ದಿನಾಂಕ: 07-08-2023 ರಂದು ಶ್ರೀಮತಿ ಲಲಿತಮ್ಮ ಕೋಂ ಲೇ॥ ರಮೇಶ್, 55ವರ್ಷ, ಮನೆ ಕೆಲಸ, ವಾಸ: ಕರಿಯಮ್ಮ
ದೇವಸ್ಥಾನದ ಮುಂದೆ, ಶ್ರೀರಾಮನಗರ, ದಾವಣಗೆರೆ ಇವರು ಠಾಣೆಗೆ ಹಾಜರಾಗಿ ನೀಡಿದ ದೂರು ಏನೆಂದರೆ, ದಾವಣಗೆರೆ
ಶ್ರೀರಾಮನಗರ ವಾಸಿಯಾದ ನಮ್ಮ ತಂಗಿ ತಿಮ್ಮಕ್ಕನ ಮಗ ನರಸಿಂಹ, 26 ವರ್ಷ ಮಲ್ಲಶೆಟ್ಟಿಹಳ್ಳಿ ಹತ್ತಿರ ಎನ್.ಹೆಚ್-48 ರಸ್ತೆಯ
ಸರ್ವಿಸ್ ರಸ್ತೆಯಲ್ಲಿ ತೀರಿಕೊಂಡಿರುತ್ತಾನೆಂದು ತಿಳಿದು ಬಂದ ಮೇರೆಗೆ ಕೂಡಲೇ ಅಲ್ಲಿಗೆ ಹೋಗಿ ನೋಡಲಾಗಿ ಸರ್ವಿಸ್ ರಸ್ತೆಯ
ಬದಿಯಲ್ಲಿ ನರಸಿಂಹನ ಹೆಣ ಬಿದ್ದಿದ್ದು, ಈತನ ತಲೆಗೆ ಬಲವಾದ ರಕ್ತಗಾಯವಾಗಿ ನೆಲದ ಮೇಲೆ ರಕ್ತ ಹರಿದಿತ್ತು. ದಿನಾಂಕ:06-08-2023 ರಂದು ರಾತ್ರಿ ಯಾವುದೋ ಸಮಯದಲ್ಲಿ ನರಸಿಂಹನ ತಲೆಗೆ ಯಾರೋ ಯಾವುದೋ ಕಾರಣಕ್ಕೆ ಬಲವಾದ ವಸ್ತುವಿನಿಂದ
ಹೊಡೆದು ಕೊಲೆ ಮಾಡಿರುತ್ತಾರೆ. ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಠಾಣಾ ಗುನ್ನೆ
ನಂ:264/2023 ಕಲಂ:302 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಪ್ರಕರಣದ ಆರೋಪಿತರ ಪತ್ತೆಕಾರ್ಯಕ್ಕೆ ಶ್ರೀ ರಾಮಗೊಂಡ ಬಸರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ದಾವಣಗೆರೆ ಜಿಲ್ಲೆ ರವರು ಮತ್ತು ಶ್ರೀ ಬಸವರಾಜ್ ಬಿ.ಎಸ್, ಡಿ.ವೈ.ಎಸ್.ಪಿ, ಗ್ರಾಮಾಂತರ ಉಪ ವಿಭಾಗ, ದಾವಣಗೆರೆ ರವರ ಮಾರ್ಗದರ್ಶನದಲ್ಲಿ ಶ್ರೀ. ಕಿರಣ್ ಕುಮಾರ್. ಇ. ವೈ, ಪೊಲೀಸ್ ನಿರೀಕ್ಷಕರು, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಆರೋಪಿತರ ಪತ್ತೆಕಾರ್ಯಕ್ಕೆ ಶ್ರೀ. ಹಾರೂನ್ ಅಖರ್, ಪಿಎಸ್‌ಐ ನೇತೃತ್ವದ ಪೊಲೀಸ್ ತಂಡ ಹಾಗೂ ದಾವಣಗೆರೆ ಜಿಲ್ಲಾ ಡಾಗ್ ಸ್ಟಾಡ್ ಕೈಂ ವಿಭಾಗದ “ತಾರಾ\” ಎಂಬ ಶ್ವಾನವು ಸುಮಾರು 08 ಕಿ.