ಜ್ಞಾನಭಾರತಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ರಾತ್ರಿ ವೇಳೆಯಲ್ಲಿ ಮನೆ ಬೀಗ ಮುರಿದು ಕಳವು
ಮಾಡುತ್ತಿದ್ದ ಪ್ರಕರಣಗಳ ಪತ್ತೆಗಾಗಿ ನೇಮಿಸಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಇಬ್ಬರು ಆಸಾಮಿಗಳನ್ನು ದಸ್ತಗಿರಿ ಮಾಡಿ, ಅವರು ನೀಡಿದ ಮಾಹಿತಿ ಮೇರೆಗೆ ಸುಮಾರು 230 ಗ್ರಾಂ ಚಿನ್ನದ ಆಭರಣಗಳು, 72 ಗ್ರಾಂ ಬೆಳ್ಳಿಯ ಅಭರಣಗಳು, 260 ಗ್ರಾಂ ಚಿನ್ನದ ಲೇಪಿತ ಆಭರಣಗಳು, 2 ರಾಡೋ ವಾಜ್ ಹಾಗೂ 4 ಲಕ್ಷ ನಗದು
ಹಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಸದರಿ ಕಾರ್ಯಚರಣೆಯನ್ನು ಬೆಂಗಳೂರು ನಗರದ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಲಕ್ಷ್ಮಣ್.ಬ.ನಿಂಬರಗಿ, ಕೆಂಗೇರಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಹೆಚ್.ಎಸ್.ಪರಮೇಶ್ವರ್ ರವರುಗಳ ಮಾರ್ಗದರ್ಶನದಲ್ಲಿ ಜ್ಞಾನಭಾರತಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ. ರವಿ.ಎಂ.ಎಸ್ ರವರ ನೇತೃತ್ವದ ಅಪರಾಧ ವಿಭಾಗದ ಸಿಬ್ಬಂದಿರವರುಗಳ ತಂಡ ಕಾರ್ಯಚಾರಣೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.