ಚನ್ನಗಿರಿ ಉಪವಿಭಾಗ ಠಾಣಾ ಸರಹದ್ದುಗಳಲ್ಲಿ ಶ್ರೀ ಗಂಧ ಮರ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು ಈ ಪ್ರಕರಣಗಳನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಾಮಗೊಂಡ ಬಿ ಬಸರಗಿ ಹಾಗೂ ಮಾನ್ಯ ಪೊಲೀಸ್ ಉಪಾಧೀಕ್ಷರು ಚನ್ನಗಿರಿ ರವರಾದ ಡಾ. ಸಂತೋಷ ಕೆ.ಎಂ, ದಾವಣಗೆರೆ ಗ್ರಾಮಾಂತರ ಉಪವಿಭಾಗದ ಉಪಾಧೀಕ್ಷಕರಾದ ಶ್ರೀ ಬಸವರಾಜ ಬಿ.ಎಸ್ ರವರ ಮಾರ್ಗದರ್ಶನದಲ್ಲಿ ಸಿಪಿಐ ಸಂತೇಬೆನ್ನೂರು ವೃತ್ತ ಶ್ರೀ ಲಿಂಗನಗೌಡ ನೆಗಳೂರು ರವರ ನೇತೃತ್ವದಲ್ಲಿ ಪಿ.ಎಸ್.ಐ ಸಂತೇಬೆನ್ನೂರು ಶ್ರೀಮತಿ ರೂಪಾ ತೆಂಬದ್ ಹಾಗೂ ಸಿಬ್ಬಂದಿಯವರಾದ ಶ್ರೀ ಸತೀಶ, ಶ್ರೀ ರುದ್ರೇಶ ಎಂ. ಉಮೇಶ ರೆಡ್ಡಿ, ಶ್ರೀ ಆಂಜನೇಯ, ಶ್ರೀ ರಾಘವೇಂದ್ರ, ಶ್ರೀ ಪ್ರವೀಣಗೌಡ ಶ್ರೀ ನಾಗಭೂಷಣ, ಬಸವಾಪಟ್ಟಣ ಠಾಣೆಯ ಶ್ರೀ ಹಿಬ್ರಾಹಿಂ ಮನ್ನಖಾನ್, ಶ್ರೀ ಪ್ರಕಾಶ ಚನ್ನಗಿರಿ ಪೊಲೀಸ್ ಠಾಣೆಯ ಬೀರೆಶ ಪುಟ್ಟಕ್ಕನವರ ಶ್ರೀ ರಘು, ಶ್ರೀ ಲೋಕೇಶ ರವರನ್ನು ಒಳಗೊಂಡ ತಂಡವು
ದಿನಾಂಕ: 02- 09-2023 ರಂದು ಆರೋಪಿತರಾದ- 01) ಇಸ್ಮಾಯಿಲ್, 40 ವರ್ಷ, ಮರಕೋಯ್ಯುವ ಕೆಲಸ, ವಾಸ ಗಾಳಿಹಳ್ಳಿ ಗ್ರಾಮ, ಚನ್ನಗಿರಿ ತಾಲ್ಲೂಕ್, 02) ಜಬೀವುಲ್ಲಾ, 45 ವರ್ಷ ಮರಕೋಯ್ಯುವ ಕೆಲಸ ವಾಸ ದಡಂಗಟ್ಟೆ ಗ್ರಾಮ, ಭದ್ರಾವತಿ ತಾ||, 03) ಹೈದರ್ ಖಾನ್, 30 ವರ್ಷ, ಬೈಕ್ ಮ್ಯಾಕಾನಿಕ್ ಕೆಲಸ, ಸೂಳೆಬೈಲು ಶಿವಮೊಗ್ಗ ಟೌನ್ ಇವರುಗಳನ್ನು ದಸ್ತಗಿರಿ ಮಾಡಿದ್ದು, ಸದರಿ ಆರೋಪಿತರು ಚನ್ನಗಿರಿ ಪೊಲೀಸ್ ಠಾಣೆಯ 03 ಪ್ರಕರಣಗಳು, ನ್ಯಾಮತಿ ಪೊಲೀಸ್ ಠಾಣೆಯ 02 ಪ್ರಕರಣಗಳು, ಬಸವಾಪಟ್ಟಣ ಠಾಣೆಯ 01 ಪ್ರಕರಣ ಮತ್ತು ಸಂತೇಬೆನ್ನೂರು ಠಾಣೆಯ 01 ಪ್ರಕರಣ ಒಟ್ಟು 07 ಶ್ರೀಗಂಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿರುತ್ತದೆ.
ಆರೋಪಿತರಿಂದ ಮೇಲ್ಕಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 6,50,000/- ರೂ ಬೆಳೆಬಾಳುವ 61 ಕೆ.ಜಿ ಶ್ರೀಗಂಧದ ಮರದ ತುಂಡುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ 01 ಬೈಕ್, 02 ಕೈ ಗರಗಸ, 01 ಮಚ್ಚು, 01 ಕೊಡಲಿಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.ಶ್ರೀಗಂಧ ಮರಗಳ್ಳತನ ಪ್ರಕರಣಗಳಲ್ಲಿನ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಪ್ರಶಂಸನೆ ವ್ಯಕ್ತಪಡಿಸಿರುತ್ತಾರೆ.