲೆ ಬರುವುದಾಗಿ ನಂಬಿಸಿ ಕಡಿಮೆ ಅವಧಿಯಲ್ಲಿ ಶ್ರೀಮಂತರಾಗುವ ಆಸೆಯನ್ನು ತೋರಿಸಿರುತ್ತಾರೆ.

ಸಾರ್ವಜನಿಕರು ಈ ಕಂಪನಿಯ ಬಗ್ಗೆ ಹೆಚ್ಚು ಪ್ರಚಾರ ಮಾಡಲೆಂದು ಮೊದಮೊದಲು ಹೂಡಿಕೆ ಮಾಡಿದವರಿಗೆ ರಿವಾರ್ಡ್ ಎಂಬ ಹೆಸರಿನಲ್ಲಿ ಪ್ರತಿ ದಿನ ಅವರು ಹೂಡಿಕೆ ಮಾಡಿದ ಹಣಕ್ಕೆ ಶೇಕಡ 15% ರಷ್ಟು ಹಣವನ್ನು ನೀಡಿದ್ದು, ಮೊದಲು ಹೂಡಿಕೆ ಮಾಡಿದ ಜನರು ಹಣ ಬರುವುದನ್ನು ನೋಡಿ ಕಂಪನಿಯವರು ಹೇಳುತ್ತಿರುವುದು ನಿಜವೆಂದು ಭಾವಿಸಿ ಹೂಡಿಕೆದಾರರು ತಮ್ಮ ಸಂಬಂಧಿಕರು, ಸ್ನೇಹಿತರಿಗೆ ಈ ವಿಷಯವನ್ನು ತಿಳಿಸಿದ್ದು, ಹಾಗೂ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್, ಇಸ್ಟಾಗ್ರಾಮ್, ವಾಟ್ಸಾಪ್ ಹಾಗೂ ಇತರೆ ಮಾದ್ಯಮಗಳಲ್ಲಿ ಸಹಾ ಪ್ರಚಾರ ಮಾಡಿರುತ್ತಾರೆ. ಇದರಿಂದ ಸುಮಾರು ಒಂದು ವರ್ಷದಲ್ಲಿ 1300-1400 ಜನರು, ಸುಮಾರು 5 ರಿಂದ 6 ಕೋಟಿ ಹಣವನ್ನು ಈ ಕಂಪನಿಯಲ್ಲಿ ಹೂಡಿಕೆ ಮಾಡಿಸಿಕೊಂಡು ಯಾರಿಗೂ ಹಣವನ್ನು ವಾಪಸ್ಸು ನೀಡದೇ ಕಂಪನಿಯವರು ಮೋಸ ಮಾಡಿರುತ್ತಾರೆ. ಅಲ್ಲದೇ ಹೂಡಿಕೆ ಮಾಡಿದವರಿಗೆ GGO ಎಂಬ ಕ್ರಿಷ್ಟೋ ಕರೆನ್ಸಿಯನ್ನು ನೀಡಿದ್ದು, ಈ ಕ್ಲಿಷ್ಟೋ ಕರೆನ್ಸಿಗೆ ಮಾರುಕಟ್ಟೆಯಲ್ಲಿ ಯಾವುದೇ ಮಾನ್ಯತೆ ಹಾಗೂ ಮೌಲ್ಯವಿರುವುದಿಲ್ಲವೆಂದು ತನಿಖಾಧಿಕಾರಿಯವರಿಗೆ ಕಂಡುಬಂದಿದ್ದರಿಂದ ಪ್ರಕರಣದಲ್ಲಿ 3 ಜನ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರೆದಿದೆ.

ಈ ಪ್ರಕರಣದಲ್ಲಿ ಅಪರ ಪೊಲೀಸ್ ಆಯುಕ್ತರು, ಪಶ್ಚಿಮ ಹಾಗೂ ಉಪ ಪೊಲೀಸ್ ಪೊಲೀಸ್ ಆಯುಕ್ತರು. ಅಪರಾಧ-2 ರವರ ಮಾರ್ಗದರ್ಶನದಲ್ಲಿ ಎ.ಸಿ.ಪಿ. ಆರ್ಥಿಕ ಅಪರಾಧ ದಳ ರವರ ನೇತೃತ್ವದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ಪ್ರಕರಣವನ್ನು ಭೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಸಾರ್ವಜನಿಕರಿಗೆ ಸೂಚನೆ: ಸಾರ್ವಜನಿಕರು ಇತ್ತೀಚಿನ ದಿನಗಳಲ್ಲಿ ಕ್ರಿಪ್ಸ್ ಕರೆನ್ಸಿಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಹಣ ಗಳಿಸಬಹುದೆಂಬ ಆಸೆಯಿಂದ ಈ ರೀತಿಯಾದ ನಕಲಿ ಕಂಪನಿಗಳಲ್ಲಿ ಹಣವನ್ನು ಹೂಡಿಕೆ ಮಾಡಿ ಮೋಸ ಹೋಗುತ್ತಿದ್ದು, ಆನ್‌ಲೈನ್‌ನಲ್ಲಿ ಅಥವಾ ಕ್ರೀಷ್ಟೋ ಕರೆನ್ಸಿ ಎಂಬ ಹೆಸರಿನಲ್ಲಿ ಯಾವುದೇ ಜಾಹೀರಾತುಗಳನ್ನು ನೋಡಿ ಹಣ ಹೂಡಿಕೆ ಮಾಡುವಾಗ ಸಾರ್ವಜನಿಕರು ಮುಂಜಾಗ್ರತೆ ವಹಿಸುವುದು ಅವಶ್ಯಕವಾಗಿರುತ್ತದೆ.

Leave a Reply

Your email address will not be published. Required fields are marked *