ದಿನಾಂಕ: 05.08.2023 ರಂದು ರಾತ್ರಿ ಜಗಳೂರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ(ಕೆ.ಇ.ಬಿವೃತ್ತ) ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಗೋಡೆಯಲ್ಲಿ ಅಳವಡಿಸಿದ್ದ ಹುಂಡಿಯನ್ನು ಯಾರೋ ಕಳ್ಳರು ಹೊಡೆದು, ಸುಮಾರು 30,000/- ರೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಜಗಳೂರು ಪೊಲೀಸ್ ಠಾಣೆಯಲ್ಲಿ ದಿನಾಂಕ: 06.08.2023 ರಂದು ಗುನ್ನೆ ನಂ:193/2023, ಕಲಂ:457.380ಐಪಿಸಿ ರೀತ್ಯ ಪ್ರಕರಣ ದಾಖಲಾಗಿದ್ದು ಇರುತ್ತದೆ.
ಪ್ರಕರಣದ ಆರೋಪಿತರ ಪತ್ತೆಕಾರ್ಯವನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಆರ್.ಬಿ.ಬಸರಗಿ, ಕೆ.ಎಸ್.ಪಿ.ಎಸ್ ಹಾಗೂ ದಾವಣಗೆರೆ ಗ್ರಾಮಾಂತರ ಉಪ-ವಿಭಾಗದ ಡಿವೈಎಸ್‌ಪಿ ರವರಾದ ಶ್ರೀ ಬಿ.ಎಸ್.ಬಸವರಾಜ ರವರ ಮಾರ್ಗದರ್ಶನದಲ್ಲಿ ಜಗಳೂರು ಠಾಣೆಯ ಪಿಐ ಶ್ರೀನಿವಾಸರಾವ್ ನೇತೃತ್ವದಲ್ಲಿ ಪಿಎಸ್‌ಐ ಸಾಗರ್ ಹಾಗೂ ಅಪರಾಧ ಪತ್ತೆದಳದ ಸಿಬ್ಬಂದಿರವರನ್ನು ಒಳಗೊಂಡ ತಂಡವು ದಿನಾಂಕ: 14.08.2023 ರಂದು ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸದಂತೆ ಆರೋಪಿತ ಹನುಮಂತ @ ಲಂಕೆ ಹನುಮಂತ, 47 ವರ್ಷ, ಕೂಲಿ ಕೆಲಸ ವಾಸ: ಜಗಳೂರು ತಾ|| ಈತನನ್ನು ದಸ್ತಗಿರಿ ಮಾಡಿದ್ದು, ಈತನಿಂದ 1) 8065/- ರೂ ನಗದು ಹಣ. 2) ಒಂದು ಕಬ್ಬಿಣದ ರಾಡು, 3) ಒಂದು ಗೋಡೆ ಗಡಿಯಾರವನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಜಗಳೂರು ಪೊಲೀಸ್ ಠಾಣೆ ಶ್ರೀನಿವಾಸರಾವ್.ಎಂ, ಪಿಐ, ಶ್ರೀ ಸಾಗರ್.ಎಸ್.ಡಿ, ಪಿಎಸ್‌ಐ ಹಾಗು ಸಿಬ್ಬಂದಿವರ್ಗದವರಾದ 1) ಶ್ರೀನಿವಾಸ, 2) ನಾಗಭೂಷಣ, 3) ಬಸವರಾಜ, 4) ಮಾರೆಪ್ಪಬಿ ರವರುಗಳನ್ನು ಮಾನ್ಯ ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಡಾ. ಅರುಣ್ ಕೆ., ಐಪಿಎಸ್ ರವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.