ಕರ್ತವ್ಯ ನಿರತ ಮಹಿಳಾ ಪಿ.ಎಸ್.ಐ. ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿಯ ಬಂಧನ

15-10-2022 ರಂದು ಬೆಳಗ್ಗೆ 8-30 ಗಂಟೆಯಿಂದ ಗೋವಿಂದರಾಜನಗರ ಪೊಲೀಸ್ ಠಾಣೆಯ ಪ್ರೊಬೇಷನರಿ ಮಹಿಳಾ ಪಿ.ಎಸ್.ಐ, ಕು. ಅಶ್ವಿನಿ ಹಿಪ್ಪರಗಿ ರವರು ಠಾಣಾ ಸರಹದ್ದಿನಲ್ಲಿ ಗಸ್ತಿನಲ್ಲಿರುವಾಗ ಸುಬ್ಬಣ್ಣ ಗಾರ್ಡನ್, ಎಸ್ ಬಿ ಐ ಬ್ಯಾಂಕ್ ರಸ್ತೆಯಲ್ಲಿ ವ್ಯಕ್ತಿಯೊಬ್ಬ ರಾಯಲ್ ಎನ್‌ಫೀಲ್ಡ್ ಬೈಕ್‌ನು ವೇಗವಾಗಿ ಹೋಗುತ್ತಿದ್ದುದನ್ನು ಕಂಡು ವೇಗವಾಗಿ ವಾಹನ
ಚಲಾಹಿಸಬೇಡಿ ಎಂದು ಬುದ್ದಿ ಹೇಳದ್ದಕ್ಕೆ ವ್ಯಕ್ತಿಯು ಮಹಿಳಾ ಪಿ.ಎಸ್.ಐ, ಅಶ್ವಿನಿ ಹಿಪ್ಪರಗಿ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಏಕವಚನದಲ್ಲಿ ಏನೇ ನೀನು ನನಗೆ ವೇಗವಾಗಿ ವಾಹನ ಚಲಾಯಿಸಬೇಡ ಎಂದು ಬುದ್ಧಿವಾದ ಹೇಳೋದು ಯೂನಿಫಾರ್ಮ್‌ ಹಾಕಿದ್ದೀಯ ಅಂತ ಕೊಬ್ಬು ಎಂದು ನಿಂದಿಸಿದ್ದು, ಏಕವಚನದಲ್ಲಿ ಮಾತನಾಡಬೇಡ ಎಂದು ಹೇಳಿದಾಗ ಆರೋಪಿಯು ಈ ಬುದ್ದಿವಾದಗಳನ್ನೆಲ್ಲಾ ನನ್ನ ಹತ್ತಿರ ಇಟ್ಟುಕೊಳ್ಳಬೇಡ, ಇದೆಲ್ಲಾ ನಿಮ್ಮ ಅಪ್ಪ ಅಮ್ಮ ಮತ್ತು ನಿನ್ನ ಪೊಲೀಸ್ ಠಾಣೆಯಲ್ಲಿ ಇಟ್ಟುಕೋ, ಎಂದು ಏರು ಧ್ವನಿಯಲ್ಲಿ ಹೇಳಿ ಮುಂದೆ ಹೋಗಿ ನಂತರ ಮಹಿರಾ ಪಿ.ಎಸ್‌.ಐ ರವರನ್ನು ಹಿಂಬಾಲಿಸಿಕೊಂಡು ಬಂದು ಉದ್ದೇಶಪೂರ್ವಕವಾಲಿ ವೇಗವಾಗಿ ಬಂದು ಮಹಿಳಾ ಪಿ.ಎಸ್.ಐ. ರವರ ಸ್ಕೋಟರ್ ಗೆ ಗುದ್ದಿದ್ದು , ಮಹಿಳಾ ಪಿ.ಎಸ್.ಐ. ರವರು ಕೆಳಗೆ ಬಿದ್ದಾಗ ಆರೋಪಿಯು ತನ್ನನ್ನು ಎದುರುಹಾಕಿಕೊಂಡರೆ ಇದೇ ಗತಿ ಎಂದು ಹೇಳಿ ಮತ್ತೆ ವೇಗವಾಗಿ ಅಲ್ಲಿಂದ ಪರಾರಿಯಾಗಿರುತ್ತಾನೆ. ಮಹಿಳಾ ಪಿಎಸ್‌ಐ ರವರ ಸಮವಸ್ತ್ರ ಹರಿದುಹೋಗಿದ್ದು, ಮುಖ ಕೈ ಕಾಲುಗಳಗೆ ರಕ್ತಗಾಯವಾಗಿದ್ದು, ತದನಂತರ ಶೋಭಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಠಾಣೆಗೆ ಹಿಂತಿರುಗಿ ಆತನ ವಿರುದ್ಧ ಕಾನೂನ ಕ್ರಮ ಕೈಗೊಳ್ಳಬೇಕೆಂದು ದೂರನ್ನು ನೀಡಿದರು.

ದೂರಿನ ಮೇರೆಗೆ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಯನ್ನು ಪತ್ತೆಮಾಡಿ, ವಶಕ್ಕೆ ಪಡೆದುಕೊಂಡಿರುತ್ತಾರೆ.

Leave a Reply

Your email address will not be published. Required fields are marked *