ಹರಿಹರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹರಿಹರ ನಗರದ ಜೆ.ಸಿ.ಬಡಾವಣೆಯಲ್ಲಿ ದಿನಾಂಕ: 15-05-2023 ರಂದು ಮನೆಕಳ್ಳತನ ಪ್ರಕರಣ ಜರುಗಿದ್ದು, ಈ ಸಂಬಂಧ ಹರಿಹರ ನಗರ ಪೊಲೀಸ್ ಠಾಣೆಯ ಗುನ್ನೆ ನಂ: 82/2023 ಕಲಂ 457 380 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ಸದರಿ ಪ್ರಕರಣದ ಆರೋಪಿತರು ಹಾಗೂ ಸ್ವತ್ತು ಪತ್ತೆಕಾರ್ಯಕ್ಕೆ ಶ್ರೀ ಬಸವರಾಜ.ಬಿ.ಎಸ್ ಪೊಲೀಸ್ ಉಪಾಧೀಕ್ಷಕರು ಗ್ರಾಮಾಂತರ ಉಪ-ವಿಭಾಗ ದಾವಣಗೆರೆ ರವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಶ್ರೀ ಬಿ ದೇವಾನಂದ ಪೊಲೀಸ್ ನಿರೀಕ್ಷಕರು, ಹರಿಹರ ನಗರ ಠಾಣೆರವರ ನೇತೃತ್ವದಲ್ಲಿ ಅಧಿಕಾರಿ-ಸಿಬ್ಬಂದಿಗಳು ಒಳಗೊಂಡ ತಂಡವನ್ನು ರಚಿಸಿದ್ದು, ಸದರಿ ತಂಡವು ಮೇಲ್ಕಂಡ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತನಾದ ವೆಂಕಟೇಶ @ ತಿಪ್ಪೆ, ವಾಸ: ವಿನೋಬನಗರ, ತುರುವೆಕೆರೆ ತುಮಕೂರು ಜಿಲ್ಲೆ ಈತನನ್ನು ಹರಿಹರ ನಗರ ಪೊಲೀಸರು ದಸ್ತಗಿರಿ ಮಾಡಿದ್ದು, ಆರೋಪಿತನಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ 4,80,000/-ರೂ ಬೆಲೆಯ 80 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.
“ನೊಂದವರಿಗೆ ನೆರವು”
ದಾವಣಗೆರೆ ಜಿಲ್ಲಾ ಪೊಲೀಸ್ ದಾವಣಗೆರೆ ಗ್ರಾಮಾಂತರ ಉಪ ವಿಭಾಗ ಹರಿಹರ ನಗರ ಪೊಲೀಸ್ ರಾಣಿ
ಮನೆಕಳ್ಳತನ ಪ್ರಕರಣದಲ್ಲಿ ಆರೋಪಿತ ಪತ್ತೆ ಹಾಗೂ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಶ್ರೀ ಬಸವರಾಜ.ಬಿ.ಎಸ್ ಪೊಲೀಸ್ ಉಪಾಧೀಕ್ಷಕರು ಗ್ರಾಮಾಂತರ ಉಪ- ವಿಭಾಗ ದಾವಣಗೆರೆ, ದೇವಾನಂದ ಪೊಲೀಸ್ ನಿರೀಕ್ಷಕರು, ಹರಿಹರ ನಗರ ಠಾಣೆ, ರವರುಗಳಾದ ಶ್ರೀ ಪ್ರವೀಣ ಕುಮಾರ,ಪಿಎಸ್‌ಐ ಶ್ರೀ ಶ್ರೀಪತಿ ಗಿನ್ನಿ, ಶ್ರೀ ಮಂಜುನಾಥ ಕಲ್ಲೇದೆವರು (ಬೆರಳುಮುದ್ರೆ ಘಟಕ)ಹಾಗೂ ಸಿಬ್ಬಂದಿಯವರಾದ ಮಂಜುನಾಥ 29.0, ದೇವರಾಜ್ ಸೂರ್ವೆ, ಮಂಜುನಾಥ ಕ್ಯಾತಮ್ಮನವರ, ಹನುಮಂತ ಗೋಪನಾಳ, ಹೇಮಾನಾಯ್ಕ, ರುದ್ರಸ್ವಾಮಿ, ಸಿದ್ದರಾಜು, ರಾಘವೇಂದ್ರ, ಶಾಂತರಾಜ್, ನಾಗರಾಜ ಕುಂಬಾರ, ಅಖರ್, ವಿರೇಶ, ಅಡಿವೆಪ್ಪನವರ್ ಮಾರುತಿ ಇವರುಗಳನ್ನೊಳಗೊಂಡ ತಂಡವು ಆರೋಪಿತರನ್ನು ಪತ್ತೆ ಮಾಡಿ ಮಾಲನ್ನು ಅಮಾನತ್ತು ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಸದರಿ ತಂಡಕ್ಕೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ರಾಮಗೊಂಡ ಬಿ ಬಸರಗಿ ರವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.
ವಿಶೇಷ ಸೂಚನೆ: ಸಾರ್ವಜನಿಕರು ತಮ್ಮ ಮನೆಗಳಿಗೆ ಬೀಗ ಹಾಕಿಕೊಂಡು ಬೇರೆ ಬೇರೆ ಊರುಗಳಿಗೆ ಹೋಗುವಾಗ ಮನೆಯಲ್ಲಿ ಬೆಲೆಬಾಳುವ ವಸ್ತುಗಳನ್ನು ಬಿಟ್ಟು ಹೋಗಬಾರದು ಹಾಗೂ ಬೀಗ ಹಾಕಿಕೊಂಡು ಹೋಗುವ ಬಗ್ಗೆ ಮುಂಚಿತವಾಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದಲ್ಲಿ ನಿಮ್ಮ ಮನೆಗಳ ಕಡೆಗೆ ಹೆಚ್ಚಿನ ಗಸ್ತು ಕರ್ತವ್ಯ ನಿರ್ವಹಿಸಲಾಗುವುದ