ಮೀ ಕ್ರಮಿಸಿ ಆರೋಪಿತರ ಗುರುತು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತದೆ. ನಂತರ ದಿನಾಂಕ: 07-08-2023 ರಂದು ರಾತ್ರಿ ಕೊಲೆ ಪ್ರಕರಣದ ಆರೋಪಿತನಾದ ಶಿವಯೋಗಿಶ್ @ ಯೋಗಿ, 32 ವರ್ಷ, ಶ್ರೀರಾಮನಗರ, ದಾವಣಗೆರೆ ದಸ್ತಗಿರಿ ಮಾಡಿದ್ದು, ಹೆಚ್ಚಿನ ವಿಚಾರಣೆ ಮಾಡಲಾಗಿ ಆರೋಪಿತ ಶಿವಯೋಗಿಶ್ @ ಯೋಗಿ ಈತನು ತನ್ನ ಬಳಿ ನರಸಿಂಹ 35,000/-ರೂಗಳನ್ನು ಕೆಲಸದ ಅಡ್ವಾನ್ಸ್ ಆಗಿ ತೆಗೆದುಕೊಂಡು ಕೆಲಸಕ್ಕೂ ಬಾರದೇ ವಾಪಾಸ್ ಹಣವನ್ನು ಕೊಡದೆ ಸತಾಯಿಸುತ್ತಿದ್ದರಿಂದಲೂ ಮತ್ತು ಅವನ ಮೇಲೆ ನಾವು ದಾವಣಗೆರೆ ವಿದ್ಯಾನಗರ ಸ್ಟೇಷನ್ ನಲ್ಲಿ ಕೇಸು ಮಾಡಿದ್ದರಿಂದ ಜೈಲಿಗೆ ಹೋಗಿ ಬಂದ ಸಿಟ್ಟಿನಿಂದಲೂ ನಮ್ಮ ಮೇಲೆ ದ್ವೇಷ ಸಾಧಿಸುತ್ತಿದ್ದರಿಂದ ಹಾಗೂ ಇವನನ್ನು ಹೀಗೆ ಬಿಟ್ಟರೆ ಮುಂದೊಂದು ದಿನ ಅವನು ನನ್ನನ್ನು ಕೊಲೆ ಮಾಡುವ ಭಯದಿಂದ ನರಸಿಂಹನನ್ನು ದಿನಾಂಕ: 06-08-2023 ರಂದು ರಾತ್ರಿ 10:00 ಗಂಟೆಗೆ ಎನ್.ಹೆಚ್-48 ರಸ್ತೆ ಪಕ್ಕದ ಮಲ್ಲಶೆಟ್ಟಿಹಳ್ಳಿ ಬಾಪೂಜಿ ಬಡಾವಣೆ ಸರ್ವಿಸ್ ರಸ್ತೆ ಪಕ್ಕದಲ್ಲಿ ಕಟ್ಟಿಗೆ ಕಣಿಗೆಯಿಂದ ನರಸಿಂಹನ ಕಿವಿ, ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿರುತ್ತೇನೆಂದು ತಪ್ಪೋಪಿಕೊಂಡಿದ್ದು, ಸದರಿ ಆರೋಪಿತನನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿರುತ್ತದೆ.
ಪ್ರಕರಣದ ಆರೋಪಿತರ ಪತ್ತೆಗೆ ಕಾರ್ಯದಲ್ಲಿ ಯಶಸ್ವಿಯಾದ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿ ಶ್ರೀ ಕಿರಣ್ ಕುಮಾರ್, ಇ.ವೈ ಪೊಲೀಸ್ ನಿರೀಕ್ಷಕರು, ಶ್ರೀ. ಹಾರೂನ್ ಅಖರ್, ಪಿಎಸ್‌ಐ, ಶ್ರೀ. ನಾರಪ್ಪ, ಎ.ಎಸ್.ಐ, ಮತ್ತು ಸಿಬ್ಬಂದಿಯವರಾದ ಶ್ರೀ ಜಗದೀಶ, ಮಂಜುನಾಥ, ಮಹೇಶ್, ವಿಶ್ವನಾಥ, ಅಣ್ಣಯ್ಯ, ಶ್ರೀ ಮಂಜುನಾಥ ನಾಯ್ಕ, ಶ್ರೀ. ದೇವೆಂದ್ರನಾಯ್ಕ, ಪ್ರಕಾಶ ಕೆ.ಎಂ., ಪ್ರವೀಣ ಅಂತರವಳ್ಳಿ ರವರನ್ನು ಮಾನ್ಯ ಡಾ. ಅರುಣ್ ಕೆ., ಐಪಿಎಸ್, ಪೊಲೀಸ್ ಅಧೀಕ್ಷಕರು, ದಾವಣಗೆರೆ ಜಿಲ್ಲೆ, ದಾವಣಗೆರೆ ರವರು ಶ್ಲಾಘಿಸಿರುತ್ತಾರೆ.