ಕಲಬುರ್ಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ಠಾಣೆ ಹಾಗೂ ಜೇವರ್ಗಿ ಪೊಲೀಸ್ ಠಾಣೆ ವತಿಯಿಂದ ಈದ್ ಮಿಲಾದ್ ಹಾಗೂ ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಸಭೆ ಜರಗಿತು
ಶಾಂತಿ ಸಭೆಯನ್ನು ಉದ್ದೇಶಿಸಿ ಕಲಬುರಗಿ ಗ್ರಾಮಾಂತರ ಡಿವೈಎಸ್ಪಿ ಚಿಕ್ಕಮಠ ಮಾತನಾಡಿದರು. ಯಾವುದೇ ಜಾತಿ ಭೇದ ಪಕ್ಷಬೇಧ ಮತ್ತು ಶಾಂತಿಯುತವಾಗಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಮಾಡಬೇಕು ಎಂದು ತಾಲೂಕಿನ ಗಣೇಶ ಮಂಡಳಿಗೆ ಸೂಚನೆ ನೀಡಿದರು. ಯಾವುದೇ ಶಾಂತಿ ಕದಲುವ ಘಟನೆ ನಡೆದಂತೆ ಗಣೇಶ್ ಮಂಡಳಿಯ ಯುವಕರ ನೋಡಿಕೊಳ್ಳಬೇಕು. ಜೊತೆಗೆ ನಮ್ಮ ಪೊಲೀಸ್ ಠಾಣೆಯ ಆವರಣದಲ್ಲಿ ಪುರಸಭೆ ಸಯೋಗದೊಂದಿಗೆ ಗಣೇಶ್ ಇಷ್ಟಪಣೆ ಮಾಡಲು ಅನುಮತಿ ನೀಡುವ ಸಲುವಾಗಿ ವ್ಯವಸ್ಥೆ ಮಾಡಲಾಗಿರುತ್ತದೆ ಅಲ್ಲಿ ಅನುಮತಿ ಪಡೆದುಕೊಂಡು ಹೋಗಬೇಕು ಎಂದು ಹೇಳಿದರು.
ಸಿಪಿಐ ರಾಜೇ ಸಾಬ್ ನದಾಫ್ ಗಣೇಶ್ ಮತ್ತು ಈದ್ ಮಿಲಾದ್ ಹಬ್ಬವನ್ನು ಶಾಂತಿತವಾಗಿ ಸಾರ್ವಜನಿಕರು ಆಚರಣೆ ಮಾಡಬೇಕು ಎಂದು ಶಾಂತಿ ಸಭೆಯಲ್ಲಿ ಸಾರ್ವಜನಿಕರನ್ನು
ಉದ್ದೇಶಿಸಿ ಮಾತನಾಡಿದರು.
ಪಿಎಸ್ಐ ಸುರೇಶ್ ಕುಮಾರ್ ಚವಾಣ್ ಗಣಪತಿ ಪ್ರತಿಷ್ಠಾಪನೆಯ ನಿಯಮಗಳು ಸಾರ್ವಜನಿಕರಿಗೆ ತಿಳಿಸಿದರು. ಕಡ್ಡಾಯವಾಗಿ ಗಣೇಶ್ ಪ್ರತಿಷ್ಠಾಪನೆ ಮಾಡುವ ಜಾಗದ ಅನುಮತಿ ಪಡೆದಿರಬೇಕು. ಜೊತೆಗೆ ಅಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತ ಸ್ಥಳವಾಗಿರಬೇಕು. ರಾತ್ರಿ 10:00 ಒಳಗೆ ಧ್ವನಿವರ್ಧಕ ಬಳಸಬೇಕು ಅದರ ಮೇಲ್ಪಟ್ಟ ಧ್ವನಿವರ್ಧಕಗಳು ಬಳಸಬಾರದು. ಅಹಿತಕರ ಘಟನೆ ಕಂಡು ಬಂದಲ್ಲಿ ಅಂತವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಸುರೇಶ್ ಕುಮಾರ ಚವಾಣ್ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಲ್ಕಣ್ಣ ಪೂಜಾರಿ ಶ್ರೀರಾಮ ಸೇನೆ ತಾಲೂಕ ಅಧ್ಯಕ್ಷರು, ಗಿರೀಶ್ ತುಂಬಗಿ, ಮೈಬೂಬ್ ಚನ್ನೂರ್, ಚಂದ್ರಶೇಖರ್ ತುಂಬಗಿ,ಅಲ್ಲಾಭಕ್ಷ್ ಭಗವಾನ್, ಮೈನುದ್ದೀನ್ ಇನಾಮ್ದಾರ್, ಬಸವರಾಜ್ ಬಾಗೇವಾಡಿ, ಸಿದ್ದು ಗಜ, ಭೀಮರಾಯ, ರವಿ ಕುಳಗೇರಾ
ಪೊಲೀಸ್ ಸಿಬ್ಬಂದಿಗಳಾದ ಸಿದ್ದರಾಮ್ ಕ್ರೈಂ ಪಿಎಸ್ಐ, ಶ್ರೀಮಂತ್ ನೇರಡಗಿ, ಯಲ್ಲಾಲಿಂಗ,ಭೀಮಣ್ಣ, ಬಸವರಾಜ್, ಪೊಲೀಸ್ ಸಿಬ್ಬಂದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ:- ಸಿದ್ದಪ್ಪ ಪಟ್ಟೇದಾರ್