ದಿನಾಂಕ:04/08/2023 ರಂದು ಪಿರ್ಯಾದಿ ಅಂಜಿನಪ್ಪ ಇವರು ಠಾಣೆಗೆ ಹಾಜರಾಗಿ ಯಾರೋ ಕಳ್ಳರು ಆನಗೋಡು ಬಳಿ ಇರುವ ಪೆಟ್ಟಿ ಅಂಗಡಿಯ ಬೀಗ ಮುರಿದು 20,500/- ನಗದು ಹಣ ಮತ್ತು 2000/- ರೂ ಬೆಲೆಯ ಗುಟ್ಕಾ ಸಿಗರೇಟುಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಪತ್ತೆ ಮಾಡಿಕೊಡಿ ಅಂತ ನೀಡಿದ ದೂರಿನ ಮೇರೆಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ಗುನ್ನೆ ನಂ:257/2023, ಕಲಂ: 457, 380 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ನಂತರ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಆರ್.ಬಿ ಬಸರಗಿ ರವರು ಮತ್ತು ದಾವಣಗೆರೆ ಗ್ರಾಮಾಂತರ ಉಪ- ವಿಭಾಗದ ಪೊಲೀಸ್ ಉಪಾಧೀಕ್ಷಕರವರಾದ ಶ್ರೀ ಬಿ.ಎಸ್.ಬಸವರಾಜ ರವರ ಮಾರ್ಗದರ್ಶನದಲ್ಲಿ ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಕಿರಣ್ ಕುಮಾರ್ ಇ.ವೈ ರವರ ನೇತೃತ್ವದಲ್ಲಿ ಪಿಎಸ್‌ಐ ಶ್ರೀ ಜೋವಿತ್‌ರಾಜ್ ಮತ್ತು ಪಿಎಸ್‌ಐ ಶ್ರೀ ಹರೂನ್ ಅಕ್ತರ್ ಮತ್ತು ಠಾಣಾ ಸಿಬ್ಬಂದಿಯವರಾದ ದೇವೇಂದ್ರನಾಯ್ಕ, ಅಣ್ಣಯ್ಯ, ಮಹಮ್ಮದ್‌ಯುಸುಫ್ ಅತ್ತಾರ್, ವೀರೇಶ್, ಇವರೊಂದಿಗೆ ಆರೋಪಿತರಾದ 1)-ಶಶಿಕುಮಾರ್ @ S. 19ವರ್ಷ, ವಾಸ: ಮುದೋಳ್ ತಾಲ್ಲೂಕು, ಬಾಗಲಕೋಟೆ ಜಿಲ್ಲೆ. 2) ಸಾಹೀಲ್ ( ಅಡ್ಡ 19ವರ್ಷ, ವಾಸ: ದಾವಣಗೆರೆ, 3) ರಾಮ್ ಸುಂದರ್ ಸೈಕೋ @ ಇಡ್ಲಿ, 21ವರ್ಷ, ವಾಸ: ದಾವಣಗೆರೆ. 4)ಅಂಜಿನಿ @ ಅಂಜು@ ಕುಂಟಾ 21ವರ್ಷ, ವಾಸ: ಲೆನಿನ್ ನಗರ, ದಾವಣಗೆರೆ, 5) ಅರುಣ @ ಮುಲ್ಲಾ, 19ವರ್ಷ, ವಾಸ: ದಾವಣಗೆರೆ ಇವರುಗಳನ್ನು ವಶಕ್ಕೆ ಪಡೆದು ಬೆಂಗಳೂರು ಗಿರಿನಗರ ಪೊಲೀಸ್ ಠಾಣೆ ಗುನ್ನೆ ನಂ:317/2023, ಕಲಂ:379 ಐಪಿಸಿ ಕೇಸಿನಲ್ಲಿ ಕಳುವಾಗಿದ್ದ ಬೈಕ್‌ನ್ನು ಪತ್ತೆ ಮಾಡಿದ್ದು, ಆರೋಪಿತರು ಕೃತ್ಯಕ್ಕೆ ಉಪಯೋಗಿಸಿದ್ದ 02 ಬೈಕ್‌ಗಳು ಮತ್ತು 5200/- ರೂ ನಗದು ಹಣ ಸೇರಿದಂತೆ 2,05,200/- ರೂ ಮೌಲ್ಯದ ಸ್ವತ್ತನ್ನು ಅಮಾನತ್ತುಪಡಿಸಿಕೊಂಡಿದ್ದು ಆರೋಪಿತರನ್ನು ಘನ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ
ಬಂಧನದಲ್ಲಿರಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಆರೋಪಿತರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಅರುಣ್ ಕೆ., ಐಪಿಎಸ್, ರವರು ಪ್ರಶಂಸನೆ ವ್ಯಕ್ತಪಡಿಸಿರುತ್ತಾರೆ.