ಜ್ಞಾನ ಭಾರತಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ನೀರು ಕೇಳುವ ನೆಪದಲ್ಲಿ ಮೂರು ಜನ ಅಸಾಮಿಗಳು ಮನೆಗೆ ನುಗ್ಗಿ ಡ್ರಾಗರ್ ತೋರಿಸಿ ಬೆದರಿಸಿ, ಚಿನ್ನದ ಸರ ಸುಲಿಗೆ ಮಾಡಿದ್ದ ಪ್ರಕರಣ ದಾಖಲಿಸಿಕೊಂಡಿದ್ದ ಜ್ಞಾನ ಭಾರತಿ ಪೊಲೀಸರು, ಸದರಿ ಪ್ರಕರಣದ ಪತ್ತೆಗಾಗಿ ನೇಮಿಸಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ದಿನಾಂಕ:20.09.2023 ರಂದು ಮೂರು ಜನ ಅಸಾಮಿಗಳನ್ನು ದಸ್ತಗಿರಿ ಮಾಡಿ, ಅವರು ನೀಡಿದ ಮಾಹಿತಿ ಮೇರೆಗೆ ಸುಮಾರು 75,000/- ರೂ ಬೆಲೆ ಬಾಳುವ 15 ಗ ಚಿನ್ನದ ಚೈನು, ಕೃಷ್ಣಕ್ಕೆ ಬಳಸಿದ್ದ 3 ಮೊಬೈಲ್ ಫೋನ್ಗಳು, ಒಂದು ಡ್ರಾಗ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಯಶಸ್ವಿ ಕಾರ್ಯಾಚರಣೆಯನು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರವರಾದ ಶ್ರೀ ಗಿರೀಶ್ ಎಸ್., ರವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಜ್ಞಾನ ಭಾರತಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ರವರನ್ನೊಳಗೊಂಡ ತಂಡವು ದಾಳಿ ಮಾಡಿ ಮಾಲುಗಳನ್ನು ವಶಪಡಿಸಿಕೊಳ್ಳಲು ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಇಲಾಖೆಯ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.