ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮನೆಯೊಂದರ ಮುಂದೆ ನಿಲ್ಲಿಸಿದ್ದ ಸುಮಾರು 65,000/- ಬೆಲೆ ಬಾಳುವ ಟ್ರಿಕ್ ಬಾಂಡ್ನ ನಿಯಾನ್ (ಹಸಿರು) ಬಣ್ಣದ ಮಾರ್ಲಿನ್- 7 ಸೈಕಲನ್ನು ದಿನಾಂಕ 14-08-2023 ರಂದು ಯಾರೋ ಕಳವು ಮಾಡಿಕೊಂಡು ಹೋಗಿದ್ದು, ಪತ್ತೆ ಮಾಡಿ ಕೊಡಬೇಕೆಂದು ಏರಾದುದಾರರು ನೀಡಿದ ದೂರಿನ ಮೇರೆಗೆ 29,07,2023 ರಂದು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ.
ಸದರಿ ಪ್ರಕರಣದ ತನಿಖೆಯನ್ನು ಕೈಗೊಂಡು ಕಾರ್ಯ ಪೃವೃತ್ತರಾದ ಪೊಲೀಸರು ಕೃತ್ಯ
ನಡೆದ ಸ್ಥಳದ ಸಮೀಪದ ಹಲವಾರು ಸಿ.ಸಿ ಟಿವಿಗಳನ್ನು ಪರಿಶೀಲಿಸಿ, ದಿನಾಂಕ: 15/08/2023 ಆರೋಪಿಯನ್ನು ದಸ್ತಗಿರಿ ಮಾಡಿ ಸೈಕಲ್ ನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಆತನು ನೀಡಿದ ಮಾಹಿತಿ ಮೇರೆಗೆ, ಬೆಂಗಳೂರು ನಗರದ ಮಲ್ಲೇಶ್ವರಂ, ಶ್ರೀರಾಮಪುರ, ಸದಾಶಿವನಗರ, ವೊಯ್ಯಾಲಿಕಾವಲ್, ಯಶವಂತಪುರ, ಶೇಷಾದ್ರಿಪುರಂ ಮತ್ತು ರಾಜಾಜಿನಗರ, ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಮಾಡಿದ್ದ ವಿವಿಧ ಕಂಪನಿಯ ಸುಮಾರು 5,00,000/-ರೂ ಬೆಲೆ ಬಾಳುವ ಒಟ್ಟು 19 ಸೈಕಲ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಮಲ್ಲೇಶ್ವರಂ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಈ ಪ್ರಕರಣದಲ್ಲಿ ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಶಿವಪ್ರಕಾಶ ದೇವರಾಜ್, ರವರ ಮಾರ್ಗದರ್ಶನದಲ್ಲಿ ಮಲ್ಲೇಶ್ವರಂ ಉಪ ವಿಭಾಗದ ಎ.ಸಿ.ಪಿ ಶ್ರೀ, ಕೃಷ್ಣಮೂರ್ತಿ, ರವರ ನೇತೃತ್ವದಲ್ಲಿ, ಮಲ್ಲೇಶ್ವರ ಪೊಲೀಸ್ ಠಾಣೆ ಪೊಲೀಸ್ ಇನ್ಸಪೆಕ್ಟರ್ ಶ್ರೀ ಚಂದ್ರಶೇಖರ್ ಸಿಬ್ಬಂದಿಯವರುಗಳು ಆರೋಪಿಯನ್ನು ಬಂದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಬೆಂಗಳೂರು ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.