ಅಮೆಜಾನ್ ಟಾನ್ಸ್‌ಪೋರ್ಟ್‌ಷನ್ ಸರ್ವಿಸ್ ಪ್ರೈವೆಟ್ ಲಿಮಿಟೆಡ್ (ಎ.ಟಿ.ಎಸ್.ಪಿ.ಎಲ್) ಕಂಪನಿಯ ಮ್ಯಾನೇಜರ್ ರವರು ದಿನಾಂಕ 21-05-2023 ರಂದು ಯಶವಂತಪುರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರೇನೆಂದರೆ ತಮ್ಮ ಕಂಪನಿಗೆ ಯಾವುದೋ ಮೂಲದಿಂದ ಕೆಲವು ಗ್ರಾಹಕರುಗಳು ಮಾಡುತ್ತಿದ್ದು, ಇದರಿಂದ ತಮ್ಮ ಕಂಪನಿಗೆ ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗುತ್ತಿದ್ದರಿಂದ ಯಾವ ಮೂಲದಿಂದ ನಷ್ಟ ಆಗುತ್ತಿದೆಂದು ಪತ್ತೆ ಮಾಡಬೇಕೆಂದು ಪರಿಶೀಲನೆ ಮಾಡುತ್ತಿದ್ದ ಸಮಯದಲ್ಲಿ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಿಳಾಸಕ್ಕೆ ವ್ಯಕ್ತಿಯೊಬ್ಬ ದಿನಾಂಕ 15-05-2023 ರಿಂದ ವಿವಿಧ ದಿನಾಂಕಗಳಲ್ಲಿ ವಿವಿಧ ಮಾದರಿಯ 4 ಆಫಲ್ ಐ ಫೋನ್‌ಗಳನ್ನು ಒಂದೇ ವಿಳಾಸ ನೀಡಿ, ಆನ್‌ಲೈನ್ ಮೂಲಕ ಹಣ ಪಾವತಿಸಿ ಆರ್ಡರ್ ಮಾಡಿದ್ದು, ನಂತರ ಈ ಮೊಬೈಲ್‌ಗಳನ್ನು ಬುಕ್ ಮಾಡಿದ ವ್ಯಕ್ತಿಯು ಆರ್ಡ‌್ರಅನ್ನು ಅಪ್ಲಿಕೇಷನ್‌ನಲ್ಲಿ ವಾಪಸ್ಸು ಮಾಡಿದ್ದು, ಆದರೆ ಸದರಿ ಮೊಬೈಲ್ ಫೋನ್‌ಗಳು ತಮ್ಮ ಕಂಪನಿಗೆ ಹಿಂತಿರುಗಿಸದೇ ಆ ವ್ಯಕ್ತಿಗೆ ಪಾವತಿಸಿದ ಹಣ ಕಂಪನಿಯಿಂದ ವಾಪಸ್ತು ಒಂದು ಕಂಪನಿಗೆ ನಷ್ಟವಾಗಿರುತ್ತದೆ. ಈ ಕುರಿತು ಕಂಪನಿಯವರು ಸದರಿ ಗ್ರಾಹಕನ ಮೇಲೆ ಅನುಮಾನಿಸಿ, ಗ್ರಾಹಕರು ಆರ್ಡರ್ ಬುಕ್ ಮಾಡಿದ ವಿಳಾಸಕ್ಕೆ ಕಂಪನಿಯ ಪರಿಶೀಲನಾ ತಂಡ ಗ್ರಾಹಕರನ್ನು ಭೇಟಿ ಮಾಡಿ ಪರಿಶೀಲಿಸಿದಾಗ ಕಂಪನಿಗೆ ನಷ್ಟವಾಗುತ್ತಿರುವ ವಿಚಾರ ತಿಳಿದ್ದು, ಈ ಕುರಿತು ಯಶವಂತಪುರ ಪೊಲೀಸ್ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಪತ್ತೆ ಕಾರ್ಯವನ್ನು ಕೈಗೊಂಡ ತನಿಖಾ ತಂಡ ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ ಆತನ ಮಾಹಿತಿ ಮೇರೆಗೆ ಮತ್ತು ಅಮೆಜಾನ್ ಕಂಪನಿಯವರು ನೀಡಿದ ದತ್ತಾಂಶ (ಡೇಟಾ) ವಿವರವನ್ನು ಆಧರಿಸಿ ಸುಮಾರು 20,34 ಲಕ್ಷ ರೂ. ಬೆಲೆ ಬಾಳುವ ಆಫಲ್ ಐ ಫೋನ್ ಕಂಪನಿಯ ವಿವಿಧ ಮಾಡೆಲ್ 16 ಮೊಬೈಲ್ ಫೋನ್‌ಗಳು, ವಿವೋ ಕಂಪನಿಯ 1-ಮೊಬೈಲ್ ಫೋನ್, 02-ಮ್ಯಾಕ್ ಬುಕ್‌ಗಳು, 1-ಕಂಪ್ಯೂಟರ್ ಡೆಸ್ಕ್‌ಟಾಪ್, I-ಗೇಮಿಂಗ್ ಲ್ಯಾಪ್‌ಟಾಪ್, I-ಲೈಫಲ್ ಕಂಪನಿಯ ಏರ್ ಪಾಡ್ಸ್, 1-ಪ್ಯಾನಸೋನಿಕ್ ಕಂಪನಿಯ ಎ.