ಗೋವಿಂದರಾಜನಗರ ಪೊಲೀಸ್ ಠಾಣಾ ಸರಹದ್ದಿನ ಎಂ.ಆರ್.ಸಿ.ಆರ್ ಲೇಔಟ್ ಬಳಿ ಒಬ್ಬ ಅಸಾಮಿಯು ಮಾದಕವಸ್ತು ಎಂ.ಡಿ.ಎಂ.ಎ ನ್ನು ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ, ಕಾರ್ಯಪ್ರವೃತ್ತರಾದ ಗೋವಿಂದರಾಜನಗರ ಪೊಲೀಸರು ದಾಳಿ ಮಾಡಿ, ಒಬ್ಬ ಆಸಾಮಿಯನ್ನು ದಸ್ತಗಿರಿ ಮಾಡಿ ಆತನಿಂದ ಸುಮಾರು 55 ಗ್ರಾಂ ತೂಕದ ಎಂ.ಡಿ.ಎಂ.ಎ ಮಾದಕ ವಸ್ತು ಹಾಗೂ 2 ಮೊಬೈಲ್ ಮೊನ್ಗಳನ್ನು ಅಮಾನತ್ತು ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಕಾರ್ಯಾಚರಣೆಯನ್ನು ಪಶ್ಚಿಮ ವಿಭಾಗದ, ಉಪ-ಪೊಲೀಸ್ ಆಯುಕ್ತರಾದ ಮಾನ್ಯ ಶ್ರೀ ಲಕ್ಷ್ಮಣ್ ಬ ನಿಂಬರಗಿ ರವರ ಮಾರ್ಗದರ್ಶನದಲ್ಲಿ ಶ್ರೀ ಚಂದನ್ ಕುಮಾರ್ ಸಹಾಯಕ ಪೊಲೀಸ್ ಆಯುಕ್ತರು. ವಿಜಯನಗರ ಉಪ-ವಿಭಾಗ ರವರ ನೇತೃತ್ವದಲ್ಲಿ ಗೋವಿಂದರಾಜನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್
ಶ್ರೀ ಸುಬ್ರಮಣಿ ಕೆ. ಹಾಗೂ ಸಿಬ್ಬಂದಿಯವರುಗಳು ಆರೋಪಿಯನ್ನು ಬಂಧಿಸಿ ಮಾಲನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಬೆಂಗಳೂರು ನಗರದ ಹಿರಿಯ ಅಧಿಕಾರಿಗಳು ಪ್ರಶಂಮಿಸಿರುತ್ತಾರೆ.