ಮಾಗಡಿ ರಸ್ತೆ ಪೊಲೀಸ್ ಠಾಣಾ ಸರಹದ್ದಿನ ಪಿ.ಜಿ ಯೊಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಅರೋಪಿಯ ತಾಯಿ ಹಾಗೂ ಅಡುಗೆ ಕೆಲಸ ಮಾಡುವ ಮತ್ತೊಬ್ಬ ಅಸಾಮಿಯು ಅರೋಪಿಯ ತಾಯಿಯೊಂದಿಗೆ ಅನ್ನೋನ್ಯವಾಗಿ ಇದ್ದರು ಇಂಬ ಕಾರಣದಿಂದ. ಅಡುಗೆ ಮಾಡುವವನನ್ನು ಆರೋಪಿಯು ಮನೆಗೆ ಕರೆಸಿಕೊಂಡು ಚೂರಿಯಿಂದ ಎದೆ ಹಾಗೂ ಹೊಟ್ಟೆಯ ಭಾಗಕ್ಕೆ ಹಲವಾರು ಬಾರಿ ಚುಚ್ಚಿ ಕೊಲೆ ಮಾಡಿರುತ್ತಾರೆಂದು ಪಿರ್ಯಾದುದಾರರು ಕೊಟ್ಟ ದೂರಿನ ಅನ್ವಯ, ಕಾರ್ಯ ಪ್ರವೃತ್ತರಾದ ಮಾಗಡಿ ರಸ್ತೆ ಪೊಲೀಸರು ದಿನಾಂಕ:- 31/07/2023 ರಂದು ಕಲಬುರಗಿ ನಗರದಲ್ಲಿ ಅರೋಪಿಯನ್ನು ದಸ್ತಗಿರಿ ಮಾಡಿ ಕೊಲೆ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.
ಕಾರ್ಯಾಚರಣೆಯನ್ನು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರವರಾದ ಲಕ್ಷ್ಮಣ್, ಬಿ ನಿಂಬರಗಿ ರವರ ನೇತೃತ್ವದಲ್ಲಿ, ಶ್ರೀ ರವಿ.ಪಿ. ಸಹಾಯಕ ಪೊಲೀಸ್ ಆಯುಕ್ತರು, ವಿಜಯನಗರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ, ಮಾಗಡಿರಸ್ತೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ರಾಜು, ಎಂ.ಎಸ್. ಹಾಗೂ ಸಿಬ್ಬಂದಿಯವರುಗಳು ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಮೇಲ್ಕಂಡ ಅಧಿಕಾರಿಗಳ ಮತ್ತು ಸಿಬ್ಬಂದಿಯವರುಗಳ ಕರ್ತವ್ಯವನ್ನು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ.ಬಿ.ದಯಾನಂದ ಮತ್ತು ಅಪರ ಪೊಲೀಸ್ ಆಯುಕ್ತರು ಪಶ್ಚಿಮ ಶ್ರೀ. ಎನ್.ಸತೀಶ್ ಕುಮಾರ್ ರವರು ಪ್ರಶಂಸಿರುತ್ತಾರೆ.