ಸಿ, 2.5 ಲಕ್ಷ ರೂ. ನಗದು ಹಣ ಇದರ ಜೊತೆಗೆ ವಿವಿಧ ಬ್ಯಾಂಕ್ ಖಾತೆಯಲ್ಲಿ 30 ಲಕ್ಷ ರೂ. ಹಣವನ್ನು ಪ್ರೀಜ್ ಮಾಡಲಾಗಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಸೇರಿದಂತೆ ಇನ್ನು ಹೆಚ್ಚಿನ ಆರೋಪಿಗಳು ಭಾಗಿಯಾಗಿರುವುದಾಗಿ ತಿಳಿದು ಬಂದಿದ್ದು, ಅವರುಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.
ಈ ಪ್ರಕರಣದಲ್ಲಿ ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಟೆಲಿಗ್ರಾಂ ಆಫ್ ಮೂಲಕ ಈ ಪ್ರಕರಣದಲ್ಲಿನ ಪ್ರಮುಖ ಆರೋಪಿಯು ದಸ್ತಗಿರಿಯಾಗಿರುವ ಆರೋಪಿಯನ್ನು ಸಂಪರ್ಕಿಸಿ, ಕಮೀಷನ್ ಅಮಿಷವೊಡ್ಡಿ ಗ್ರಾಹಕರುಗಳ ರೀತಿಯಲ್ಲಿ ಅಮೆಜಾನ್ ಆಫ್‌ನಲ್ಲಿ ವಿವಿಧ ಪ್ರತಿಷ್ಠಿತ ಕಂಪನಿಯ ಮೊಬೈಲ್ ಫೋನ್ ಮತ್ತು ಲ್ಯಾಪ್ ಟಾಪ್‌ಗಳು ಹಾಗೂ ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಆರ್ಡರ್ ಮಾಡಿಸಿ ಆನ್‌ಲೈನ್‌ನಲ್ಲಿ ಹಣ ಪಾವತಿಸಿ ನಂತರ ಆರ್ಡರ್ ಕ್ಯಾನ್ಸಲ್ ಮಾಡಿ, ಆರ್ಡರ್ ಮಾಡಿದ ವಸ್ತುಗಳನ್ನು ಆಮೆಜಾನ್ ಕಂಪನಿಗೆ ಆ್ಯಪ್‌ನಲ್ಲಿ ವಾಪಸ್ಸು ಮಾಡಿದಂತೆ ತೋರಿ ಗ್ರಾಹಕರ ಬಳಿ ಆರ್ಡರ್ ಮಾಡಿದ ವಸ್ತುಗಳನ್ನು ಉಳಿಸಿ, ಈ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿ ಗ್ರಾಹಕರಿಂದ ಕ್ರಿಷ್ಟೋ ಕರೆನ್ಸಿ ಮೂಲಕ ಕಮೀಷನ್ ಪಡೆದು ಅಮೆಜಾನ್ ಕಂಪನಿಗೆ ಮೋಸ ಮಾಡಿ ನಷ್ಟವುಂಟು ಮಾಡಿರುವುದಾಗಿ ತಿಳಿದು ಬಂದಿರುತ್ತದೆ.
ಈ ಪ್ರಕರಣದಲ್ಲಿ ಶ್ರೀ ಶಿವ ಪ್ರಕಾಶ್, ದೇವರಾಜು, ಉಪ ಪೊಲೀಸ್ ಆಯುಕ್ತರು, ಉತ್ತರ ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀಮತಿ ಮೇರಿ ಶೈಲಜ, ಎಸಿಪಿ, ಯಶವಂತಪುರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಸುರೇಶ್ ಕೆ., ಪೊಲೀಸ್ ಇನ್ಸ್‌ಪೆಕ್ಟರ್, ಯಶವಂತಪುರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಶ್ರೀ ನಿತ್ಯಾನಂದಾಚಾರಿ, ಪಿಎಸ್‌ಐ ಹಾಗೂ ಸಿಬ್ಬಂದಿಯವರುಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.