ಪುಲಕೇಶಿ ನಗರ ಪೊಲೀಸ್ ಠಾಣಾ ಸರಹದಿನ ಮಾಸ್ಕ್ , ರಸ್ತೆಯ ಗ್ರೀನ್ ಅವೆನ್ಯೂ ಅಪಾರ್ಟಮೆಂಟ್ ನಂ.77ರ ಮನೆಯಲ್ಲಿ ದಿನಾಂಕ: 17-08-2022 ರಂದು ಸೇವಕನಿಂದ ಚಿನ್ನಾಭರಣಗಳು ಕಳ್ಳತನವಾಗಿದ್ದು, ಈ ಬಗ್ಗೆ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.
ಸದರಿ ಪ್ರಕರಣದ ಪತ್ತೆಗಾಗಿ ಕಾರ್ಯಪ್ರವೃತ್ತರಾದ ಪೊಲೀಸರು ವಿಶೇಷ ತಂಡವನ್ನು ರಚಿಸಿ, ಆರೋಪಿಯ ಹಾಗೂ ಚಿನ್ನಾಭರಣಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಲಾಗಿ ಒಬ್ಬ ಆಸಾಮಿಯನ್ನು ವಿಚಾರಣೆಗೊಳಪಡಿಸಿರುತ್ತದೆ. ಗುಮಾನಿ ಆಸಮಿಯು ದಿನಾಂಕ:21-08-2023 ರಂದು ಗ್ರೀನ್ ಅವಿನಿಯೂ ಅಪಾರ್ಟಮೆಂಟ್ ಟೆರೇಸ್ ಮೇಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಪುಲಕೇಶಿ ನಗರ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಪ್ರಕರಣ ದಾಖಲಾಗಿರುತ್ತದೆ. ಆಸ್ಸಾಮಿಯ ಪತ್ನಿಯು ದಿನಾಂಕ: 30-03-2023 ರಂದು ಠಾಣೆಗೆ ಹಾಜರಾಗಿ ಕಳ್ಳತನ ಪ್ರಕರಣದಲ್ಲಿ ಕಳುವಾಗಿದ್ದ ಅಂದಾಜು ಮೌಲ್ಯ 1 ಕೋಟಿ 50 ಲಕ್ಷ ರೂಪಾಯಿಗಳಷ್ಟು ಬೆಲೆಬಾಳುವ ಚಿನ್ನಾಭರಣಗಳು ಮತ್ತು ವಿದೇಶಿ ಕರೆನ್ಸಿ ಹಣವನ್ನು ತನ್ನ ಮನೆಯಲ್ಲಿದಿದ್ದಾಗಿ ತಿಳಿಸಿ, ಠಾಣೆಗೆ ಹಾಜರುಪಡಿಸಿರುತ್ತಾರೆ.
ಜೆಕ್ ರಿಪಬ್ಲಿಕ್ ಕಾಯಿನ್‌ಗಳು, ಯೂನೈಟೆಡ್ ಅರಬ್ ನಾಣ್ಯಗಳು, ಯೂರೋಪಿನ ಸೆಂಟ್‌ನ ಕಾಯಿನ್‌ಗಳು, ಭಾರತ ದೇಶದ ಎರಡು ಸಾವಿರ ಮುಖ ಬೆಲೆಯ 02 ನೋಟುಗಳು, ಯು.ಎಸ್.ಎ 10 ಡಾಲರ್‌ನ ಮುಖಬೆಲೆಯ ಎರಡು ನೋಟುಗಳು ಹಾಗೂ 01 ಡಾಲರ್‌ನ ಮುಖ ಬೆಲೆ ಇರುವ !! ನೋಟುಗಳು, ಯು.ಎ.ಎ ದೇಶದ 10 ದಿರಂಸ್ ಮುಖ ಬೆಲೆ ಇರುವ ಎರಡು ನೋಟುಗಳು, ಹಾಗೂ ಇತರೆ ವಿವಿಧ ವಿದೇಶಿ ಕರೆನ್ಸಿ ಹಣವು ಕಂಡು ಬಂದಿರುತ್ತದೆ.
ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಭೀಮಾಶಂಕರ ಎಸ್.ಗುಳೇದ್, ಶ್ರೀಮತಿ ಗೀತಾ ಸಿ.ಆರ್, ಸಹಾಯಕ ಪೊಲೀಸ್ ಆಯುಕ್ತರು, ಪುಲಕೇಶಿ ನಗರ ಉಪ ವಿಭಾಗ, ಶ್ರೀ ಸೋಮಶೇಖರ್ ಟಿ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ವರ್ಗದವರು ಪ್ರಕರಣ ಬೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಮೇಲ್ಕಂಡ ಅಧಿಕಾರಿಗಳ ಮತ್ತು ಸಿಬ್ಬಂದಿಯವರುಗಳ ಕರ್ತವ್ಯವನ್ನು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ. ಬಿ.ದಯಾನಂದ ರವರು ಮತ್ತು ಅಪರ ಪೊಲೀಸ್ ಆಯುಕ್ತರು ಪೂರ್ವ
ಶ್ರೀ ರಮಣ್ ಗುಪ್ತಾರವರು ಶ್ಲಾಘಿಸಿರುತ್ತಾರೆ.